ಜಮಖಂಡಿ: ರಾಜ್ಯದಲ್ಲಿ ಕೆರೆಕಟ್ಟೆ, ಅರಣ್ಯ ಪ್ರದೇಶಗಳು ಒತ್ತುವರಿಯಾಗುತ್ತಿವೆ. ಇದರಿಂದ ಪ್ರಕೃತಿ ನಾಶವಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ವಲಯ ಅರಣ್ಯಾಧಿಕಾರಿಗಳ ಕಚೇರಿ ಮತ್ತು ಸಾಮಾಜಿಕ ಅರಣ್ಯ ವಲಯದ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಪೂರ್ವಜರು ಕೆರೆಕಟ್ಟೆ, ಗಿಡಮರ ಬೆಳೆಸುವ ಮೂಲಕ ಮಾದರಿಯಾಗಿದ್ದರು. ಈಗ ಒತ್ತುವರಿಯಿಂದ ನದಿಗಳ ಮೂಲ ಸ್ವರೂಪ ಬದಲಾಗಿ ಹೊಲ ಗದ್ದೆಗಳು, ನಗರಪ್ರದೇಶಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತವಾಗುತ್ತಿದೆ ಎಂದರು.
ಮುಧೋಳ ತಾಲೂಕಿನಲ್ಲಿ ಹರಿಯುತ್ತಿರುವ ಮಲಪ್ರಭಾ ನದಿ ಮೂಲದಲ್ಲಿ ಅಂದಾಜು 150 ಮೀಟರ್ ಅಗಲವಿದೆ. ಒತ್ತುವರಿಯಿಂದ ಈಗ ಕೇವಲ 30 ಮೀಟರ, ಇನ್ನೊಂದು ಕಡೆ 18 ಮೀಟರ್ ನದಿಯಾಗಿದೆ. ನದಿ ಪರಿವರ್ತನೆಗೊಂಡು ಒಂದು ಸಣ್ಣ ಕಾಲುವೆಯಾಗಿ ಪರಿವರ್ತನೆಗೊಂಡಿದೆ. ನದಿಗೆ 5 ಸಾವಿರ ಕೂಸೆಕ್ ನೀರು ಬಂದರೆ ಗ್ರಾಮಗಳು ಜಲಾವೃತಗೊಳ್ಳುತ್ತಿವೆ. ಇದರಿಂದ ಪ್ರತಿವರ್ಷ ಹಾನಿಯಾಗುತ್ತಿದೆ. ಸರಕಾರ ಕೆರೆ, ನದಿಗಳಿಗೆ ಒತ್ತುವರಿ ಮಾಡುವ ಅವಕಾಶ ಕೊಡುತ್ತಿಲ್ಲ. ಅರಣ್ಯ ಪ್ರದೇಶವನ್ನು ಕೂಡಾ ಒತ್ತುವರಿ ಮಾಡಲು ಕೊಡುತ್ತಿಲ್ಲ ಎಂದರು.
ಇದನ್ನೂ ಓದಿ :ಖರ್ಗೆ ವಿಪಕ್ಷ ನಾಯಕ : ಕಾಂಗ್ರೆಸ್‌ಹರ್ಷ
ಶಾಸಕ ಆನಂದ ನ್ಯಾಮಗೌಡ ಮಾತನಾದರು. ನಗರಸಭೆ ಅಧ್ಯಕ್ಷ ಸಿದ್ದು ಮೀಸಿ, ಉಪಾಧ್ಯಕ್ಷೆ ಮಲ್ಲವ್ವ ಪಾಯಗೊಂಡ, ಜಿಪಂ ಸದಸ್ಯ ಬಸವರಾಜ ಬಿರಾದಾರ, ತಾಪಂ ಅಧ್ಯಕ್ಷೆ ಸವಿತಾ ಕಲ್ಯಾಣಿ, ಉಪಾಧ್ಯಕ್ಷೆ ಸುಂದ್ರವ್ವ ಬೆಳಗಲಿ, ಬಾಗಲಕೋಟೆ ಉಪ ಅರಣ್ಯ ಸಂರಕ್ಷಣಾ ಧಿಕಾರಿ ಎಸ್.ಬಿಸಾವಂತ, ಜಿಲ್ಲಾ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ಎಸ್. ನೇಗಿನಾಳ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ಎಸ್. ಚೌಗಲಾ, ಅರಣ್ಯ ವಲಯ ಅಧಿಕಾರಿಗಳಾದ ಡಿ.ಎಲ್. ಕುಲಕರ್ಣಿ, ಆರ್.ಡಿ. ಬಬಲಾದಿ, ಪ್ರದೀಪ ರಾಠೊಡ, ಪವನ ಕುರನಿಂಗ ಇದ್ದರು.