ಕಂದಾವರ ಗ್ರಾಮದ ಮೂಡ್ಲಕಟ್ಟೆ ಅಮಕೊಡ್ಲುವಿನ ಮುತ್ತು ಮೊಗೇರ್ತಿ ಅವರ ಮನೆಹಿಂದಿನ ತೋಟದಲ್ಲಿ ಒಂದು ಶವ ದೊರೆತಿದೆ. ತತ್‌ಕ್ಷಣ ಬಸ್ರೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ವಿದ್ಯಾ, ಪಶುವೈದ್ಯಾಧಿಕಾರಿ, ಅರಣ್ಯ ಇಲಾಖೆ ಸಿಬಂದಿ ಸ್ಥಳಕ್ಕೆ ಭೇಟಿ ನೀಡಿ ಮರಣೋತ್ತರ ಪರೀಕ್ಷೆನಡೆಸಿದರು.
Advertisement
ಬಸ್ರೂರು , ಬಳ್ಕೂರು, ಮೂಡ್ಲಕಟ್ಟೆ ಪರಿಸರದಲ್ಲಿ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು ಎಂದು ವೈದ್ಯಾಧಿಕಾರಿ ತಿಳಿಸಿದ್ದಾರೆ. ಸ್ಥಳಕ್ಕೆ ತಾ.ಪಂ. ಉಪಾಧ್ಯಕ್ಷ ರಾಮ್ ಕಿಶನ್ ಹೆಗ್ಡೆ, ಕಂದಾವರ ಗ್ರಾ.ಪಂ. ಉಪಾಧ್ಯಕ್ಷೆ ಅನುಪಮಾ ಶೆಟ್ಟಿ, ಸದಸ್ಯರಾದ ಸಂತೋಷ್ ಪೂಜಾರಿ, ಸುರೇಂದ್ರ ಶೇರೆಗಾರ್ ಭೇಟಿ ನೀಡಿದ್ದರು. ಹೊಸಂಗಡಿಯಲ್ಲಿ 1, ಯಡಮೊಗೆ ಯಲ್ಲಿ 2 ಮಂಗಗಳ ಶವ ದೊರೆತಿದೆ. ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾದರೆ ಮರಣೋತ್ತರ ಪರೀಕ್ಷೆನಡೆಸುವುದು, ದೇಹದ ಅಂಶಗಳ ಸಂಗ್ರಹ ಕಷ್ಟವಾಗುತ್ತದೆ. ಪ್ರಯೋಗಾಲಯದ ವರದಿಗಾಗಿ ನಿರೀಕ್ಷಿಸಲಾಗುತ್ತಿದೆ ಎಂದು ತಾಲೂಕು ಆರೋಗ್ಯಾಧಿ ಕಾರಿ ಡಾ| ನಾಗಭೂಷಣ್ ಉಡುಪ ತಿಳಿಸಿದ್ದಾರೆ.
ಕಾಸರಗೋಡು: ಮಂಗನಕಾಯಿಲೆ ಬಗ್ಗೆ ಜಿಲ್ಲೆಯಲ್ಲೂ ಎಚ್ಚರ ವಹಿಸುವಂತೆ ಜಿಲ್ಲಾ ವೈದ್ಯಾಧಿಕಾರಿ ಡಾ| ಎ.ಪಿ. ದಿನೇಶ್ ಕುಮಾರ್ ತಿಳಿಸಿದ್ದಾರೆ. ಕರ್ನಾಟಕದಲ್ಲಿ ಕಾಯಿಲೆ ಹರಡುತ್ತಿರುವ ಹಿನ್ನೆಲೆಯಲ್ಲಿ ಗಡಿ ಪ್ರದೇಶವಾಗಿರುವ ಜಿಲ್ಲೆಯಲ್ಲೂ ಈ ಬಗ್ಗೆ ಎಚ್ಚರಿಕೆ ಬೇಕು ಎಂದವರು ಸಾರ್ವಜನಿಕರಿಗೆ ಸಲಹೆ ಮಾಡಿದ್ದಾರೆ. ಎಲ್ಲಾದರೂ ಮಂಗ ಮೃತಪಟ್ಟಿದ್ದರೆ ತತ್‌ಕ್ಷಣ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು. ಮೃತಪಟ್ಟಿದ್ದಲ್ಲಿ ಅಂತ್ಯಕ್ರಿಯೆ ನಡೆಸುವಾಗ ಸುರಕ್ಷಾ ಕ್ರಮಗಳನ್ನು ಅನುಸರಿಸಬೇಕು ಎಂದು ತಿಳಿಸಿದ್ದಾರೆ. 59 ಮಂದಿ ಗುಣಮುಖ
ಉಡುಪಿ: ಮಂಗನ ಕಾಯಿಲೆ ಸಂಬಂಧಿಸಿ ಶಿವಮೊಗ್ಗ ಜಿಲ್ಲೆಯ ಸಾಗರ ಆಸುಪಾಸಿನ 76 ಜನರು ಜ. 15ರ ವರೆಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಾಗಿದ್ದಾರೆ. 27 ಜನರಿಗೆ ಮಂಗನ ಕಾಯಿಲೆ ಇರುವ ಬಗ್ಗೆ ಶಂಕೆ ಕಂಡು ಬಂದಿದೆ. 46 ಜನರಿಗೆ ಮಂಗನ ಕಾಯಿಲೆ ಇಲ್ಲವೆಂದು ದೃಢಪಟ್ಟಿದೆ. ಮೂವರ ಪರೀಕ್ಷಾ ವರದಿ ಕೈಸೇರಬೇಕಾಗಿದೆ. 59 ಜನರು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. 17 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗನ ಕಾಯಿಲೆಯಿಂದ ಯಾವುದೇ ಸಾವು ಉಂಟಾಗಿಲ್ಲ ಎಂದು ಮೂಲಗಳು ತಿಳಿಸಿವೆ.