Advertisement

ಚಾಂಪಿಯನ್ಸ್‌  ಟ್ರೋಫಿಗೂ ಮುನ್ನ  ಡೆತ್‌ ಬೌಲಿಂಗ್‌ ಸುಧಾರಣೆ: ಕೊಹ್ಲಿ

03:45 AM Jan 24, 2017 | |

ಕೋಲ್ಕತಾ: ಪ್ರತಿಷ್ಠಿತ ಚಾಂಪಿಯನ್ಸ್‌ ಟ್ರೋಫಿ’ಗೂ ಮುನ್ನ ಭಾರತ ತನ್ನ ಕೊನೆಯ ಏಕದಿನ ಪಂದ್ಯವನ್ನು ರವಿವಾರ ಆಡಿದೆ. ಇದರೊಂದಿಗೆ ಇಂಗ್ಲೆಂಡ್‌ ವಿರುದ್ಧ 3 ಪಂದ್ಯಗಳ ಏಕದಿನ ಸರಣಿ ಯನ್ನೂ ಮುಗಿಸಿದೆ. 5 ರನ್‌ ಸೋಲಿನಿಂದಾಗಿ ಕೊಹ್ಲಿ ಪಡೆಯ ಸರಣಿ ಗೆಲುವಿನ ಅಂತರ 2-1ಕ್ಕೆ ಇಳಿದಿದೆ. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಕೊಹ್ಲಿ, ಡೆತ್‌ ಓವರ್‌ಗಳಲ್ಲಿ ಭಾರತದ ಬೌಲಿಂಗ್‌ ಸಮಸ್ಯೆ ಯನ್ನು ತೆರೆದಿಟ್ಟಿದ್ದಾರೆ. ಮುಂದಿನ ಟಿ-20 ಸರಣಿ ವೇಳೆ ಈ ಸಮಸ್ಯೆ ಬಗೆಹರಿಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

“ಚಾಂಪಿಯನ್ಸ್‌ ಟ್ರೋಫಿಗೂ ಮುನ್ನ ನಾವು ಆಡಿದ ಕೊನೆಯ ಏಕದಿನ ಪಂದ್ಯವಿದು. ಮುಂದಿನದೆಲ್ಲ ಟಿ-20 ಪಂದ್ಯಗಳು. ಚಾಂಪಿಯನ್ಸ್‌ ಟ್ರೋಫಿ ಅಭ್ಯಾಸಕ್ಕೆ ಟಿ-20 ಮಾದರಿಯಿಂದ ತೊಂದರೆ ಏನಿಲ್ಲ. ಹೆಚ್ಚೆಚ್ಚು ಟಿ-20 ಪಂದ್ಯ ಆಡುವುದರಿಂದ ನಮ್ಮ ಡೆತ್‌ ಓವರ್‌ ಬೌಲಿಂಗ್‌ ನಿಯಂತ್ರಣಕ್ಕೆ ಬರುವ ಸಾಧ್ಯತೆ ಇದೆ. ಹೀಗಾಗಿ ನಮ್ಮ ಪಾಲಿಗೆ ಟಿ-20 ಸರಣಿ ಕೂಡ ಲಾಭದಾಯಕವೇ. ಏಕದಿನಕ್ಕಿಂತ ಬಿರುಸಿನ ಬ್ಯಾಟಿಂಗ್‌ ಇಲ್ಲಿ ಕಂಡುಬರುತ್ತದೆ. ಇಂಥ ಸಂದರ್ಭದಲ್ಲಿ ಬೌಲರ್‌ಗಳು ನಿಯಂತ್ರಣ ಸಾಧಿಸಿದರೆ ಅದರಿಂದ ತಂಡಕ್ಕೆ ಹೆಚ್ಚು ಪ್ರಯೋಜನ…’ ಎಂದರು.

ಏಕದಿನ ಸರಣಿಯ ಮೂರೂ ಪಂದ್ಯಗಳು ಕೇವಲ ಬ್ಯಾಟಿಂಗಿಗಷ್ಟೇ ಮೀಸಲಾದ ಟ್ರ್ಯಾಕ್‌ಗಳಲ್ಲಿ ನಡೆದಿರುವುದರಿಂದ ಬೌಲರ್‌ಗಳು ದಂಡಿಸಿ ಕೊಂಡದ್ದು ಸಹಜ. ಆದರೆ ಚಾಂಪಿಯನ್ಸ್‌ ಟ್ರೋಫಿ ಇಂಗ್ಲೆಂಡ್‌ನ‌ಲ್ಲಿ ನಡೆಯಲಿದ್ದು, ಅಲ್ಲಿನ ಟ್ರ್ಯಾಕ್‌ಗಳು ಸೀಮರ್‌ಗಳಿಗೆ ಹೆಚ್ಚಿನ ನೆರವು ನೀಡುವ ವಿಶ್ವಾಸವಿದೆ.

