Advertisement
ಆಧಾರ್ ಕಾರ್ಡ್ಗೆ ಲಿಂಕ್ ಮಾಡಿಲ್ಲದ ಎಲ್ಲ ಪ್ಯಾನ್ ಕಾರ್ಡ್ಗಳನ್ನೂ ಸೆಪ್ಟೆಂಬರ್1 ರ ನಂತರ ಅಮಾನ್ಯಗೊಳಿಸಲು ಸರ್ಕಾರ ನಿರ್ಧರಿಸಿದೆ. ಸದ್ಯ 40 ಕೋಟಿ ಪ್ಯಾನ್ ಕಾರ್ಡ್ಗಳ ಪೈಕಿ 18 ಕೋಟಿ ಪ್ಯಾನ್ ಕಾರ್ಡ್ಗಳು ಲಿಂಕ್ ಆಗಿಲ್ಲ. ಹೀಗಾಗಿ ಸೆಪ್ಟೆಂಬರ್ 1 ರೊಳಗೆ ಎಲ್ಲ ಪ್ಯಾನ್ ಕಾರ್ಡ್ಗಳನ್ನೂ ಆಧಾರ್ ಜೊತೆಗೆ ಲಿಂಕ್ ಮಾಡಬೇಕಿದೆ. ಇಲ್ಲವಾದರೆ ಆಧಾರ್ ಕಾರ್ಡ್ ಅನ್ನೇ ರಿಟರ್ನ್ಸ್ ಫೈಲಿಂಗ್ಗೆ ಬಳಸಬಹುದಾಗಿದೆ. ಒಂದು ವೇಳೆ ರಿಟರ್ನ್ಸ್ ಫೈಲಿಂಗ್ಗೆ ಬಳಸಿದ ಆಧಾರ್ ಕಾರ್ಡ್ಗೆ ಪ್ಯಾನ್ ಲಿಂಕ್ ಮಾಡಿಲ್ಲದೇ ಇದ್ದರೆ, ಹೊಸ ಪ್ಯಾನ್ ಕಾರ್ಡ್ ಅನ್ನು ಆದಾಯ ತೆರಿಗೆ ಇಲಾಖೆ ಆಧಾರ್ ಕಾರ್ಡ್ದಾರರಿಗೆ ನೀಡಲಿದೆ. ಇದನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಆಧಾರ್ ಬಳಕೆದಾರರು ಡೌನ್ಲೋಡ್ ಮಾಡಿಕೊಂಡು ಬಳಸಬಹುದು.
Advertisement
ಪ್ಯಾನ್ ಲಿಂಕ್ ಮಾಡಲು ಸೆ.1ರ ಗಡುವು
01:58 AM Jul 12, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.