Advertisement
ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ ಬಗ್ಗೆ ಪದೆ ಪದೇ ಹೇಳುವ ಅವಶ್ಯಕತೆ ಇಲ್ಲ. ರಾಜ್ಯದಲ್ಲಿ ಯಡಿಯೂರಪ್ಪ ಪೂರ್ಣಾವಧಿ ಮುಖ್ಯಮಂತ್ರಿ ಆಗಿರ್ತಾರೆ. ಅವರ ಬದಲಾವಣೆ ಗಾಳಿ ಸುದ್ದಿ. ಮಾದ್ಯಮಗಳಿಂದ ಗಾಳಿ ಸುದ್ದಿಗೆ ರೆಕ್ಕೆ-ಪುಕ್ಕ ಹಚ್ಚುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
Related Articles
Advertisement
ಇದನ್ನೂ ಓದಿ : ಲಾಕ್ ಡೌನ್ ವಿಸ್ತರಣೆ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತಗೊಂಡಿಲ್ಲ : ಸಿಎಂ ಬಿಎಸ್ ವೈ
ಬಿಜೆಪಿಯವರಿಗೆ ಸಿಎಮ್ ಬದಲಾವಣೆ ರೋಗ ಹತ್ತಿದೆ ಎಂಬ ಸಿದ್ದರಾಮಯ್ಯ ವ್ಯಂಗ್ಯ ಹೇಳಿಕೆಗೆ ಕಾರಜೋಳ ತಿರುಗೇಟು ನೀಡಿದ್ದು,ಸಿದ್ದರಾಮಯ್ಯ ಅವರಿಗೆ ಪಾಪ ತುರ್ತಾಗಿ ಸಿಎಂ ಆಗಬೇಕಂತಾರೆ. ಆದರೆ ಅವಕಾಶವಿಲ್ಲ. ಈ ದೇಶದಲ್ಲಿ ಕಾಂಗ್ರೆಸ್ ಅವಸಾನದ ಕಾಲದಲ್ಲಿದೆ. ಮೊನ್ನೆ ನಡೆದ ಐದು ರಾಜ್ಯಗಳ ಚುನಾವಣೆ ಅತ್ಯಂತ ಕಳಪೆಯಾಗಿದೆ ಅಂತ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹೇಳಿದ್ದಾರೆ. ಸಿದ್ದರಾಮಯ್ಯ ವಿನಾಕಾರಣ ದೇಶದ ಪ್ರಧಾನಿಗಳನ್ನಾಗಲಿ, ರಾಜ್ಯದ ಸಿಎಮ್ ಅವರನ್ನಾಗಲಿ ಟೀಕೆ ಮಾಡಬಾರದು. ಟೀಕೆ ಮಾಡೋದನ್ನು ಬಿಟ್ಟು ಸಲಹೆ ಸೂಚನೆಗಳನ್ನು ಇಂತಹ ಕಠಿಣ ಪರಿಸ್ಥಿತಿಗಳಲ್ಲಿ ಕೊಡಬೇಕು. ಅವರ ಸಲಹೆ ಸೂಚನೆಗಳನ್ನು ಪಾಲಿಸುತ್ತೇವೆ ಎಂದು ತಿಳಿಸಿದರು.ವಿರೋಧ ಪಕ್ಷ ಎಂದಾಗ, ಬರಿ ಟೀಕೆ ಮಾಡೋದೆ ಗುರಿ. ಆದರೆ, ಟೀಕೆ ಮಾಡೋದಕ್ಕೆನೆ ವಿರೋಧ ಪಕ್ಷನಾ ಅಂತ ಪ್ರಶ್ನೆ ಮಾಡಬೇಕಾಗುತ್ತದೆ ಎಂದರು.
