ಬೆಂಗಳೂರು : ಸಾರಿಗೆ ನೌಕರರು ದಿಢೀರ್ ಪ್ರತಿಭಟನೆ ನಡೆಸಿ ಸಾರ್ವಜನಿಕರಿಗೆ ತೊಂದರೆ ನೀಡಿದ್ದರು. ಒಕ್ಕೂಟದ ನೌಕರರು ಮತ್ತು ಟ್ರೇಡ್ ಯುನಿಯನ್ ಅವರು 9 ಬೇಡಿಕೆ ಮುಂದಿಟ್ಟರು. ನಾವು ಅವರ ಬೇಡಿಕೆಗಳ ಭರವಸೆ ಪತ್ರವನ್ನು ಲಿಖಿತ ರೂಪದಲ್ಲಿ ನೀಡಿ, ಎಂಟು ಬೇಡಿಕೆ ಈಡೆರಿಸಿ ಆದೇಶ ಹೊರಡಿಸಿದ್ದೇವೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿಕೆ ನೀಡಿದ್ದಾರೆ.
ಪತ್ರಕರ್ತರ ಜೊತೆ ಮಾತನಾಡಿದ ಅವರು, ಆರೋಗ್ಯ ಭಾಗ್ಯ ಸಂವೀಜಿವಿನಿ ಯೋಜನೆ, ಕೊರೊನಾ ಸೋಂಕಿನಿಂದ ನಿಧನ ಹೊಂದಿದರೆ ಆ ಕುಟುಂಬಕ್ಕೆ 30 ಲಕ್ಷ ಪರಿಹಾರ ನೀಡುವುದು, ನಿಗಮದಲ್ಲಿ ಎಚ್ ಆರ್ ಎಂ ಎಸ್ ಆದೇಶ ಪಾಲಿಸಲು ಬೇಡಿಕೆ ಈಡೇರಿಕೆ, ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಬಾಟಾ ನೀಡುವುದು, ಘಟಕದ ವ್ಯಾಪ್ತಿಯಲ್ಲಿ ಮೇಲಾಧಿಕಾರಿಗಳ.ಕಿರುಕುಳ ತಪ್ಪಿಸಲು ಸಮಿತಿ ರಚನೆ, ಎನ್ ಐ ಎನ್ ಸಿ ನಾನ್ ಡ್ಯೂಟಿ ನಾನ್ ಕಲೆಕ್ಟ್ ವ್ಯವಸ್ಥೆ ರದ್ದುಗೊಳಿಸಬೇಕು, ಹಣ ಪಡೆದು ಟಿಕೆಟ್ ನೀಡದಿರುವವರ ಮೇಲೆ ಮಾತ್ರ ಕ್ರಮ ತೆಗೆದುಕೊಳ್ಳಬೇಕು ಎಂದರು.
ತಾಂತ್ರಿಕ ತೊಂದರೆ ಇದ್ದರೂ ಅವಕಾಶ ನೀಡಲಾಗಿದೆ ಬಿಎಂಟಿಸಿಯಲ್ಲಿ ಶೇ 60 ರಷ್ಟು ಉತ್ತರ ಕರ್ನಾಟಕದವರಿದ್ದಾರೆ. ಪ್ರತಿಶತ ಶೇ 2 ರಷ್ಟು ವರ್ಗಾವಣೆ ಮಾಡಲು ಅವಕಾಶ ನೀಡಲಾಗಿದೆ. ಎನ್ ಇ.ಆರ್.ಟಿಸಿ ಗೆ ವರ್ಗಾವಣೆ ಮಾಡಿದರೆ ಅರ್ಧ ಹಣವನ್ನು ಎರಡೂ ನಿಗಮಗಳು ನೀಡಬೇಕು. ಈಗ 2 ರಷ್ಟು ವರ್ಗಾವಣೆಗೆ ಒಪ್ಪಿದ್ದೇವೆ. ಇನ್ನು ಹೆಚ್ಚಿಗೆ ಕೇಳಿದರೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ಎರಡು ವರ್ಷದ ತರಬೇತಿ ಸಮಯವನ್ನು ಒಂದು ವರ್ಷಕ್ಕೆ ಇಳಿಸಲು ಬೇಡಿಕೆ ಇಟ್ಟುದ್ದು, ಅದನ್ನು ಒಪ್ಪಿಕೊಂಡಿದ್ದೇವೆ. ರಾಜ್ಯ ಸರ್ಕಾರದ ಆರನೇ ವೇತನ ಆಯೋಗದ ಸಮನಾಗಿ ವೇತನ ನೀಡಲು ಆಗ್ರಹ ಮಾಡಿದ್ದಾರೆ. ಹಣಕಾಸಿನ ಇತಿಮಿತಿ ನೋಡಿಕೊಂಡು ನಾವು ತೀರ್ಮಾನ ಮಾಡುತ್ತೇವೆ ಎಂದು ಹೇಳಿದ್ದಾರೆ.
