Advertisement

ಭಾರತದಲ್ಲಿ ಕ್ಯಾಂಪಸ್‌ ಸ್ಥಾಪಿಸಲಿರುವ ಮೊದಲ ವಿದೇಶಿ ವಿವಿ ಡೆಕಿನ್‌

10:35 PM Mar 03, 2023 | Team Udayavani |

ಅಹ್ಮದಾಬಾದ್‌: ಗುಜರಾತ್‌ನ ಗಾಂಧಿನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ಗಿಫ್ಟ್ (ಗುಜರಾತ್‌ ಇಂಟರ್‌ನ್ಯಾಷನಲ್‌ ಫೈನಾನ್ಸ್‌ ಟೆಕ್‌) ನಗರದಲ್ಲಿ; ಆಸ್ಟ್ರೇಲಿಯದ ಡೆಕಿನ್‌ ವಿಶ್ವವಿದ್ಯಾಲಯ ತನ್ನ ಕ್ಯಾಂಪಸ್‌ ಸ್ಥಾಪಿಸಲಿದೆ. ಅದಕ್ಕೆ ಐಎಫ್ಎಸ್‌ಸಿಎ ಸಂಸ್ಥೆ ತನ್ನ ಅನುಮತಿ ನೀಡಿದೆ ಎಂದು ಮುಖ್ಯಸ್ಥ ಇಂಜೆತಿ ಶ್ರೀನಿವಾಸ ತಿಳಿಸಿದ್ದಾರೆ.

Advertisement

ಅಲ್ಲಿಗೆ ಭಾರತದಲ್ಲಿ ತನ್ನ ಕ್ಯಾಂಪಸ್‌ ಆರಂಭಿಸಿದ ಮೊದಲ ವಿದೇಶಿ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆ ಡೆಕಿನ್‌ಗೆ ಲಭಿಸಲಿದೆ. ಆಸ್ಟ್ರೇಲಿಯದ ಪ್ರಧಾನಿ ಆಂಥೋನಿ ಅಲಾºನೀಸ್‌ ಗಾಂಧಿನಗರದಲ್ಲಿ ಮಾ.8ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಇದನ್ನು ಅಧಿಕೃತವಾಗಿ ಘೋಷಿಸಲಿದ್ದಾರೆ.

ಭಾರತೀಯ ವಿದ್ಯಾರ್ಥಿಗಳು ಗರಿಷ್ಠ ಪ್ರಮಾಣದಲ್ಲಿ ಆಸ್ಟ್ರೇಲಿಯದಲ್ಲಿ ಅಭ್ಯಾಸ ಮಾಡುತ್ತಿದ್ದಾರೆನ್ನುವುದನ್ನು ಇಲ್ಲಿ ಗಮನಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next