ಓಪನರ್‌ಗಳ ವೈಫ‌ಲ್ಯ
ಇಂಥ ಅಪ್ಪಟ ಬ್ಯಾಟಿಂಗ್‌ ಟ್ರ್ಯಾಕ್‌ಗಳಲ್ಲೂ ಭಾರತದ ಓಪನಿಂಗ್‌ ದಯನೀಯ ವೈಫ‌ಲ್ಯ ಕಂಡ ಬಗ್ಗೆ ಪ್ರತಿಕ್ರಿಯಿಸಿದ ಕೊಹ್ಲಿ, “ಇದು ಕೇವಲ ಒಂದೆರಡು ಇನ್ನಿಂಗ್ಸ್‌ಗಳ ಪ್ರಶ್ನೆ. ಅವರಿಗೆ ಫಾರ್ಮ್ ಕಂಡುಕೊಳ್ಳಲು ಅವ ಕಾಶ ಕಲ್ಪಿಸಬೇಕು. ನಿಜಕ್ಕಾದರೆ ನಮ್ಮ ಸಮಸ್ಯೆ ಏನಿದ್ದರೂ ಮಧ್ಯಮ ಕ್ರಮಾಂಕದ್ದಾಗಿತ್ತು. ಈಗ ಬಗೆಹರಿದಿದೆ…’ ಎಂದರು.

ಎಕ್ಸ್‌ಟ್ರಾ ಇನ್ನಿಂಗ್ಸ್‌
ಭಾರತ-ಇಂಗ್ಲೆಂಡ್‌ ನಡುವಿನ ಈ ಸರಣಿಯಲ್ಲಿ 2,090 ರನ್‌ ಒಟ್ಟುಗೂಡಿತು. ಇದು 3 ಅಥವಾ ಅದಕ್ಕಿಂತ ಕಡಿಮೆ ಪಂದ್ಯಗಳ ಸರಣಿಯಲ್ಲಿ ಸಂಗ್ರಹಗೊಂಡ ಅತ್ಯಧಿಕ ರನ್‌. ಹಿಂದಿನ ದಾಖಲೆ 2007ರ ಆಫೊÅà-ಏಶ್ಯ ಕಪ್‌ ಕೂಟದಲ್ಲಿ ದಾಖಲಾಗಿತ್ತು (3 ಪಂದ್ಯ, 1,892 ರನ್‌).

Advertisement

ಈ ಸರಣಿಯ ಎಲ್ಲ 6 ಇನ್ನಿಂಗ್ಸ್‌ಗಳಲ್ಲಿ 300 ಪ್ಲಸ್‌ ರನ್‌ ಒಟ್ಟುಗೂಡಿತು. ದ್ವಿಪಕ್ಷೀಯ ಸರಣಿಯೊಂದರಲ್ಲಿ 6 ಹಾಗೂ ಅದಕ್ಕಿಂತ ಹೆಚ್ಚಿನ 300 ಪ್ಲಸ್‌ ರನ್‌ ಸಂಗ್ರಹಗೊಂಡ 3ನೇ ದೃಷ್ಟಾಂತ ಇದಾಗಿದೆ. ಆದರೆ ಉಳಿದೆಲ್ಲವೂ ಕನಿಷ್ಠ 5 ಪಂದ್ಯಗಳ ಸರಣಿಯಲ್ಲಿ ದಾಖ ಲಾಗಿದ್ದವು. ಭಾರತ-ಆಸ್ಟ್ರೇಲಿಯ ನಡುವಿನ 2013ರ ಸರಣಿಯಲ್ಲಿ 9 ಸಲ 300 ಪ್ಲಸ್‌ ರನ್‌ ಒಟ್ಟುಗೂಡಿದ್ದು ದಾಖಲೆ.

ಪ್ರಸಕ್ತ ಸರಣಿಯಲ್ಲಿ ಕೇದಾರ್‌ ಜಾಧವ್‌ ಅವರ ಸ್ಟ್ರೈಕ್‌ರೇಟ್‌ 144.09 (ಕನಿಷ್ಠ 150 ಎಸೆತ ಎದುರಿಸಿದ ಮಾನದಂಡ). ಇದು ಭಾರತೀಯನೊಬ್ಬನ 3ನೇ ಅತ್ಯುತ್ತಮ ಸ್ಟ್ರೈಕ್‌ರೇಟ್‌. ಮೊದಲೆರಡು ಸ್ಥಾನದಲ್ಲಿರುವವರು ವೀರೇಂದ್ರ ಸೆಹವಾಗ್‌ (150.25, ನ್ಯೂಜಿ ಲ್ಯಾಂಡ್‌ ವಿರುದ್ಧ, 2008-09) ಮತ್ತು ರೋಹಿತ್‌ ಶರ್ಮ (147.66, ಶ್ರೀಲಂಕಾ ವಿರುದ್ಧ, 2014-15).

