Advertisement
ಉಗ್ರರ ಮೃತದೇಹಗಳನ್ನೆಲ್ಲ ಮಿಸ್ರಾಟಾಗೆ ಸಾಗಿಸಲಾಗಿದ್ದು, ಅಲ್ಲಿ ಅವು ಕೆಡದಂತೆ ಇಡಲಾಗಿದೆ. ಇವೆಲ್ಲವೂ ವಿದೇಶಿ ಉಗ್ರರ ಶವಗಳಾಗಿದ್ದು, ಯಾವ ದೇಶವೂ ಅದು ತಮ್ಮ ನಾಗರಿಕರ ಶವ ಎಂದು ಹೇಳುತ್ತಿಲ್ಲ. ಹೀಗಾಗಿ, ಅವುಗಳನ್ನು ರಕ್ಷಿಸುವುದು, ಡಿಎನ್‌ಎ ಮಾದರಗಳನ್ನು ಸಂಗ್ರಹಿಸಿಡುವುದು, ಫೋಟೋಗಳನ್ನು ತೆಗೆದಿಡುವುದು ಎಲ್ಲವೂ ಸವಾಲಿನ ಕೆಲಸವಾಗಿದೆ ಎಂದು ಹೇಳುತ್ತಾರೆ ಲಿಬಿಯಾದ ಅಧಿಕಾರಿಗಳು. ಟ್ಯುನೀಷಿಯಾ, ಸುಡಾನ್ ಮತ್ತು ಈಜಿಪ್ಟ್ನ ಹಲವು ನಾಗರಿಕರು ಐಸಿಸ್ ಸೇರ್ಪಡೆಗೊಳ್ಳಲು ಲಿಬಿಯಾಗೆ ತೆರಳಿದ್ದರು. ಆದರೆ, ಸತ್ತಿರುವವರು ಅವರೇನಾ ಎಂಬುದನ್ನು ದೃಢಪಡಿಸಲು ಈ ದೇಶಗಳು ಹಿಂದೇಟು ಹಾಕುತ್ತಿವೆ.
ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿ ಸೋಮವಾರ ಕಾರು ಬಾಂಬ್ ಸ್ಫೋಟ ನಡೆದಿದ್ದು, ಕನಿಷ್ಠ 35 ಮಂದಿ ಸಾವಿಗೀಡಾಗಿದ್ದಾರೆ. 42 ಮಂದಿ ಗಾಯಗೊಂಡಿದ್ದಾರೆ. ಸರಕಾರಿ ನೌಕರರನ್ನು ಕರೆದೊಯ್ಯುತ್ತಿದ್ದ ಬಸ್ ಅನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ. ಸ್ಫೋಟಕ ತುಂಬಿದ್ದ ಕಾರು ಬಂದು ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಭಾರೀ ಸ್ಫೋಟ ಸಂಭವಿಸಿದೆ. ದಾಳಿಯ ಹೊಣೆಯನ್ನು ತಾಲಿಬಾನ್ ಉಗ್ರ ಸಂಘಟನೆ ಹೊತ್ತುಕೊಂಡಿದೆ.