Advertisement

ಸಮ್ಮೇಳನಕ್ಕೆ ದಾನಿಗಳ ನೆರವು ಕೇಳಿದ ಡಿಸಿಎಂ ಕಾರಜೋಳ

10:50 PM Jan 10, 2020 | Lakshmi GovindaRaj |

ಕಲಬುರಗಿ: “ಕನ್ನಡ ಸಾಹಿತ್ಯ ಸಮ್ಮೇಳನವೆಂದರೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಹಬ್ಬ. ಸರ್ಕಾರವಷ್ಟೇ ಅನುದಾನ ನೀಡಬೇಕಿಲ್ಲ. ದಾನಿಗಳ ನೆರವು ಪಡೆಯಲಾಗುವುದು. ಉಳ್ಳವರು ಮತ್ತು ಇಲ್ಲದವರನ್ನು ಸೇರಿಸಿ ಸಮ್ಮೇಳನ ಆಚರಿಸಲಾಗುವುದು’ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

Advertisement

ಸಮ್ಮೇಳನ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ಸಮ್ಮೇಳನ ವನ್ನು ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದರು. ಇನ್ನು ವಸತಿ, ಸಾರಿಗೆ, ಪ್ರಚಾರ ಆರೋಗ್ಯ ಮತ್ತು ಕಲಾತಂಡಗಳಿಗೆ ವಹಿಸಬೇಕಾದ ವೆಚ್ಚವನ್ನು ಆಯಾ ಸಮಿತಿ ಮಂಡಿಸಿದ ಅಂದಾಜು ಪಟ್ಟಿ ಕೇಳಿ ಕಾರಜೋಳ ಅಚ್ಚರಿ ವ್ಯಕ್ತಪಡಿಸಿದರು.

ಕಾರ್ಖಾನೆ, ಶಿಕ್ಷಣ ಸಂಸ್ಥೆ ಮತ್ತು ಜಿಲ್ಲೆಯ ವಿವಿಧ ಗಣ್ಯರನ್ನು ಸಂಪರ್ಕಿಸಿ. ಅವರಿಗೆ ಅಧಿಕೃತ ಪತ್ರ ಬರೆದು ದೇಣಿಗೆ ನೀಡುವ ಅಥವಾ ಕೆಲ ಜವಾಬ್ದಾರಿ ವಹಿಸಿ. ಅಲ್ಲದೇ, ಪ್ರತಿ ಶಾಸಕರು ತಮ್ಮ ಕ್ಷೇತ್ರದಿಂದ ತಲಾ 10 ಲಕ್ಷ ರೂ. ದೇಣಿಗೆ ಸಂಗ್ರಹಿಸಿ ಎಂದು ಸೂಚಿಸಿದರು.

5.74 ಲಕ್ಷ ಜನರಿಗೆ ಊಟ: ಶಿಸ್ತುಬದ್ಧವಾಗಿ ಊಟದ ವ್ಯವಸ್ಥೆಗಾಗಿ 80 ಕೌಂಟರ್‌ ಮತ್ತು 200 ಶುದ್ಧ ನೀರಿನ ಕೌಂಟರ್‌ ತೆರೆಯಲು ನಿರ್ಧರಿಸಲಾಗಿದೆ. ಈ ಹಿಂದಿನ ಸಮ್ಮೇಳನದ ಲೆಕ್ಕದ ಆಧಾರದ ಮೇಲೆ ಈ ಸಮ್ಮೇಳನದಲ್ಲಿ 3 ದಿನಗಳಲ್ಲಿ 5,74,650 ಜನರಿಗೆ ಅಡುಗೆ ಮಾಡಿಸಲು ಅಂದಾಜಿಸಲಾಗಿದೆ. ಊಟಕ್ಕೆ ಅಡಕೆ ತಟ್ಟೆ ಬಳಕೆ ಮಾಡಲಾಗುವುದು ಎಂದು ಆಹಾರ ಸಮಿತಿ ಕಾರ್ಯಾಧ್ಯಕ್ಷ ಡಾ.ರಿತೇಂದ್ರನಾಥ ಸುಗೂರ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next