Advertisement

ರಾಜ್ಯದ ಮೊದಲ ಆಕ್ಸಿಜನ್ ಘಟಕಕ್ಕೆ ಡಿಸಿಎಂ ಕಾರಜೋಳ‌ ಚಾಲನೆ

07:00 PM May 21, 2021 | Team Udayavani |

ಮುಧೋಳ : ಕೊರೊನಾ ವೈರಸ್ ನಿಯಂತ್ರ ಹಿನ್ನೆಲೆ ರಾಜ್ಯದಲ್ಲಿ ನಿರ್ಮಾಣಗೊಳ್ಳುತ್ತಿರುವ ಮೊದಲ ಆಕ್ಸಿಜನ್ ಘಟಕಕ್ಕೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ನಗರದ‌ ತಾಲೂಕು ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಇಂದು ಚಾಲನೆ ನೀಡಿದರು.

Advertisement

ಸುದ್ದಿಗಾರರೊಂದಿಗೆ ಮಾನಾಡಿದ ಅವರು, 18ರಿಂದ 20 ಜಂಬೂ ಸಿಲಿಂಡರ್ ಸಾಮರ್ಥ್ಯದ ಘಟಕದಲ್ಲಿ ಇನ್ನುಮುಂದೆ ನಿತ್ಯ ಆಕ್ಸಿಜನ್ ಉತ್ಪಾದನೆಯಾಗಲಿದ್ದು ತಾಲೂಕಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಹೆಚ್ಚಿನ ಸಹಕಾರಿಯಾಗಲಿದೆ ಎಂದು ಹೇಳಿದರು.
ಕೊರೊನಾ ನಿಯಂತ್ರಣಕ್ಕಾಗಿ ಅಧಿಕಾರಿಗಳು ಹಗಲಿರುಳು ಶ್ರಮಿಸಬೇಕು ಎಂದು ಸೂಚಿಸಿದರು.

ಜೆಕೆ ಸಿಮೆಂಟ್ಸ್ ನಿಂದ ವೆಂಟಿಲೇಟರ್ : ತಾಲೂಕಿನ ಜೆಕೆ ಸಿಮೆಂಟ್ಸ್ ನ ಮಾಲೀಕರಿಗೆ 30 ವೆಂಟಿಲೇಟರ್ ಟ್ರಾನ್ಸಿಸ್ಟರ್ ನೀಡುವಂತೆ ಮನವಿ‌ ಮಾಡಿಕೊಂಡಿದ್ದೆ ನನ್ನ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಅವರು ಕೂಡಲೇ 12 ವೆಂಟಿಲೇಟರ್‌ ಟ್ರಾನ್ಸಿಟ್ಸರ್ ಒದಗಿಸಲು ಒಪ್ಪಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಟ್ರಾನ್ಸಿಟ್ಸರ್ ಒದಗಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ :ರಾಜ್ಯದಲ್ಲಿಂದು 52,581 ಮಂದಿ ಗುಣಮುಖ; 32,218 ಹೊಸ ಪ್ರಕರಣ ಪತ್ತೆ, 353 ಜನರು ಸಾವು

ಆಕ್ಸಿಜನ್ ಘಟಕ ನಿರ್ವಹಣೆಗಾಗಿ ನುರಿತ ಸಿಬ್ಬಂದಿ ನೇಮಕಕ್ಕಾಗಿ ಕ್ರಮ ಕೈಗೊಂಡಿದ್ದೇವೆ. ಕ್ಷೇತ್ರದಲ್ಲಿ ಯಾರೇ ಕೋರೊನಾ ಸೋಂಕಿತರು ಬಂದರೂ ಅವರಿಗೆ ಸೂಕ್ತ ಚಿಕಿತ್ಸೆ ಒದಗಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಮಣ್ಣ ತಳೇವಾಡ, ಬಿಜೆಪಿ ಮುಖಂಡ ಕೆ.ಆರ್. ಮಾಚಪ್ಪನವರ, ರವಿ ನಂದಗಾವಿ, ಜಿಲ್ಲಾಧಿಕಾರಿ ಕ್ಯಾ.ಡಾ.ರಾಜೇಂದ್ರ, ಜಿಲ್ಲಾ ಆರೋಗ್ಯಾಧಿಕಾರಿ ದೇಸಾಯಿ, ತಹಸೀಲ್ದಾರ ಸಂಗಮೇಶ ಬಾಡಗಿ, ತಾಲೂಕು ಪಂಚಾಯಿತಿ ಇಒ ಕಿರಣ ಘೋರ್ಪಡೆ, ಟಿಎಚ್ಒ ವೆಂಕಟೇಶ ಮಲಘಾಣ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮೋಹನ ಕೋರಡ್ಡಿ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next