Advertisement

ಬರೋಬ್ಬರಿ 3.25 ಲಕ್ಷ ಕೋಟಿಗೆ ಡೀಲ್‌ ಫೈನಲ್‌;ಏರಿಕೆಯ ಹಂತದಲ್ಲಿ ಟ್ವಿಟರ್‌ ಷೇರುಗಳು

08:29 AM Apr 26, 2022 | Team Udayavani |

ನ್ಯೂಯಾರ್ಕ್‌: ಟ್ವಿಟರ್‌ ಸಂಸ್ಥೆಗೆ ಬರೋಬ್ಬರಿ 3.25 ಲಕ್ಷ ಕೋಟಿ ರೂ.! ಉದ್ಯಮಿ ಎಲಾನ್‌ ಮಸ್ಕ್ ಮತ್ತು ಮೈಕ್ರೋಬ್ಲಾಗಿಂಗ್‌ ಜಾಲತಾಣ ಟ್ವಿಟರ್‌ ನಡುವೆ ಬಹುತೇಕವಾಗಿ ಅಂತಿಮಗೊಂಡ ಖರೀದಿ ಮೊತ್ತವಿದು.

Advertisement

ಆರಂಭದಲ್ಲಿ ಮಾರಾಟ ಸಾಧ್ಯವೇ ಇಲ್ಲ ಎಂದಿದ್ದ ಟ್ವಿಟರ್‌ ಕಂಪೆನಿ, ಈಗ ಎಲಾನ್‌ ಮಸ್ಕ್ಗೇ ಮಾರಾಟ ಮಾಡಲು ನಿರ್ಧರಿಸಿದೆ. ಇತ್ತೀ ಚೆ ಗಷ್ಟೇ ಟ್ವಿಟರ್‌ ಕಂಪೆನಿಯ ಶೇ.9ರಷ್ಟು ಷೇರುಗಳನ್ನು ಖರೀದಿಸಿದ್ದ ಮಸ್ಕ್, ಸಂಪೂ ರ್ಣ ವಾಗಿ ಕಂಪೆನಿ ಯನ್ನೇ ತನಗೆ ಕೊಟ್ಟು ಬಿಡಿ ಎಂದಿದ್ದರು. ಈ ಪ್ರಸ್ತಾವವನ್ನು ಸಂಸ್ಥೆ ಯಲ್ಲಿ ಪಾಲು ಹೊಂದಿ ರುವ ಸೌದಿ ಅರೇಬಿಯಾದ ರಾಜಕುಮಾರ ಅಲ್‌ ವಲೀದ್‌ ಬಿನ್‌ ತಲಾಲ್‌ ಖಡಾಖಂಡಿತವಾಗಿ ತಿರಸ್ಕರಿಸಿದ್ದರು. ರಾಜಕುಮಾರ ಶೇ.5.2 ಪ್ರಮಾಣದಲ್ಲಿ ಟ್ವಿಟರ್‌ ಷೇರುಗಳನ್ನು ಹೊಂದಿದ್ದಾರೆ.

ಟೆಸ್ಲಾ ಕಂಪೆನಿಯ ಮಾಲಕರಾಗಿರುವ ಎಲಾನ್‌ ಮಸ್ಕ್ ಅವರು ಕೇವಲ ವೈಯಕ್ತಿಕ ಮಿತಿಯಲ್ಲಿ ಈ ಖರೀದಿ ನಡೆಸುತ್ತಿದ್ದಾರೆ. ಸೊತ್ತು ನಿರ್ವಹಣ ಕಂಪೆನಿಯಾಗಿರುವ ವ್ಯಾನ್‌ಗಾರ್ಡ್‌ ಗ್ರೂಪ್‌ ಟ್ವಿಟರ್‌ನಲ್ಲಿ ಶೇ.10.3 ಷೇರು ಗಳನ್ನು ಹೊಂದಿದೆ.

ಎಲಾನ್‌ ಮಸ್ಕ್ ಅವರು ಟ್ವಿಟರ್‌ ಅನ್ನು ಖರೀದಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂಬ ವರದಿಗಳು ಜಗತ್ತಿನಾದ್ಯಂತ ವೈರಲ್‌ ಆಗುತ್ತಲೇ ನ್ಯೂಯಾರ್ಕ್‌ ಸ್ಟಾಕ್‌ಎಕ್ಸ್‌ಚೇಂಜ್‌ನಲ್ಲಿ ಮೈಕ್ರೋಬ್ಲಾಗಿಂಗ್‌ ಸಂಸ್ಥೆಯ ಷೇರುಗಳು ಶೇ.4.5ರಷ್ಟು ಏರಿಕೆಯಾಗಿವೆ.

ಭಾರತೀಯ ಸಿಇಒ
ಭಾರತ ಮೂಲದ ಪರಾಗ್‌ ಅಗರ್ವಾಲ್‌ ಅವರು 2021ರ ನವೆಂಬರ್‌ನಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಾಗಿ ಅಧಿಕಾರ ಸ್ವೀಕರಿಸಿದ್ದರು. ಆ ಬಳಿಕದ ದಿನದಿಂದ ಕಂಪೆನಿಯನ್ನು ಲಾಭದ ಹಳಿಗೆ ತರುವಲ್ಲಿ ವಿಫ‌ಲರಾಗಿದ್ದರು ಎಂದು ಹೇಳಲಾಗುತ್ತಿದೆ. 2023ರ ಒಳಗಾಗಿ ಮೈಕ್ರೋಬ್ಲಾಗಿಂಗ್‌ ಜಾಲತಾಣವನ್ನು ಅತ್ಯಂತ ಲಾಭಯುಕ್ತ ಕಂಪೆನಿಯನ್ನಾಗಿ ರೂಪಿಸಬೇಕು ಎಂಬ ಬಗ್ಗೆ ಗುರಿ ಹಾಕಿಕೊಂಡಿರುವಂತೆಯೇ ಮಸ್ಕ್ ಅವರು ಅದನ್ನು ಖರೀದಿಸುತ್ತಿದ್ದಾರೆ.

Advertisement

ಸಂಭಾವ್ಯ ಬದಲಾವಣೆಗಳೇನು?
ಮಸ್ಕ್ ಟ್ವಿಟರ್‌ ಅನ್ನು ಖರೀದಿಸಿದ ಬಳಿಕ ಅದರಲ್ಲಿ ಟ್ವೀಟ್‌ ಎಡಿಟ್‌ ಮಾಡುವ ಆಯ್ಕೆ ಇರಿಸುವ ಪ್ರಸ್ತಾಪ ಮಾಡಿದ್ದರು. ಜತೆಗೆ ಜಾಲತಾಣಗಳ ನಿಯಮಗಳಲ್ಲಿ ಕೂಡ ಬದಲಾವಣೆ, ಕ್ರಿಪ್ಟೋ ಕರೆನ್ಸಿ ಕ್ಷೇತ್ರದ ಅವ್ಯವಹಾರಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲೂ ಅವಕಾಶಗಳನ್ನು ಮಾಡುವುದನ್ನೂ ಮಸ್ಕ್ ಉಲ್ಲೇಖೀಸಿದ್ದರು. ಜತೆಗೆ ಅಲ್ಲಿ ಸಾರ್ವಜನಿಕ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಲೂ ಅವಕಾಶ ಸೃಷ್ಟಿಯಾಗಬೇಕು ಎಂದು ಪ್ರತಿಪಾದಿಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next