ಯಾದಗಿರಿ: ಕೋವಿಡ್ ಕಾರಣದಿಂದ ದೇಶದ ಅರ್ಥ ವ್ಯವಸ್ಥೆಗೆ ಸಾಕಷ್ಟು ಪೆಟ್ಟು ಬಿದ್ದಿದೆ. ಇದರಿಂದ ಸ್ಥಳೀಯ ಸಂಸ್ಥೆಗಳಲ್ಲಿ ತೆರಿಗೆ ಸಂಗ್ರಹಕ್ಕೆ ಹಿನ್ನಡೆಯಾಗಿದ್ದು, ಜಿಲ್ಲೆಯ ಗ್ರಾಪಂಗಳಲ್ಲಿ ತೆರಿಗೆ ಸಂಗ್ರಹಕ್ಕೆ ಫೆಬ್ರವರಿ ತಿಂಗಳ ಡೆಡ್‌ಲೈನ್ ನೀಡಲಾಗಿದೆ.
ಜಿಲ್ಲೆಯ 123 ಗ್ರಾಪಂಗಳಿದ್ದು, 2021ರ ಜ.18ರ ಪತ್ರದಲ್ಲಿನ ಮಾಹಿತಿ ಪ್ರಕಾರ ಚಾಲ್ತಿ ಬೇಡಿಕೆ 467.53 ಲಕ್ಷ ರೂಪಾಯಿಗಳಿದ್ದು, ಒಟ್ಟು ಬೇಡಿಕೆ 3388.49 ಲಕ್ಷಗಳಿದೆ. ಆದರೆ, ಈವರೆಗೆ ಕೇವಲ 80.77 ಲಕ್ಷ ಮಾತ್ರ ತೆರಿಗೆ ಸಂಗ್ರಹವಾಗಿರುವ ಅಂಶ ಬೆಳಕಿಗೆ ಬಂದಿದೆ. ಸಂಗ್ರಹವಾಗಿರುವ ಮೊತ್ತವು ಚಾಲ್ತಿ ಬೇಡಿಕೆಯ ಶೇ.17ರಷ್ಟು ಒಟ್ಟು ಬೇಡಿಕೆಯ 2% ಕರ ಸಂಗ್ರಹವಾಗಿರುವುದಕ್ಕೆ ಜಿಪಂ ಮುಖ್ಯಕಾರ್ಯನಿರ್ವಹಣಾಧಿ ಕಾರಿಗಳು ಗ್ರಾಪಂ ಸಿಬ್ಬಂದಿಗಳ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರ ಸಂಗ್ರಹ ಗುರಿ ಸಾ ಧಿಸಲು ಜಿಪಂ ಕರ ವಸೂಲಿ ಸಹ್ತಾಪ ಮತ್ತು ಫೆಬ್ರವರಿಯಿಂದ ಮಾಸಾಚರಣೆ ಆರಂಭಿಸಿದ್ದು, ಈ ಬಗ್ಗೆ ಜಿಲ್ಲೆಯ ತಾಪಂ ಕಾರ್ಯನಿರ್ವಹಣಾಧಿ ಕಾರಿಗಳು ಮತ್ತು ಗ್ರಾಪಂ ಅಭಿವೃದ್ಧಿ ಅಧಿ ಕಾರಿಗಳಿಗೆ ತುರ್ತು ಸೂಚನೆ ನೀಡಿದ್ದು, ಫೆಬ್ರವರಿ ತಿಂಗಳಲ್ಲಿ ಗರಿಷ್ಠ ಮಟ್ಟದಲ್ಲಿ ತೆರಿಗೆ ಸಂಗ್ರಹಕ್ಕೆ ನಿರ್ದೇಶನ ಮತ್ತು ಕ್ರಮದ ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ:ವಿಮಾನ ನಿಲ್ದಾಣ ನಿರ್ಮಾಣ; ದಶಕದ ವಿಘ್ನ ನಿವಾರಣೆ
ಇದೀಗ ಆರ್ಥಿಕ ವರ್ಷಪೂರ್ಣಗೊಳ್ಳುವುದಕ್ಕೆ ಕೆಲವೇ ತಿಂಗಳು ಬಾಕಿ ಇರುವುದು ತೆರಿಗೆ ವಸೂಲಿಗೆ ಖಡಕ್ ಸೂಚನೆ ನೀಡಲಾಗಿದ್ದು, ನಿಗದಿತ ಗುರಿ ತಲುಪಿ ತೆರಿಗೆ ವಸೂಲಿ ಕುರಿತು ಗ್ರಾಪಂಗಳು ನಿತ್ಯ ತಾಪಂಗೆ ವರದಿ ಸಲ್ಲಿಸುವುದು ಹಾಗೂ ತಾಪಂ ಅಧಿ ಕಾರಿಗಳು ಜಿಪಂಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ. ಪಂಚಾಯಿತಿಗಳು ತೆರಿಗೆ ಸಂಗ್ರಹದಲ್ಲಿ ಹಿಂದಿ ಬಿದ್ದಿರುವುದರಿಂದ ಜ.20ರಿಂದಲೇ ಎಲ್ಲಾ ಪಂಚಾಯಿತಿಗಳಲ್ಲಿ ಕರ ವಸೂಲಿ ಆಂದೋಲನ ಹಮ್ಮಿಕೊಳ್ಳಲು ಜಿಪಂ ಸೂಚನೆ ನೀಡಿದ್ದು, ತೆರಿಗೆ ಸಂಗ್ರಹ ಸಂಬಂಧ 11 ನಿರ್ದೇಶನಗಳನ್ನು ಪಂಚಾಯಿತಿಗಳಿಗೆ ನೀಡಲಾಗಿದೆ.
ಆದರೂ ಇನ್ನೂ ಕೆಲವು ಪಂಚಾಯಿತಿ ಅಧಿ ಕಾರಿಗಳು ಕಾರ್ಯಪ್ರವೃತ್ತರಾಗದಿರುವುದು ಕಂಡು ಬಂದಿದೆ. ಚಾಲ್ತಿ ಬೇಡಿಕೆಯ ಶೇ.100ರಷ್ಟು ಮತ್ತು ಹಿಂದಿನ ಬಾಕಿಯ ಶೇ.50ರಷ್ಟು ತೆರಿಗೆಯನ್ನು ಕಡ್ಡಾಯವಾಗಿ ವಸೂಲಿ ಮಾಡಲು ತಿಳಿಸಲಾಗಿದೆ. ಎಲ್ಲಾ ಗ್ರಾಪಂಗಳಲ್ಲಿ ಕರ ವಸೂಲಿಗಾರರು ನೇಮಕವಾಗಿದ್ದರೂ ಸಕಾಲಕ್ಕೆ ತೆರಿಗೆ ಸಂಗ್ರಹಕ್ಕೆ ಏಕೆ ಸಾಧ್ಯವಾಗುತ್ತಿಲ್ಲ ಕುರಿತು ಗಮನ ಹರಿಸಬೇಕಿದೆ.
ಅನೀಲ ಬಸೂದೆ