ಕೇಪ್ ಟೌನ್: ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಶುಕ್ರವಾರ ಅಂತ್ಯವಾಗಿದೆ. ಮೂರು ಪಂದ್ಯಗಳ ಸರಣಿಯನ್ನು ದಕ್ಷಿಣ ಆಫ್ರಿಕಾ 2-1 ಅಂತರದಿಂದ ಗೆದ್ದುಕೊಂಡಿದೆ. ನಿರ್ಣಾಯಕ ಕೇಪ್ ಟೌನ್ ಟೆಸ್ಟ್ ಪಂದ್ಯದಲ್ಲಿ ಡೀನ್ ಎಲ್ಗರ್ ಪಡೆ ಏಳು ವಿಕೆಟ್ ಗಳ ಅಂತರದಿಂದ ಗೆಲುವು ಸಾಧಿಸಿತು.
ಪಂದ್ಯದ ಬಳಿಕ ದಕ್ಷಿಣ ಆಫ್ರಿಕಾ ನಾಯಕ ಡೀನ್ ಎಲ್ಗರ್ ಕೇಪ್ ಟೌನ್ ಪಂದ್ಯದ ಗೆಲುವಿನ ಬಗ್ಗೆ ಮಾತನಾಡಿದ್ದಾರೆ. ಭಾರತದ ಡಿಆರ್ ಎಸ್ ವಿವಾದದಿಂದ ನಮಗೆ ಗೆಲುವಿನ ಬಾಗಿಲು ತೆರೆಯಿತು ಎಂದು ಎಲ್ಗರ್ ಹೇಳಿದರು.
“ಡಿಆರ್ ಎಸ್ ವಿವಾದಿಂದ ಭಾರತೀಯ ಆಟಗಾರರು ಕೆಲ ಹೊತ್ತು ಪಂದ್ಯವನ್ನು ಮರೆತರು. ಇದು ನಮಗೆ ಸಹಾಯ ಮಾಡಿತು. ಇದರಿಂದಾಗಿ ನಾವು ಸುಲಭವಾಗಿ ರನ್ ಗಳಿಸಲು ಸಾಧ್ಯವಾಯಿತು” ಎಂದು ಡೀನ್ ಎಲ್ಗರ್ ಹೇಳಿದರು.
ಇದನ್ನೂ ಓದಿ:ಅಳ್ವಾರ್ ಕೇಸ್:ಈವರೆಗೂ ಸಾಕ್ಷ್ಯಾಧಾರ ಸಿಕ್ಕಿಲ್ಲ, ಬಾಲಕಿ ಮೇಲೆ ಅತ್ಯಾಚಾರ ನಡೆದಿಲ್ಲ; ಪೊಲೀಸ್
ಮೂರನೇ ದಿನದಾಟದಲ್ಲಿ ಡೀನ್ ಎಲ್ಗರ್ ಬ್ಯಾಟಿಂಗ್ ವೇಳೆ ಅಶ್ವಿನ್ ಎಸೆದ ಚೆಂಡು ಎಲ್ಗರ್ ಪ್ಯಾಡ್ ಗೆ ಬಡಿದಿತ್ತು. ಅಂಪೈರ್ ಎರಾಸ್ಮಸ್ ಔಟ್ ನೀಡಿದರು. ಆದರೆ ಡಿಆರ್ ಎಸ್ ವೇಳೆ ಚೆಂಡು ಸಾಮಾನ್ಯಕ್ಕಿಂತ ಹೆಚ್ಚಿನ ಬೌನ್ಸ್ ಹೊಂದಿ ವಿಕೆಟ್ ಮೇಲೆ ಹೋಗುವುದು ತೋರುತ್ತಿತ್ತು. ಹೀಗಾಗಿ ಎಲ್ಗರ್ ನಾಟೌಟ್ ಎಂದು ಘೋಷಿಸಿದರು.
ಈ ತೀರ್ಮಾನದಿಂದ ವಿರಾಟ್ ಕೊಹ್ಲಿ ಕೋಪಗೊಂಡಿದ್ದು, ಸ್ಟಂಪ್ ಮೈಕ್ ಬಳಿ ಹೋಗಿ ತಮ್ಮ ಕೋಪ ತೋರಿಸಿದ್ದರು.