Advertisement

ಆತ್ಮೀಯತೆಯಿದ್ದರೆ ಸಮಾಜ ಅಭಿವೃದ್ಧಿ ಸಾಧ್ಯ

12:18 PM Oct 06, 2017 | |

ತಾಳಿಕೋಟೆ: ಪ್ರತಿಯೊಬ್ಬರಲ್ಲಿಯೂ ದ್ವೇಷ ಅಸೂಯೆಗಳನ್ನು ಇಟ್ಟುಕೊಳ್ಳಬಾರದು. ಸಾಮಾಜಿಕವಾಗಿ ಯಾರೇ ಬೆಳೆದರು ಅವನು ನಮ್ಮವ ಎಂಬ ಆತ್ಮೀಯತೆ ಯಿಂದ ನಡೆದುಕೊಳ್ಳುತ್ತಾ ಸಾಗಿದರೆ ಸಮಾಜದಲ್ಲಿ ಒಗ್ಗಟ್ಟು ಮೂಡುವುದರೊಂದಿಗೆ ಸಮಾಜ ಅಭಿವೃದ್ಧಿಯತ್ತ ಸಾಗಲು ಸಾಧ್ಯ ಎಂದು ವಾಲ್ಮೀಕಿ ಸಮಾಜದ ಅಧ್ಯಕ್ಷ ಎಲ್‌.ಬಿ. ಕೊಡೇಕಲ್ಲ ಹೇಳಿದರು.

Advertisement

ವಾಲ್ಮೀಕಿ ಸಮಾಜದ ವತಿಯಿಂದ ವಾಲ್ಮೀಕಿ ಸಮುದಾಯ ಭವನದ ನಿರ್ಮಾಣದ ಜಾಗದಲ್ಲಿ ಏರ್ಪಡಿಸಲಾದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಹರ್ಷಿ ವಾಲ್ಮೀಕಿ ಅವರು ರಾಮಾಯಣ ಬರೆಯುವುದರ ಮೂಲಕ ಎಲ್ಲ ಸಮಾಜಗಳ ಅಂಕುಡೊಂಕುಗಳನ್ನು ತಿದ್ದಿದ್ದಾರೆ. ಅಂತಹ ದೇವ ಸ್ವರೂಪಿಯನ್ನು ಹೊಂದಿರುವ ಮಹಿರ್ಷಿ ವಾಲ್ಮೀಕಿ ಸಮಾಜದವರಾದ ನಾವು ಎಲ್ಲ ಸಮಾಜಬಾಂಧವರೊಂದಿಗೆ ಪ್ರೀತಿ ವಿಶ್ವಾಸಗಳಿಸಿಕೊಳ್ಳಬೇಕಾಗಿದೆ ಎಂದ ಅವರು, ಸಮಾಜದ ಜನರಲ್ಲಿ ಒಗ್ಗಟ್ಟು ಎಂಬುದು ಹೆಚ್ಚಾದಂತೆ ಸಮಾಜವು ಅಭಿವೃದ್ಧಿ ಹೊಂದುತ್ತಾ ಮುನ್ನಡೆಯುತ್ತದೆ ಎಂದು ಮಹರ್ಷಿ ಮಾಲ್ಮೀಕಿಯವರ ಜೀವನ ಚರಿತ್ರೆಯನ್ನು
ಮಾರ್ಮಿಕವಾಗಿ ವಿವರಿಸಿದರು. 

ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಸಮಾಜದ ಮುಖಂಡರು ಪುಷ್ಪಹಾರ ಹಾಕಿ ಗೌರವಿಸಿ, ಪೂಜೆ ಸಲ್ಲಿಸಿದರು. ವಾಲ್ಮೀಕಿ ಸಮಾಜದ ಕಾರ್ಯದರ್ಶಿ ಕಾಶಿನಾಥ ಪಾಟೀಲ, ಯಮನೂರಿ ಬರದೇನಾಳ, ಅಶೋಕ ಸಿನೇಸಪೂರ, ಹಣಮಂತ್ರಾಯ ಬಾಗೇವಾಡಿ, ಮಂಜುನಾಥ ಬರದೇನಾಳ, ಬಸವರಾಜ ದೇವದುರ್ಗ, ಸಂಗು ಇಂಗಳಗಿ, ರಾಮು ಪಾಟೀಲ, ರಮೇಶ ಮುದ್ದೇಬಿಹಾಳ, ರಮೇಶ ಇಂಗಳಗಿ, ಮಹಾಂತೇಶ ಬಾಗೇವಾಡಿ, ಕಾಶಿನಾಥ ಒಡಗೇರಿ, ವಾಸು ಕ್ವಾಟಿ, ಭೀಮಣ್ಣ ಬಡಿಗೇರ, ಸದಾನಂದ ಅಂಬಳನೂರ, ಮಹಾದೇವಪ್ಪ ಒಣಕ್ಯಾಳ, ಮಲ್ಲು ಬೆಸಟ್ಯಾಳ, ಪರಶುರಾಮ ಗುಡದಿನ್ನಿ, ಯಮನಪ್ಪ ನಾಗೂರ, ಮಹಾಂತಪ್ಪ ವಠಾರ, ಮಹಮಂತರಾಯ ಮೇಲಿನಮನಿ ಮೊದಲಾದವರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next