ಕೋಲ್ಕತ್ತಾ: ಕೋವಿಡ್ -19 ಭೀತಿಯ ನಡುವೆ ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್) ಆರಂಭಕ್ಕೆ ಸಿದ್ದತೆ ನಡೆಯುತ್ತಿದೆ. ಐಪಿಎಲ್ ಕುರಿತಾದ ಚರ್ಚೆಗಳು ಆರಂಭವಾಗಿದೆ. ಆಸೀಸ್ ನ ಮಾಜಿ ಆಟಗಾರ ಡೀನ್ ಜೋನ್ಸ್ ಕೆಕೆಆರ್ ತಂಡದ ಬಗ್ಗೆ ಮಾತನಾಡಿದ್ದು, ಕೋಲ್ಕತ್ತಾ ತಂಡದ ಪರ ಯುವ ಆಟಗಾರ ಶುಭ್ಮನ್ ಗಿಲ್ ಇನ್ನಿಂಗ್ಸ್ ಆರಂಭಿಸಬೇಕು ಎಂದು ಹೇಳಿದ್ದಾರೆ.
ಈ ಬಾರಿಯ ಐಪಿಎಲ್ ನಲ್ಲಿ ಕೆಕೆಆರ್ ಪರ ಶುಭ್ಮನ್ ಗಿಲ್ ಇನ್ನಿಂಗ್ಸ್ ಆರಂಭಿಸಬೇಕು. ಈ ಬಾರಿ ಕೋಲ್ಕತ್ತಾ ತಂಡದಲ್ಲಿ ಈ ಅವಕಾಶವೂ ಇದೆ. ಹಾಗಾಗಿ ಯುವ ಆಟಗಾರನಿಗೆ ತಂಡ ಅವಕಾಶ ಕೊಡಬೇಕು ಎಂದು ಡೀನ್ ಜೋನ್ಸ್ ಹೇಳಿದ್ದಾರೆ.
ಕಳೆದ ಬಾರಿ ಆರಂಭಿಕನಾಗಿದ್ದ ಕ್ರಿಸ್ ಲಿನ್ ರನ್ನು ಕೆಕೆಆರ್ ಫ್ರಾಂಚೈಸಿ ಕೈಬಿಟ್ಟಿದೆ. ಹಾಗಾಗಿ ಶುಭ್ಮನ್ ಗಿಲ್ ಗೆ ಉತ್ತಮ ಅವಕಾಶವಿದೆ. ಅಂಡರ್ 19 ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ ಕಕೆಆರ್ ನಲ್ಲಿ ಇದುವರೆಗೆ ಒಳ್ಳೆಯ ಅವಕಾಶ ಸಿಗಲಿಲ್ಲ. ಸಿಕ್ಕ ಅವಕಾಶಗಳನ್ನು ಗಿಲ್ ಉಪಯೋಗಿಸಿಕೊಂಡಿದ್ದಾರೆ.
ಈ ಬಾರಿಯ ಐಪಿಎಲ್ ಸಪ್ಟೆಂಬರ್ 19ರಿಂದ ಯುಎಇ ನಲ್ಲಿ ನಡೆಯಲಿದೆ. ಶಾರುಖ್ ಖಾನ್ ಒಡೆತನದ ಕೆಕೆಆರ್ ತಂಡವನ್ನು ದಿನೇಶ್ ಕಾರ್ತಿಕ್ ಮುನ್ನಡೆಸಲಿದ್ದಾರೆ.