Advertisement

ಡೀನ್‌ ಎಲ್ಗರ್‌ “ಅಜೇಯ’ದಾಖಲೆ

06:00 AM Mar 24, 2018 | Team Udayavani |

ಕೇಪ್‌ಟೌನ್‌: ದಕ್ಷಿಣ ಆಫ್ರಿಕಾದ ಆರಂಭಕಾರ ಡೀನ್‌ ಎಲ್ಗರ್‌ ವಿಶಿಷ್ಟ ವಿಶ್ವ ದಾಖಲೆಯೊಂದನ್ನು ಸರಿದೂಗಿಸಿದ್ದಾರೆ. ಆಸ್ಟ್ರೇಲಿಯ ವಿರುದ್ಧದ ಕೇಪ್‌ಟೌನ್‌ ಟೆಸ್ಟ್‌ನಲ್ಲಿ ಆಫ್ರಿಕಾ ಇನ್ನಿಂಗ್ಸ್‌ ಕೊನೆಗೊಳ್ಳುವಾಗ ಅವರು 141 ರನ್‌ ಬಾರಿಸಿ ಔಟಾಗದೆ ಉಳಿದಿದ್ದರು. 

Advertisement

ಡೀನ್‌ ಎಲ್ಗರ್‌ ಈಗ ಟೆಸ್ಟ್‌ ಇತಿಹಾಸದಲ್ಲಿ ಸರ್ವಾಧಿಕ 3 ಸಲ ಪರಿಪೂರ್ಣಗೊಂಡ ಇನ್ನಿಂಗ್ಸಿನ ಕೊನೆಯ ವರೆಗೂ ಅಜೇಯವಾಗಿ ಉಳಿದ ವಿಶ್ವದ ಕೇವಲ 2ನೇ ಓಪನರ್‌ ಆಗಿದ್ದಾರೆ. ವೆಸ್ಟ್‌ ಇಂಡೀಸಿನ ಡೆಸ್ಮಂಡ್‌ ಹೇನ್ಸ್‌ ಮೊದಲಿಗ. ಡೀನ್‌ ಎಲ್ಗರ್‌ ಸಾಹಸದಿಂದ ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್‌ನಲ್ಲಿ 311 ರನ್‌ ಪೇರಿಸಿದೆ. ಬೆಳಕಿನ ಅಭಾವದಿಂದ 2ನೇ ದಿನ ದಾಟ ನಿಂತಾಗ ಆಸ್ಟ್ರೇಲಿಯ 9 ವಿಕೆಟಿಗೆ 245 ರನ್‌ ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next