Advertisement

‘ಮನಸ್ಸಿನ ಮೇಲೆ ಜಯ ಸಾಧನೆ ಶಿಬಿರದ ಉದ್ದೇಶ’

01:14 PM Sep 27, 2018 | |

ಬೆಳ್ತಂಗಡಿ : ಮನುಷ್ಯನಲ್ಲಿ ಹಲವಾರು ಒಳ್ಳೆಯ ಮತ್ತು ಕೆಟ್ಟ ಅಭ್ಯಾಸಗಳಿರುತ್ತವೆ. ಮದ್ಯಪಾನ ಕೆಟ್ಟ ಅಭ್ಯಾಸಗಳಲ್ಲಿ ಒಂದಾಗಿದ್ದು, ಬಹಳಷ್ಟು ಇತರ ವ್ಯಸನಗಳಿಗೆ ಪ್ರೇರಣೆ ನೀಡಬಲ್ಲ ಕೆಟ್ಟ ಚಾಳಿಯಾಗಿರುತ್ತದೆ. ಹೀಗಾಗಿ ಮನಸ್ಸಿನ ಮೇಲೆ ಜಯ ಸಾಧಿಸಲು ಪ್ರೇರಣೆ ನೀಡುವುದೇ ಮದ್ಯವರ್ಜನ ಶಿಬಿರದ ಉದ್ದೇಶವಾಗಿದೆ ಎಂದು ಧರ್ಮ ಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

Advertisement

ಅವರು ಮಂಗಳವಾರ ಉಜಿರೆ ಲಾೖಲ ದಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನ ಕೇಂದ್ರದಲ್ಲಿ ಜರಗುತ್ತಿರುವ 122ನೇ ವಿಶೇಷ ಮದ್ಯವರ್ಜನ ಶಿಬಿರದ 65 ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಜನಜಾಗೃತಿ ವೇದಿಕೆಯ ರಾಜ್ಯ ಕಾರ್ಯದರ್ಶಿ ವಿವೇಕ್‌ ವಿ. ಪಾಯಸ್‌ ಮಾತನಾಡಿ, ಸಮುದಾಯಶಿಬಿರಗಳ ಹೊರತಾಗಿ ಉಜಿರೆಯ ವ್ಯಸನಮುಕ್ತಿ ಕೇಂದ್ರದಲ್ಲಿ ವಾರ್ಷಿಕವಾಗಿ 25 ಶಿಬಿರಗಳನ್ನು ನಡೆಸಿ 1,500 ಶಿಬಿರಾರ್ಥಿಗಳ ಮನಃಪರಿವರ್ತನೆ ಕಾರ್ಯ ನಡೆಯುತ್ತಿದೆ. ಈ ಶಿಬಿರಗಳಿಗೆ ಡಾ| ಹೆಗ್ಗಡೆಯವರು ಭೇಟಿಯಿತ್ತು ಮಾಹಿತಿ ನೀಡುತ್ತಿರುವುದು ವಿಶೇಷವಾಗಿದೆ ಎಂದರು. ಈ ಸಂದರ್ಭ ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ, ಶಿಬಿರಾಧಿಕಾರಿ ನಾಗೇಶ್‌ ವೈ., ಮಾಧವ, ನಾಗರಾಜ್‌, ಆರೋಗ್ಯ ಸಹಾಯಕಿ ಫಿಲೋಮಿನಾ, ಸಲಹೆಗಾರರಾದ ಚೈತನ್ಯ ಉಪಸ್ಥಿತರಿದ್ದರು.

ಸಂಕಲ್ಪ
ಈ ಶಿಬಿರದಲ್ಲಿ ಓರ್ವ ವೈದ್ಯರು, ಇಬ್ಬರು ವಕೀಲರು, ಮೂವರು ಶಿಕ್ಷಕರು, ಇಬ್ಬರು ಅಭಿಯಂತರು, 7 ಮಂದಿ ಸರಕಾರಿ ನೌಕರರು, 20 ಮಂದಿ ಸ್ವ ಉದ್ಯೋಗಿಗಳು, 25 ಮಂದಿ ಕೃಷಿಕರು ಮೊದಲಾದವರು ಭಾಗವಹಿಸಿದ್ದಾರೆ. ರಾಜ್ಯದ ವಿವಿಧೆಡೆಗಳಿಂದ ಬಂದ ಶಿಬಿರಾರ್ಥಿಗಳು ಶಿಬಿರದಲ್ಲಿ ಸಹೋದರತೆಯಿಂದ ಪಾಲ್ಗೊಂಡು ಪಾನಮುಕ್ತ ಜೀವನದ ಸಂಕಲ್ಪ ಮಾಡಿದ್ದಾರೆ.
– ವಿವೇಕ್‌ ವಿ. ಪಾಯಸ್‌
ಕಾರ್ಯದರ್ಶಿ, ಜನಜಾಗೃತಿ ವೇದಿಕೆ

Advertisement

Udayavani is now on Telegram. Click here to join our channel and stay updated with the latest news.

Next