Advertisement

De Kock ಮತ್ತೊಂದು ಶತಕದ ವೈಭವ: ಬಾಂಗ್ಲಾಕ್ಕೆ ಭಾರಿ ಗುರಿ ನೀಡಿದ ದಕ್ಷಿಣ ಆಫ್ರಿಕಾ

06:06 PM Oct 24, 2023 | Team Udayavani |

ಮುಂಬೈ : ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ ಮಂಗಳವಾರ ನಡೆಯುತ್ತಿರುವ ಏಕದಿನ ವಿಶ್ವಕಪ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಮತ್ತೊಂದು ಅತ್ಯಮೋಘ ಬ್ಯಾಟಿಂಗ್ ವೈಭವ ಅನಾವರಣಗೊಳಿಸಿದ್ದು ಬೃಹತ್ ಗುರಿಯನ್ನು ಬಾಂಗ್ಲಾದೇಶದ ಮುಂದಿಟ್ಟಿದೆ.

Advertisement

ದಕ್ಷಿಣ ಆಫ್ರಿಕಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು 50 ಓವರ್ ಗಳಲ್ಲಿ ವಿಕೆಟ್ ನಷ್ಟಕ್ಕೆ 382 ರನ್ ಗಳಿಸಿ ಬಾಂಗ್ಲಾದೇಶಕ್ಕೆ ಭಾರೀ ಸವಾಲಿನ ಗುರಿ ಎದುರಿಟ್ಟಿದೆ. ಕ್ವಿಂಟನ್ ಡಿ ಕಾಕ್ ಆರಂಭದಿಂದಲೂ ಅಬ್ಬರಿಸಿದರು. ಅಮೋಘ ಶತಕ ಸಿಡಿಸಿ ಸಂಭ್ರಮಿಸಿದರು. 140 ಎಸೆತಗಳನ್ನು ಎದುರಿಸಿ 15 ಆಕರ್ಷಕ ಬೌಂಡರಿಗಳು ಮತ್ತು 7 ಭರ್ಜರಿ ಸಿಕ್ಸರ್ ಗಳ ನೆರವಿನಿಂದ 174 ರನ್ ಗಳಿಸಿ ಔಟಾದರು. ಈ ವಿಶ್ವಕಪ್ ನಲ್ಲಿ ಗರಿಷ್ಠ ರನ್ ಗಳಿಕೆಯಲ್ಲಿ ಕೊಹ್ಲಿ ಅವರನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೆ ಜಿಗಿದಿದ್ದಾರೆ.

ಸ್ಪೋಟಕ ಆಟವಾಡಿದ ಹೆನ್ರಿಕ್ ಕ್ಲಾಸೆನ್ 90 ರನ್ ಗಳಿಸಿದ್ದ ವೇಳೆ ಔಟಾದರು. 49 ಎಸೆತಗಳಲ್ಲಿ 2 ಬೌಂಡರಿ ಮತ್ತು ಅಬ್ಬರದ 8 ಸಿಕ್ಸರ್ ಗಳನ್ನು ಬಾರಿಸಿದ್ದರು. ರೀಜಾ ಹೆಂಡ್ರಿಕ್ಸ್ 12, ರಾಸ್ಸೀ ವ್ಯಾನ್ ಡೆರ್ ಡಸ್ಸೆನ್ 1 ರನ್ ಗಳಿಗೆ ಔಟಾದರು. ಐಡೆನ್ ಮಾರ್ಕ್ರಾಮ್ 60 ರನ್ ಗಳಿಸಿ ಔಟಾದರು. ಡೇವಿಡ್ ಮಿಲ್ಲರ್ ಔಟಾಗದೆ 34 ರನ್ ಮತ್ತು ಮಾರ್ಕೊ ಜಾನ್ಸೆನ್ 1 ರನ್ ಗಳಿಸಿದರು.

ಬಾಂಗ್ಲಾ ಪರ ಹಸನ್ ಮಹಮೂದ್ 2 ವಿಕೆಟ್ ಪಡೆದರು. ಮೆಹಿದಿ ಹಸನ್ ಮಿರಾಜ್, ಶೋರಿಫುಲ್ ಇಸ್ಲಾಂ ಮತ್ತು ನಾಯಕ ಶಕೀಬ್ ಅಲ್ ಹಸನ್ ತಲಾ ಒಂದು ವಿಕೆಟ್ ಪಡೆದರು.

Advertisement

ಕ್ವಿಂಟನ್ ಡಿ ಕಾಕ್‌ಗೆ ಈ ವಿಶ್ವಕಪ್ ನ ಐದು ಪಂದ್ಯಗಳಲ್ಲಿ ಮೂರನೇ ಶತಕ ಸಿಡಿಸಿದರು. ಅದ್ಭುತ ಸ್ಟ್ರೋಕ್‌ಪ್ಲೇಯನ್ನು ಪ್ರದರ್ಶಿಸಿದರು.ಇದು ಏಕದಿನ ಕ್ರಿಕೆಟ್‌ನಲ್ಲಿ ಅವರ 20 ನೇ ಶತಕವಾಗಿದ್ದು ವಿಶ್ವಕಪ್‌ನಲ್ಲಿ 3 ನೇ ಶತಕವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next