ಕೋವಿಡ್ ಪೂರ್ವದಲ್ಲಿ ಪ್ರತಿ ನಿತ್ಯ 1.ಕೋಟಿ ಜನರು ಸಂಚಾರ ಮಾಡುತ್ತಿದ್ದರು. ಈಗ 65 ರಷ್ಟು ಜನರು ಮಾತ್ರ ಸಂಚಾರ ಮಾಡುತ್ತಿದ್ದಾರೆ. ನಮಗೆ ಇನ್ನೂ 35% ಕೊರತೆ ಇದೆ. ಟಿಕೆಟ್ ಮೂಲಕ ಬರುವ ಆದಾಯ ಇಂಧನ ಮತ್ತು ವೇತನಕ್ಕೆ 1962 ಕೋಟಿ ಕೊರತೆಯಾಗುತ್ತದೆ. ಈ ಕೊರತೆ ಹಣವನ್ನು ರಾಜ್ಯ ಸರ್ಕಾರದ ಬೊಕ್ಕಸದಿಂದ ನೀಡಿದ್ದಾರೆ. ಇದುವರೆಗೂ ಸಂಬಳದಲ್ಲಿ ಕಡಿತ ಮಾಡದೇ ಸಂಬಳ ನೀಡಲಾಗಿದೆ. ಸಂಬಳ ಜಾಸ್ತಿ ಮಾಡುವ ಬೇಡಿಕೆಯನ್ನು ಸಕಾರಾತ್ಮಕವಾಗಿ ಹಣಕಾಸಿನ ತೊಂದರೆ ಇದ್ದರೂ ನಿಮ್ಮ ಮನವಿಗೆ ಸ್ಪಂದಿಸಲು ಕೋಡ್ ಆಫ್ ಕಂಡಕ್ಟ್ ಜಾರಿಯಲ್ಲಿದೆ ಎಂದರು.
ಈಗ ಏನಾದರೂ ಜಾರಿ ಮಾಡಿದರೆ ಚುನಾವಣೆ ನೀತಿ ಸಂಹಿತೆ ಅಡ್ಡಿ ಬರುತ್ತಿದೆ. ಈ ಸಂದರ್ಭದಲ್ಲಿ ಸಾರಿಗೆ ನೌಕರರು ಪ್ರತಿಭಟನೆ ಮಾಡುವ ಬಗ್ಗೆ ಕೇಂದ್ರ ಚುನಾವಣಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಅವರು ಅನುಮತಿ ನೀಡಿದರೆ, ಸಂಬಳ ಹೆಚ್ಚು ಮಾಡುವ ನಿರ್ಣಯ ಕೈಗೊಳ್ಳುತ್ತೇವೆ. ಈಗಾಗಲೇ ಹಣಕಾಸು ಇಲಾಖೆ ಜೊತೆ ಮಾತುಕತೆ ನಡೆಸಿದ್ದೇವೆ ಎಂದರು.
ಪ್ರತಿಭಟನೆ ನಡೆಸಲು ಮುಂದಾಗಿರುವ ಸೌಕರರು ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು. ಕೊರೊನಾ ಎರಡನೇ ಅಲೆ ಹೆಚ್ಚಳ ಅಗಿದ್ದರಿಂದ ಶೇ 5% ರಷ್ಟು ಪ್ರಯಾಣಿಕರ ಕೊರತೆಯಾಗಿದೆ. ನಾಲ್ಕೂ ನಿಗಮದಲ್ಲಿ 3200 ಕೋಟಿ ನಷ್ಟ ಅನುಭವಿಸುತ್ತಿವೆ. ಈ ಸಂದರ್ಭದಲ್ಲಿ ವೇತನ ಹೆಚ್ಚಳ ಮಾಡಿದರೆ ಮತ್ತಷ್ಟು ಹೊರೆಯಾಗಲಿದೆ ಆದರೂ ಅವರ ಬೇಡಿಕೆ ಈಡೇರಿಸಲು ಸರ್ಕಾರ ಸಿದ್ಧವಾಗಿದೆ. ಚುನಾವಣಾ ಆಯೋಗದ ಅನುಮತಿ ದೊರೆಯದಿದ್ದರೆ ಮೇ 4 ರ ವರೆಗೆ ಕೋಢ್ ಅಪ್ ಕಂಡಕ್ಟ್ ಇದೆ ಎಂದರು.