ಲಾಕಡೌನ್ ಮುಂದೂಡಿಕೆ ವಿಚಾರ ಮಾಡಿಲ್ಲ :
ಜೂನ್ 7 ರ ನಂತರ ಲಾಕ್ ಡೌನ್ ಮುಂದುವರಿಕೆ ಕುರಿತು ಇನ್ನು ಆ ಬಗ್ಗೆ ಆಲೋಚನೆ ಮಾಡಿಲ್ಲ. ಜೂನ್ 7 ರವರೆಗೂ ಲಾಕ್ ಡೌನ್ ಇದೆ. ನಂತರ ನೋಡೋಣ ಎಂದು ಹೇಳಿದರು. ಹಕ್ಕುಚ್ಯುತಿ ಮಂಡಿಸುವ ಮುನ್ನ ಅಧಿಕಾರಿಗಳ ಜೊತೆ ರಿವ್ಯೂವ್ ಮಾಡೋಕೆ ಅವಕಾಶ ಕೊಡಲಿಲ್ಲ, ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರ ಸರ್ಕಾರ ಇದ್ದಾಗ, ಸಿದ್ದರಾಮಯ್ಯ ಅವ್ರೇ ಸಿಎಂ ಇದ್ದ ಸಂದರ್ಭದಲ್ಲಿ ಯಾವ ಆದೇಶಗಳನ್ನು ನೀಡಿದ್ದಾರೆ ಎಂಬುದನ್ನು ಇನ್ನೊಂದು ಸಾರಿ ಓದಲಿ. ಅವರ ಪಕ್ಷದ ಉಪ ಮುಖ್ಯಮಂತ್ರಿ ಪರಮೇಶ್ವರ ಅವರು ರೀವಿವ್ ಮಾಡ್ತೀನಿ ಅಂದಾಗಲೇ ಅವಕಾಶ ಕೊಟ್ಟಿಲ್ಲ. ಯಡಿಯೂರಪ್ಪ, ನಾವು ವಿಪಕ್ಷದಲ್ಲಿ ಇದ್ದಾಗ ಬಾಗಲಕೋಟೆ ಡಿಸಿ ಆಫೀಸ್ ಮುಂಭಾಗ ಮಲಗಿದ್ವಿ.ಆಗ ನಮಗೆ ಒಂದೇ ಒಂದು ಮಾಹಿತಿ ಕೊಡಲಿಲ್ಲ. ಒಂದು ಪೀಸ್ ಪೇಪರು ಕೂಡಾ ಕೊಡಲಿಲ್ಲ. ಆ ರೀತಿಯ ನಡವಳಿಕೆ ಯಾವಾಗಲೂ ಕಾಂಗ್ರೆಸ್ ಸರ್ಕಾರದ್ದು. ಅವರಿಗೆ ಆ ಹುಚ್ಚು ಯಾಕೆ ಗೊತ್ತಿಲ್ಲ. ಎಲ್ಲ ಡಿಸಿಗಳ ಮೀಟಿಂಗ್ ತಗೊಂಡು ರಿವೀವ್ ಮಾಡ್ತೀನಿ ಅಂದ್ರೆ ಅದಕ್ಕೆ ಅವಕಾಶ ಇಲ್ಲ. ಮಾಹಿತಿ ತಗೊಳ್ಳಬಹುದು. ನಾವು ಒದಗಿಸೋದಕ್ಕೆ ಸೂಚನೆ ಕೊಡುತ್ತೇವೆ ಎಂದರು.
ಇದನ್ನೂ ಓದಿ : 6 ವಾರಗಳ ಬಳಿಕ ಅತೀ ಕಡಿಮೆ ಪ್ರಕರಣ ಪತ್ತೆ: 24 ಗಂಟೆಗಳಲ್ಲಿ 1.65 ಲಕ್ಷ ಮಂದಿಗೆ ಸೋಂಕು
ಅನಾಥ ಮಕ್ಕಳಿಗೆ ಪಿಂಚಣಿ:
ಕೊರೊನಾದಿಂದ ತಂದೆ-ತಾಯಿ ಮೃತರಾಗಿ ಮಕ್ಕಳ ಅನಾಥರಾಗಿದ್ರೆ ರಾಜ್ಯ ಮತ್ತು ಕೇಂದ್ರದ ನೆರವಿಗೆ ಬರಲಿವೆ. ಈ ಕುರಿತು ಬಾಗಲಕೋಟೆ ಜಿಲ್ಲೆಯಲ್ಲಿ ಸರ್ವೆ ಮಾಡಲು ಮಹಿಳಾ ಮತ್ತು ಮಕ್ಕಳ ಇಲಾಖೆಗೆ ಸೂಚನೆ ನೀಡಲಾಗಿದೆ. ಎಲ್ಲ ಸಿಡಿಪಿಒಗಳಿಗೆ ಹೇಳಿದ್ದೇವೆ. ಯಾರಾದ್ರೂ ಅನಾಥ ಮಕ್ಕಳು ಇದ್ರೆ ಅಂತವರ ವ್ಯವಸ್ಥೆಯನ್ನು ಸರ್ಕಾರ ಮಾಡುತ್ತೆ. ಸರ್ಕಾರದ ವ್ಯವಸ್ಥೆಯಲ್ಲಿ ಅವರನ್ನ ಜೋಪಾನ ಮಾಡ್ತೇವೆ. ಅವರಿಗೆ ಮೂರುವರೆ ಸಾವಿರ ರೂ. ಪೆನ್ಶನ್ ಕೊಡುತ್ತೇವೆ. ಕೇಂದ್ರ ಸರ್ಕಾರ ಕೂಡ 10 ಲಕ್ಷ ರೂ. ವಿಮಾ ವ್ಯವಸ್ಥೆ ಮಾಡಿದೆ. 18 ವರ್ಷಗಳ ನಂತರ ಉನ್ನತ ಶಿಕ್ಷಣಕ್ಕೆ ಉಪಯೋಗಕ್ಕೆ ವ್ಯವಸ್ಥೆ ಮಾಡಲಾಗುವುದು. ಅಲ್ಲದೇ ನಮ್ಮ ಕೇಂದ್ರೀಯ ವಿದ್ಯಾಲಯ, ವಸತಿ ಶಾಲೆಗಳಲ್ಲಿ ಅವರಿಗೆ ವ್ಯವಸ್ಥೆ ಮಾಡಲಿದ್ದು, ಅಂತ ಮಕ್ಕಳು ಇದ್ರೆ, ಗುರುತಿಸಿ ನಮ್ಮ ಸರ್ಕಾರಕ್ಕೆ ಒಪ್ಪಿಸುವ ಕೆಲಸ ಮಾಡಲಿ ಎಂದು ಹೇಳಿದರು.