ಕೇದಾರ್‌ ಜಾಧವ್‌ ಈ ಸರಣಿಯಲ್ಲಿ ಸರ್ವಾ ಧಿಕ 232 ರನ್‌ ಗಳಿಸಿದರು. ಸರಾಸರಿ 77.33.

ಬೆನ್‌ ಸ್ಟೋಕ್ಸ್‌ ಪಂದ್ಯವೊಂದರಲ್ಲಿ ಅರ್ಧ ಶತಕದ ಜತೆಗೆ 3 ವಿಕೆಟ್‌ ಕಿತ್ತರು. ಇಂಗ್ಲೆಂಡ್‌ ಕ್ರಿಕೆಟಿಗರ ಆಲ್‌ರೌಂಡ್‌ ಸಾಧನೆಯ 15ನೇ ದೃಷ್ಟಾಂತವಾಗಿದೆ.

ವಿರಾಟ್‌ ಕೊಹ್ಲಿ ನಾಯಕತ್ವದಲ್ಲಿ ಭಾರತ ಮೊದಲ ಸಲ ತವರಿನಲ್ಲಿ ಸೋಲನುಭ ವಿಸಿತು. ಇದಕ್ಕೂ ಹಿಂದಿನ ಸತತ 19 ಪಂದ್ಯಗಳಲ್ಲಿ ಭಾರತ ಅಜೇಯವಾಗಿತ್ತು. 10 ಟೆಸ್ಟ್‌ ಹಾಗೂ 7 ಏಕದಿನ ಪಂದ್ಯಗಳಲ್ಲಿ ಜಯಿಸಿದ ಭಾರತ, 2 ಟೆಸ್ಟ್‌ಗಳನ್ನು ಡ್ರಾ ಮಾಡಿಕೊಂಡಿತ್ತು.

ಕೊಹ್ಲಿ ನಾಯಕನಾಗಿ ಅತೀ ಕಡಿಮೆ 17 ಇನ್ನಿಂಗ್ಸ್‌ಗಳಲ್ಲಿ ಸಾವಿರ ರನ್‌ ಪೂರ್ತಿ ಗೊಳಿಸಿದರು. ಎಬಿ ಡಿ ವಿಲಿಯರ್ 18 ಇನ್ನಿಂಗ್ಸ್‌ಗಳಲ್ಲಿ ಸಾವಿರ ರನ್‌ ಪೇರಿಸಿದ ದಾಖಲೆ ಪತನಗೊಂಡಿತು. ಈ ಅವಧಿಯಲ್ಲಿ ಕೊಹ್ಲಿ ಸಾಧನೆ: 69 ಸರಾಸರಿ, 100.77 ಸ್ಟ್ರೈಕ್‌ರೇಟ್‌, 5 ಶತಕ, 4 ಅರ್ಧ ಶತಕ).

ಭಾರತ-ಇಂಗ್ಲೆಂಡ್‌ ನಡುವಿನ ಪಂದ್ಯ 3ನೇ ಅತೀ ಕಡಿಮೆ ರನ್‌ ಅಂತರದ ಫ‌ಲಿತಾಂಶಕ್ಕೆ ಸಾಕ್ಷಿಯಾಯಿತು (5 ರನ್‌). ಇದಕ್ಕೂ ಮುನ್ನ 1984ರ ಕಟಕ್‌ ಪಂದ್ಯದಲ್ಲಿ ಒಂದು ರನ್‌, 2002ರ ಹೊಸದಿಲ್ಲಿ ಪಂದ್ಯದಲ್ಲಿ 2 ರನ್‌ ಫ‌ಲಿತಾಂಶ ಕಂಡುಬಂದಿತ್ತು. ಇವೆರಡೂ ಇಂಗ್ಲೆಂಡ್‌ ಪರವಾಗಿದ್ದವು.

ಈಡನ್‌ನಲ್ಲಿ ಆಡಲಾದ ಸತತ 5 ಅಹರ್ನಿಶಿ ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ತಂಡವೇ ಜಯ ಸಾಧಿಸಿತು.

Advertisement

Udayavani is now on Telegram. Click here to join our channel and stay updated with the latest news.

Next