Advertisement

DCM; ಸಂಪನ್ಮೂಲ ಕ್ರೋಡೀಕರಣ ಸಮಿತಿ ಜತೆ ಸಭೆ

01:20 AM Nov 23, 2024 | Team Udayavani |

ಬೆಂಗಳೂರು: ನಿವೃತ್ತ ಐಎಎಸ್‌ ಅಧಿಕಾರಿ ಡಾ| ಕೆ.ಪಿ.ಕೃಷ್ಣನ್‌ ನೇತೃತ್ವದ ಸಂಪನ್ಮೂಲ ಕ್ರೋಢೀಕರಣ ಸಮಿತಿಯ ಜತೆಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಶುಕ್ರವಾರ ಸಭೆ ನಡೆಸಿದ್ದು, ಹೆಚ್ಚುವರಿ ಆದಾಯ ಸಂಗ್ರಹಣೆ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಕಳೆದ 2 ತಿಂಗಳಿಂದ ಈ ಸಮಿತಿ ವಿವಿಧ ಇಲಾಖೆಗಳ ಜತೆಗೆ ಸಭೆ ನಡೆಸುತ್ತಿದೆ. ಬಿಬಿಎಂಪಿ ಹಾಗೂ ಜಲಸಂಪನ್ಮೂಲ ಇಲಾಖೆಯ ಆಸ್ತಿ ಹಾಗೂ ಸಂಪನ್ಮೂಲಗಳ ಬಗ್ಗೆ ಇಂದು ಚರ್ಚೆ ಇದ್ದುದರಿಂದ ಡಿ.ಕೆ.ಶಿವಕುಮಾರ್‌ ಈ ಸಭೆಯಲ್ಲಿ ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next