ನವದೆಹಲಿ:ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಹಾಗೂ ಪಿಂಚಣಿದಾರರ ತುಟ್ಟಿಭತ್ಯೆಯನ್ನು 2021ರ ಜುಲೈ1ರಿಂದಲೇ ಅನ್ವಯವಾಗುವಂತೆ ಶೇ.17ರಿಂದ ಶೇ.28ಕ್ಕೆ ಹೆಚ್ಚಳ ಮಾಡಿರುವುದಾಗಿ ಕೇಂದ್ರ ಸರ್ಕಾರ ಬುಧವಾರ(ಜುಲೈ 14) ತಿಳಿಸಿದೆ.
ಇದನ್ನೂ ಓದಿ:ದೈವಸ್ಥಾನ ವಠಾರದಲ್ಲಿ ಕ್ರಿಕೆಟ್ ಆಡಿದ್ದಕ್ಕೆ ಆಕ್ಷೇಪ: ಮಾತುಕತೆ ಮೂಲಕ ಪ್ರಕರಣ ಸುಖಾಂತ್ಯ
ಕೋವಿಡ್ 19 ಸೋಂಕಿನ ಪರಿಣಾಮ ಕಳೆದ ವರ್ಷ ಕೇಂದ್ರ ಸರ್ಕಾರಿ ನೌಕರರ ಮತ್ತು ಪಿಂಚಣಿದಾರರ ತುಟ್ಟಿಭತ್ಯೆ ಮತ್ತು ತುಟ್ಟಿಭತ್ಯೆ ನೆರವನ್ನು ಹೆಚ್ಚಳ ಮಾಡಿಲ್ಲವಾಗಿತ್ತು. ಇದೀಗ ಕೇಂದ್ರ ಸರ್ಕಾರಿ ನೌಕರರಿಗೆ ಸಂತಸದ ಸುದ್ದಿಯನ್ನು ನೀಡಿದೆ.
2021ರ ಜುಲೈ 1ರಿಂದ ಕೇಂದ್ರ ಸರ್ಕಾರಿ ನೌಕರರ ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು ಶೇ.17ರಿಂದ ಶೇ.28ಕ್ಕೆ ಏರಿಕೆ ಮಾಡಲು ನಿರ್ಧರಿಸಲಾಗಿದೆ. ಇದರಿಂದ ಈ ಹಿಂದಿನ ಶೇ.17ಕ್ಕಿಂತ, ಶೇ.11ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಿದಂತಾಗಿದೆ ಎಂದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಕೇಂದ್ರ ಸರ್ಕಾರಿ ನೌಕರರ ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು ಶೇ.28ಕ್ಕೆ ಏರಿಕೆ ಮಾಡಿದ್ದರಿಂದ ಅಂದಾಜು 34,400 ಕೋಟಿ ರೂಪಾಯಿಯಷ್ಟು ಹೆಚ್ಚುವರಿ ಹೊರೆಯಾಗಲಿದೆ. ಡಿಎ ಹೆಚ್ಚಳದಿಂದ 48,34,000 ಕೇಂದ್ರ ಸರ್ಕಾರಿ ನೌಕರರಿಗೆ ಹಾಗೂ 65,26,000 ಪಿಂಚಣಿದಾರರಿಗೆ ನೆರವಾಗಲಿದೆ.