Advertisement
ನಗರದ ಯಲಹಂಕ, ಬ್ಯಾಟರಾಯನಪುರ, ಅಮೃತಹಳ್ಳಿ ಕಾಲೋನಿ, ಥಣೀಸಂದ್ರ, ರಾಚೇನಹಳ್ಳಿ, ಚೊಕ್ಕನಹಳ್ಳಿ ಸೇರಿದಂತೆ ನಗರದ ಹಲವು ಭಾಗಗಳಿಗೆ ಭೇಟಿ ನೀಡಿದ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ, ಸ್ಥಳೀಯರಿಂದಲೂ ಅಭಿಪ್ರಾಯ ಪಡೆದುಕೊಂಡರು. ಅಲ್ಲದೆ, ಅಗತ್ಯ ಸೌಲಭ್ಯ ಕಲ್ಪಿಸುವಂತೆ ಅಧಿಕಾರಿಗಳಿಗೂ ಸೂಚಿಸಿದರು.
Related Articles
Advertisement
ಸಹಾಯವಾಣಿ
“ರಾಜ್ಯಮಟ್ಟದ ಸಹಾಯವಾಣಿ 104, ಕಾರ್ಮಿಕ ಇಲಾಖೆಯ ಸಹಾಯವಾಣಿ, ಬಿಬಿಎಂಪಿಯ ಸಹಾಯವಾಣಿಗೂ ಕರೆ ಮಾಡಿ ಜನ ನೆರವು ಪಡೆಯಬಹುದು. ಊಟ ವಸತಿ ಅಷ್ಟೇ ಅಲ್ಲ ಇರುವ ಸ್ಥಳದಿಂದಲೇ ದೂರವಾಣಿ ಮೂಲಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ‘ಟೆಲಿ ಕನ್ಸಲ್ಟೇಷನ್’ ಸಹ ಮಾಡಲಾಗುತ್ತಿದೆ. ಫೋನ್ ವ್ಯವಸ್ಥೆ ಬಳಕೆ ತಿಳಿಯದವರ ಬಳಿಗೆ ಬಿಬಿಎಂಪಿ ಅಧಿಕಾರಿಗಳೇ ತೆರಳಿ, ಅಗತ್ಯ ಸೌಲಭ್ಯ ಕಲ್ಪಿಸುತ್ತಿದ್ದಾರೆ,”ಎಂದು ವಿವರಿಸಿದರು.
ಅಟ್ಟೂರಿನಲ್ಲಿ ತಾತ್ಕಾಲಿಕ ಮಾರುಕಟ್ಟೆ
ತೋಟಗಾರಿಕೆ ಇಲಾಖೆ ವತಿಯಿಂದ ಯಲಹಂಕದ ಅಟ್ಟೂರಿನ ಪೂರ್ವಂಕರ ಅಪಾರ್ಟ್‌ಮೆಂಟ್ ಬಳಿ ನಿರ್ಮಿಸಿರುವ ಹಣ್ಣು- ತರಕಾರಿಯ ತಾತ್ಕಾಲಿಕ ಮಾರುಕಟ್ಟೆ ವ್ಯವಸ್ಥೆಯನ್ನು ಉಪಮುಖ್ಯಮಂತ್ರಿ ಪರಿಶೀಲಿಸಿದರು. ಯಲಹಂಕ ಶಾಸಕರೂ ಆಗಿರುವ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್. ಆರ್. ವಿಶ್ವನಾಥ್ ಜತೆ ಇದ್ದರು.
ಆಹಾರ/ಪಡಿತರ ಪೂರೈಕೆ ಆಗುತ್ತಿರುವುದನ್ನು ಖಚಿತಪಡಿಸಿಕೊಂಡರು. ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡ ಮುನೇಂದ್ರ ಅವರು ಸ್ವಂತ ಹಣದಿಂದ ಒದಗಿಸಿರುವ 10,000 ಪಡಿತರ ಕಿಟ್‌ಗಳನ್ನು ವಿತರಿಸುವ ಕಾರ್ಯಕ್ರಮ ಅಶ್ವತ್ಥನಾರಾಯಣ ಚಾಲನೆ ನೀಡಿದರು.