Advertisement

Madikeri ಹೊಳೆಯಲ್ಲಿ ತಾಯಿ, ಮಕ್ಕಳ ಮೃತದೇಹ ಪತ್ತೆ

11:22 PM Dec 03, 2023 | Team Udayavani |

ಮಡಿಕೇರಿ: ಪೊನ್ನಂಪೇಟೆ ತಾಲೂಕಿನ ಹುದಿಕೇರಿಯ ಕೂಟಿಯಾಲ ಹೊಳೆಯಲ್ಲಿ ತಾಯಿ ಹಾಗೂ ಇಬ್ಬರು ಪುತ್ರಿಯರ ಶವ ಪತ್ತೆಯಾಗಿದೆ.

Advertisement

ಸ್ಥಳೀಯ ನಿವಾಸಿ ಅಶ್ವಿ‌ನಿ (48), ಇವರ ಪುತ್ರಿಯರಾದ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿ ನಿಕಿತಾ (21) ಹಾಗೂ ಕಂಪ್ಯೂಟರ್‌ ತರಬೇತಿ ಪಡೆಯುತ್ತಿರುವ ನವ್ಯಾ (18) ಮೃತರು.
ಹುದಿಕೇರಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಮೂವರು ಐಗುಂದದಲ್ಲಿರುವ ತಮ್ಮ ಕಾಫಿ ತೋಟಕ್ಕೆ ಶನಿವಾರ ತೆರಳಿದ್ದರು. ಆದರೆ ರಾತ್ರಿಯಾದರೂ ಮರಳಿರಲಿಲ್ಲ ಎಂದು ಹೇಳಲಾಗಿದೆ. ರವಿವಾರ ಮೂವರ ಮೃತದೇಹ ಪತ್ತೆಯಾಗಿದ್ದು, ಸಾವಿಗೆ ಕಾರಣ ತಿಳಿದು ಬಂದಿಲ್ಲ.

ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next