Advertisement

ಡಿಸಿಎಂ ಹುದ್ದೆ: ಆಕಾಂಕ್ಷಿಗಳ ಪೈಪೋಟಿ

10:13 AM Dec 16, 2019 | mahesh |

ಬೆಂಗಳೂರು: ಒಂದೆಡೆ ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವುದು ಹೊಸ ಬಿಜೆಪಿ ಶಾಸಕರ ಆತಂಕಕ್ಕೆ ಕಾರಣವಾಗಿದ್ದರೆ ಮತ್ತೂಂದೆಡೆ ಉಪ ಮುಖ್ಯ ಮಂತ್ರಿ ಸ್ಥಾನಕ್ಕೆ ಮೂಲ ಮತ್ತು ವಲಸಿಗ ಪ್ರಭಾವಿ ನಾಯಕರ ನಡುವೆ ಪೈಪೋಟಿ ಏರ್ಪಟ್ಟಿದ್ದು, ಕಗ್ಗಂಟಿನ ಸ್ವರೂಪ ಪಡೆಯುವ ಲಕ್ಷಣ ಕಾಣುತ್ತಿದೆ. ಡಿಸಿಎಂ ಹುದ್ದೆ ವಿಚಾರದಲ್ಲಿ ಈ ವರೆಗೆ ಮೌನ ವಹಿಸಿದ್ದ ಸಚಿವ ಶ್ರೀರಾಮುಲು ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದು, ಉಪ ಮುಖ್ಯಮಂತ್ರಿ ಹುದ್ದೆ ಜನರ ಬೇಡಿಕೆ. ಪಕ್ಷದ ಹೈಕಮಾಂಡ್‌ ನಿರ್ಧಾರಕ್ಕೆ ಬದ್ಧ ಎಂದಿದ್ದಾರೆ. ಶ್ರೀರಾಮುಲು ಅವರ ನಡೆಗೆ ಸಮರ್ಥನೆ ಮತ್ತು ಅಪಸ್ವರವೆಂಬಂತೆ ಹಲವು ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

ಸಚಿವ ಜಗದೀಶ್‌ ಶೆಟ್ಟರ್‌ ಅವರು ಶ್ರೀರಾಮುಲು ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ್‌ ಯತ್ನಾಳ್‌, ತಾನೂ ಹಿರಿಯ ನಾಗಿದ್ದು, ತನಗೂ ಅವಕಾಶ ಸಿಗಬೇಕಿತ್ತು ಎಂದಿದ್ದಾರೆ. ಸಚಿವ ಸಿ.ಟಿ. ರವಿ ಅವರು ಉಪ ಮುಖ್ಯಮಂತ್ರಿ ಹುದ್ದೆ ಹೆಚ್ಚಾದಷ್ಟು ಮಹತ್ವ ಕಡಿಮೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ವಾಲ್ಮೀಕಿ ಜನಾಂಗದ ಪ್ರಭಾವಿ ನಾಯಕರಾದ ಶ್ರೀರಾಮುಲು ಹಿಂದಿನಿಂದಲೂ ಡಿಸಿಎಂ ಸ್ಥಾನದ ಆಕಾಂಕ್ಷಿ. 2018ರ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಹೊತ್ತಿನಲ್ಲೇ ಶ್ರೀರಾಮುಲು ಡಿಸಿಎಂ ಆಗಲಿದ್ದಾರೆ ಎಂದು ಬಿಂಬಿಸಲಾಗಿತ್ತು. ಆದರೆ ಬಿಜೆಪಿಗೆ ಮ್ಯಾಜಿಕ್‌ ಸಂಖ್ಯೆ ಸಿಗದ ಕಾರಣ ವಿಪಕ್ಷವಾಗಿ ಇರುವಂತಾಯಿತು. ಈ ಬಾರಿ ಬಿಜೆಪಿ ಸರಕಾರ ರಚನೆಯಾದಾಗಲೂ ಶ್ರೀರಾಮುಲು ಡಿಸಿಎಂ ಆಗುತ್ತಾರೆ ಎನ್ನಲಾದರೂ ಅವಕಾಶ ಕೈತಪ್ಪಿತ್ತು. ಬಳಿಕ ಉಪಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆದ್ದರೆ ಅವರಿಗೆ ಹುದ್ದೇ ಸಿಗುತ್ತದೆ ಎಂಬ ಮಾತು ಕೇಳಿಬಂದಿತ್ತು. ಈಗ ಬಿಜೆಪಿ ಸರಕಾರ ಸುಭದ್ರವಾಗಿದ್ದು, ಶ್ರೀರಾಮುಲುಗೆ ಡಿಸಿಎಂ ಸ್ಥಾನ ಸಿಗಬೇಕು ಎಂಬುದು ವಾಲ್ಮೀಕಿ ಸಮುದಾಯ, ಬೆಂಬಲಿಗರ ಆಗ್ರಹ.

ರಮೇಶ್‌ ಬೆಂಬಲಿಗರಿಂದಲೂ ಬೇಡಿಕೆ
ಬಿಜೆಪಿ ಸರಕಾರ ರಚನೆಗೆ ಕಾರಣರಾದವರಲ್ಲಿ ಪ್ರಮುಖರಾದ ರಮೇಶ್‌ ಜಾರಕಿಹೊಳಿ ಕೂಡ ಉಪ ಚುನಾವಣೆಯಲ್ಲಿ ಗೆದ್ದರೆ ಉಪ ಮುಖ್ಯ ಮಂತ್ರಿ ಆಗಲಿದ್ದಾರೆ ಎಂಬ ಮಾತು ದಟ್ಟವಾಗಿ ಕೇಳಿಬಂದಿತ್ತು. ಅವರೂ ವಾಲ್ಮೀಕಿ ಸಮುದಾಯ ದವರೇ ಆಗಿರುವುದರಿಂದ ಡಿಸಿಎಂ ಸ್ಥಾನ ದೊರೆತರೆ ಪಕ್ಷ ಸಂಘಟನೆಗೆ ಬಲ ಬರಲಿದೆ ಎಂಬುದು ಬೆಂಬಲಿಗರ ವಾದ. ಪಕ್ಷವು ಮೂಲ ಬಿಜೆಪಿಗರಿಗೆ ಅವಕಾಶ ನೀಡುವುದೋ ವಲಸಿಗ ಶಾಸಕರಿಗೆ ಮಣೆ ಹಾಕುವುದೋ ಎಂಬ ಕುತೂಹಲ ಮೂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next