Advertisement

ಪೊಲೀಸರ ಕಂಡು ಎದ್ದು ಕುಳಿತ ಮೃತ ಮಹಿಳೆ!

12:07 PM Oct 31, 2017 | Team Udayavani |

ಬೆಂಗಳೂರು: ಮದ್ಯದ ಅಮಲಿನಲ್ಲಿ ಪತ್ನಿಯೊಂದಿಗೆ ಜಗಳವಾಡಿ ಹಲ್ಲೆ ನಡೆಸಿದ ಪತಿಯೊಬ್ಬ ಆಕೆ ಕುಸಿದು ಬಿದ್ದಿದ್ದನ್ನು ಕಂಡು ಕೊಲೆಗೈದಿದ್ದೇನೆ ಎಂದು ಭಾವಿಸಿ ಪೊಲೀಸರ ಮಂದೆ ಶರಣಾಗಿದ್ದಾನೆ. ಆದರೆ, ಕುಡುಕನ ಮಾತು ನಂಬಿ ಸ್ಥಳಕ್ಕೆ ಹೋದ ಪೊಲೀಸರು ಒಂದು ಕ್ಷಣ ಅಚ್ಚರಿಗೊಳಗಾದ ಘಟನೆ ಬಾಗಲಗುಂಟೆ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ.

Advertisement

ಖಾಸಗಿ ಕಂಪನಿ ನೌಕರ ರಘುಗೌಡ ಎಂಬಾತ ಪತ್ನಿ ಪುಷ್ಪಲತಾರನ್ನು ಕೊಲೆ ಮಾಡಿದ್ದೇನೆ ಎಂದು ಠಾಣೆಗೆ ಬಂದು ಹೈಡ್ರಾಮಾ ಸೃಷ್ಟಿಸಿದ್ದಾನೆ. ಸೋಮವಾರ ಕಂಠಪೂರ್ತಿ ಮದ್ಯ ಸೇವಿಸಿದ ರಘುಗೌಡ, ಕೌಟುಂಬಿಕ ವಿಚಾರವಾಗಿ ಪತ್ನಿ ಪುಷ್ಪಲತಾ ಅವರೊಂದಿಗೆ ಜಗಳ ತೆಗೆದಿದ್ದಾನೆ. ಈ ವೇಳೆ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ. ಪರಿಣಾಮ ಪತ್ನಿ ಪ್ರಜ್ಞೆತಪ್ಪಿ ಕೆಳಗೆ ಬಿದ್ದಿದ್ದಾರೆ. ಇದರಿಂದ ಗಾಬರಿಗೊಂಡ ರಘು, ಆಕೆಯನ್ನು ಎಚ್ಚರಿಸಲು ಯತ್ನಿಸಿದ್ದಾನೆ. ಆದರೆ ಸ್ಪಂದಿಸಿಲ್ಲ.

ಕೊನೆಗೆ ಕೊಲೆಯಾಗಿದ್ದಾಳೆ ಎಂದು ತಿಳಿದು ತಾನೇ ಠಾಣೆಗೆ ಬಂದು ಪೊಲೀಸರಿಗೆ ಶರಣಾಗಿದ್ದಾನೆ. ಮದ್ಯದ ಅಮಲಿನಲ್ಲಿದ್ದ ರಘುಗೌಡನ ಮಾತನ್ನು ನಂಬಿ ಪೊಲೀಸರು ಸ್ಥಳಕ್ಕೆ ಹೋಗಿದ್ದಾರೆ. ಆದರೆ, ಮಲಗಿದ್ದ ಪುಷ್ಪಲತಾ ಪೊಲೀಸರನ್ನು ಕಂಡು ಒಮ್ಮೆಲೆ ಎದ್ದು ಕುಳಿತಿದ್ದಾರೆ. ಇದರಿಂದ ಪೊಲೀಸರು ಅಚ್ಚರಿಗೊಳಗಾಗಿದ್ದಾರೆ. ಬಳಿಕ ರಘುಗೌಡನನ್ನು ಠಾಣೆಗೆ ಕರೆದೊಯ್ದು ಮುಚ್ಚಳಿಕೆ ಪತ್ರ ಬರೆಸಿಕೊಂಡು ಕಳುಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next