Advertisement

ಮುಂದುವರಿದ ಪ್ರವಾಹ ಹಾನಿ ಸಮೀಕ್ಷೆ: ಡಿಸಿಎಂ ಗೋವಿಂದ ಕಾರಜೋಳ

04:23 PM Aug 16, 2020 | keerthan |

ಕಲಬುರಗಿ: ರಾಜ್ಯದಲ್ಲಿ ಪ್ರಸಕ್ತವಾಗಿ ಎದುರಾಗಿರುವ ಪ್ರವಾಹದಿಂದ ಹಾನಿಯಾಗಿರುವ ರಸ್ತೆ, ಸೇತುವೆ ಹಾಗೂ ಇಲಾಖಾ ಕಟ್ಟಡಗಳ ಸಮೀಕ್ಷೆ ಮುಂದುವರೆದಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

Advertisement

ಸೇಡಂ ಪಟ್ಟಣದಲ್ಲಿಂದು 150 ಕೋಟಿ ರೂ ಮೊತ್ತದ ವಿವಿಧ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಮಳೆಯಿಂದ ಲೋಕೋಪಯೋಗಿ ಇಲಾಖೆಯ 2700 ಕೋಟಿ ರೂ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಕಳೆದ ವರ್ಷ ಪ್ರವಾಹದಿಂದ 8000 ಕೋಟಿ ರೂ ಹಾನಿಯಾಗಿತ್ತು. ಆದರೆ ಕೋವಿಡ್-19 ಆರ್ಥಿಕ ಸಂಕಷ್ಟ ನಡುವೆ ಮುಖ್ಯಮಂತ್ರಿ ಗಳು ಸಮಾಜ ಹಾಗೂ ಲೋಕೋಪಯೋಗಿ ಇಲಾಖೆಗೆ ಹೆಚ್ಚಿನ ಅನುದಾನ ನೀಡುತ್ತಿದ್ದಾರೆ ಎಂದರು.

ಕೋವಿಡ್ ‌ಮಧ್ಯೆಯೂ ಸಮಾಜ ಕಲ್ಯಾಣ ಇಲಾಖೆಯಿಂದ ವಸತಿ ಶಾಲೆ ನಿರ್ಮಾಣ: ಕೋವಿಡ್-19 ಸೋಂಕು ಹಾವಳಿ ಮಧ್ಯೆಯೂ ರಾಜ್ಯದಾದ್ಯಂತ ಸಮಾಜ ಕಲ್ಯಾಣ ‌ಇಲಾಖೆಯಿಂದ ವಸತಿ ಶಾಲೆಗಳ ನಿರ್ಮಾಣ ಹಾಗೂ ವಸತಿನಿಲಯಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ‌ ಎಂದು ಗೋವಿಂದ ಕಾರಜೋಳ ತಿಳಿಸಿದರು.

ರಾಜ್ಯದಾದ್ಯಂತ ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 47 ವಸತಿ ಶಾಲೆಗಳ ಕಟ್ಟಡ ಪೂರ್ಣಗೊಂಡಿದೆ. 181 ವಸತಿಶಾಲೆಗಳ ಕಟ್ಟಡ ನಿರ್ಮಾಣ ಪ್ರಗತಿಯಲ್ಲಿದೆ. ಇದರಿಂದಾಗಿ ಬಡವರ ‌ಮಕ್ಕಳಿಗೂ ಶಿಕ್ಷಣ ‌ಸಿಗುತ್ತಿದ್ದು, ಇಲಾಖೆಯ ವಸತಿ ಶಾಲೆಗಳಲ್ಲಿ ಓದಿದ ಮಕ್ಕಳ ‌ಫಲಿತಾಂಶ ಎಸ್ಎಸ್ಎಕ್ ಸಿ ಹಾಗೂ ಪಿಯುಸಿಯಲ್ಲಿ ರಾಜ್ಯದ ಸರಾಸರಿಗಿಂತಲೂ ಉತ್ತಮವಾಗಿದೆ ಎಂದರು.

Advertisement

ಮಾಜಿ ಸಂಸದ ಹಾಗೂ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ್ ಸೇಡಂ, ಕೆಕೆಆರ್ ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ, +ಸಂಸದ ಡಾ. ಉಮೇಶ ಜಾಧವ್, ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ, ಬಿ.ಜಿ.ಪಾಟೀಲ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಲಾಜಿ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next