ಮಾಗಡಿ: ಕೆರೆಗಳು ಅಂತರ್ಜಲದ ಜೀವಾಳ, ಜಿಲ್ಲೆಯ 2,391 ಕೆರೆಗಳ ಒತ್ತುವರಿ ತೆರವುಗೊಳಿಸಿ, ಸೀಮೆ ಗುರುತಿಸಿ ಕೆರೆಗಳಿಗೆ ಕಾಯಕಲ್ಪ ನೀಡಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ತಹಶೀಲ್ದಾರ್‌ಗೆ, ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಆದೇಶಿಸಿದರು. ತಾಪಂ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ನಡೆದಿರುವ ನರೇಗಾ ಯೋಜನೆ ಪ್ರಗತಿ ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಂದಾಯ ಮತ್ತು ಸಣ್ಣ ನೀರಾವರಿ ಹಾಗೂ ಗ್ರಾಪಂ ವ್ಯಾಪ್ತಿಯ ಕೆರೆ, ಕಟ್ಟೆಗಳ ಒತ್ತುವರಿ ತೆರವು ಗೊಳಿಸ ಬೇಕು. ಕೆರೆಗಳ ಹೂಳು ಎತ್ತಿ ಜೀರ್ಣೋದಾಟಛಿರ ಗೊಳಿಸಿ ಕಾಯಕಲ್ಪ ನೀಡಬೇಕು. ಅದರಿಂದ ಅಂತರ್ಜಲ ಹೆಚ್ಚಾಗು ತ್ತದೆ. ರೈತರ ಬದುಕು ಹಸನಾಗುತ್ತದೆ. ಈ 2 ತಿಂಗಳಲ್ಲಿ ಕೆರೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿ, ಜಿಲ್ಲೆಯ ಅರಣ್ಯದಲ್ಲಿರುವ 283 ಕೆರೆಗಳ ಹೂಳೆತ್ತಿಸಿ ಕಾಯಕಲ್ಪ ನೀಡಿ, ಕಾಡು-ಕೆರೆ ಉಳಿಸಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಡಿಸಿಎಂ ತಾಕೀತು ಮಾಡಿದರು.
ಗ್ರಾಪಂನಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರು ಬಾಕಿ ವೇತನ ಬಿಡುಗಡೆಗೆ ಡಿಸಿಎಂ ಅವರಲ್ಲಿ ಮನವಿ ಸಲ್ಲಿಸಿದರು. ಶಾಸಕ ಎ.ಮಂಜುನಾಥ್ ಮಾತನಾಡಿ, ರೈತರ-ಕೂಲಿ ಕಾರ್ಮಿಕರ ಬೆನ್ನೆಲುಬು ನರೇಗಾ ಯೋಜನೆ. ಸಮರ್ಪಕ ವಾಗಿ ಅನುಷ್ಠಾನಕ್ಕೆ ಗ್ರಾಪಂಗಳು ಕಾರ್ಯೋನ್ಮಕರಾಗ ಬೇಕು. ಜಿಲ್ಲೆಯಲ್ಲಿ 1,920 ಚೆಕ್ ಡ್ಯಾಂ ನಿರ್ಮಾಣ ಗೊಂಡಿದ್ದು, ಪ್ರಶಸ್ತಿ ಸಿಕ್ಕಿದೆ.
ಕಳೆದ ಸಾಲಿನ ನರೇಗಾ ಬಾಕಿ 19 ಕೋಟಿ ಬಾಕಿಯಿದ್ದು, ಬಿಡುಗಡೆಗೆ ಡಿಸಿಎಂಗೆ ಮನವಿ ಮಾಡಲಾಯಿತು. ಸರ್ಕಾರ ಕೈಗೊಳ್ಳುವ ಅಭಿವೃದ್ಧಿಗೆ ನಮ್ಮ ಸಹಕಾರವಿದೆ ಎಂದರು. ಎಂಎಎಲ್‌ಸಿ ಆ.ದೇವೇಗೌಡ, ತಾಪಂ ಅಧ್ಯಕ್ಷ ನಾರಾ ಯಣಪ್ಪ, ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಕೆ.ಕೃಷ್ಣಮೂರ್ತಿ, ತಾಲೂಕು ಜೆಡಿಎಸ್ ಅಧ್ಯಕ್ಷ ಪೊಲೀಸ್ ರಾಮಣ್ಣ, ತಾಲೂಕು ಜೆಡಿಎಸ್ ಮಹಿಳಾಧ್ಯಕ್ಷೆ ಶೈಲಜಾ,
ಸರ್ಕಾರದ ಕಾರ್ಯದರ್ಶಿ ಪ್ರದೀಪ್, ಉಪಕಾರ್ಯದರ್ಶಿ ಉಮೇಶ್, ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ, ಸಿಇಒ ಇಕ್ರಾಂ, ತಹಶೀಲ್ದಾರ್ ಶ್ರೀನಿವಾಸ ಪ್ರಸಾದ್, ತಾಲೂಕು ಬಿಜೆಪಿ ಅಧ್ಯಕ್ಷ ರಂಗಧಾಮಯ್ಯ, ತಾಪಂ ಸದಸ್ಯ ಕೆ.ಎಚ್. ಶಿವರಾಜು, ತಾಪಂ ಇಒ ಟಿ.ಪ್ರದೀಪ್ ಇತರರು ಇದ್ದರು.