Advertisement

ವಿಧಾನಪರಿಷತ್ ಚುನಾವಣೆ; ಉಪಮುಖ್ಯಮಂತ್ರಿ ಹಾದಿ ಸುಗಮ- ಲಕ್ಷ್ಮಣ ಸವದಿಗೆ ಗೆಲುವು

09:44 AM Feb 18, 2020 | Nagendra Trasi |

ಬೆಂಗಳೂರು:ವಿಧಾನಪರಿಷತ್ ನಲ್ಲಿ ತೆರವಾದ ಒಂದು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಿರೀಕ್ಷೆಯಂತೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಗೆಲುವು ಸಾಧಿಸಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿದ್ದ ಅನಿಲ್ ಕುಮಾರ್ ಸ್ಪರ್ಧೆಯಿಂದ ಹಿಂದೆ ಸರಿದಿರುವುದಾಗಿ ತಿಳಿಸಿದ್ದರು.

Advertisement

ಸೋಮವಾರ ವಿಧಾನಸಭಾ ಸದಸ್ಯರು ವಿಧಾನಪರಿಷತ್ ಗೆ ಆಯ್ಕೆಯಾಗುವ ಅಭ್ಯರ್ಥಿಗೆ ಮತದಾನ ಮಾಡಿದ್ದು, ಇಂದು ಸಂಜೆ ನಡೆದ ಮತಎಣಿಕೆಯಲ್ಲಿ ಲಕ್ಷ್ಮಣ ಸವದಿ 113 ಮತಗಳನ್ನು ಪಡೆದಿದ್ದರು ಎಂದು ಘೋಷಿಸಿದೆ.

ಸವದಿ ಪರ ಚಲಾವಣೆಯಾದ 120 ಮತಗಳಲ್ಲಿ 113 ಸಿಂಧುವಾಗಿದ್ದು, 7 ಮತಗಳು ಅಸಿಂಧುವಾಗಿದೆ ಎಂದು ವರದಿ ತಿಳಿಸಿದೆ. ಬೆಳಗ್ಗೆ 9ಗಂಟೆಯಿಂದ ಸಂಜೆ 4ಗಂಟೆವರೆಗೆ ಗೌಪ್ಯ ಮತದಾನ ನಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next