Advertisement
ವಿಧಾಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಡುಕ್ಕಿ ಜಿಲ್ಲೆಯ ತೊಡುಪ್ಪುಳದಲ್ಲಿ ಸಂಜೆ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು; ಎಪ್ಪತ್ತುಮೂರು ವರ್ಷಗಳ ದುರಾಡಳಿತ ಸಾಕು. ಒಬ್ಬಾರಾದ ಮೇಲೋಬ್ಬರು ಕೇರಳವನ್ನು ಕತ್ತಲೆಯಲ್ಲಿಟ್ಟು ಹಾಳು ಮಾಡಿದ್ದು ಸಾಕು. ಇನ್ನಾದರೂ ಹೊಸ ರಾಜಕೀಯ ಶಕ್ತಿ ಉದಯಕ್ಕೆ ಅವಕಾಶ ನೀಡಿ ಎಂದು ಜನತೆಗೆ ಕರೆ ನೀಡಿದರು.
Related Articles
Advertisement
ಇದನ್ನೂ ಓದಿ:ಹರ್ಯಾಣದಲ್ಲಿ ಹಾಲಿನ ದರ ಲೀ.ಗೆ 100 ರೂ! ಅಚ್ಚರಿಯಾದರೂ ಇದು ಸತ್ಯ
ಸ್ವಾವಲಂಭನೆಯತ್ತ ಭಾರತ
ಅನೇಕ ಕ್ಷೇತ್ರಗಳಲ್ಲಿ, ಮುಖ್ಯವಾಗಿ ವೈದ್ಯಕೀಯ ಕ್ಷೇತ್ರದಲ್ಲಿ ನಾವು ಅನೇಕ ದೇಶಗಳನ್ನು ಅವಲಂಭಿಸಿದ್ದೆವು. ಆದರೆ ಇಂದು ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ನಾವು ಸ್ವಾವಲಂಭನೆ ಸಾಧಿಸಿದ್ದೇವೆ. ನಮಗೆ ಅಗತ್ಯವಿರುವ ಎಲ್ಲ ಉತ್ಪನ್ನಗಳೂ ನಮ್ಮಲ್ಲೇ ತಯಾರಾಗುತ್ತಿವೆ. ಆತ್ಮನಿರ್ಭರ ಭಾರತ ಕಲ್ಪನೆಯಡಿ ಭಾರತ ಸಂಪೂರ್ಣವಾಗಿ ಸ್ವಾವಲಂಭನೆಯತ್ತ ಸಾಗುತ್ತಿದೆ ಎಂದು ಡಾ.ಅಶ್ವತ್ಥನಾರಾಯಣ ಒತ್ತಿ ಹೇಳಿದರು.
ಕೆಲವರು ಭಯೋತ್ಪಾದಕರನ್ನು ಬೆಳೆಸುತ್ತಿದ್ದರು, ಉತ್ತೇಜಿಸುತ್ತಿದ್ದರು. ನಾವು ಅವರನ್ನು ಅವರನ್ನು ನಾಶಪಡಿಸಿದ್ದೇವೆ. ಚೀನಾ ಹಿಂದೆ ದೊಡ್ಡ ಶಕ್ತಿಯಾಗಿತ್ತು, ಈಗಲ್ಲ. ಭಾರತವು ಆ ದೇಶವನ್ನು ಮೀರಿ ಬೆಳೆಯುತ್ತಿದೆ. ನಮ್ಮ ತಾಕತ್ತು ಏನು ಎಂಬುದನ್ನು ಅವರಿಗೆ ತೋರಿಸಿದ್ದೇವೆ. ನಮ್ಮ ದೇಶದ ಒಂದು ಇಂಚು ಭೂಭಾಗವನ್ನೂ ಕಬಳಿಸಲು ಅವರಿಗೆ ಸಾಧ್ಯವಾಗಿಲ್ಲ ಎಂದರೆ ಬಾರತ ಯಾವ ದಿಕ್ಕಿನತ್ತ ಸಾಗುತ್ತಿದೆ ಎಂಬುದನ್ನು ಊಹೆ ಮಾಡಬಹುದು ಎಂದು ಡಿಸಿಎಂ ನುಡಿದರು.
ಕೇರಳ ಬಿಜೆಪಿಯ ಹಲವಾರು ನಾಯಕರು, ಇಡುಕ್ಕಿ ಜಿಲ್ಲೆಯ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.