Advertisement

50 ಲ.ರೂ. ವಿಮೆ ಘೋಷಿಸಿದ ಡಿಸಿಎಂ

07:14 AM Jun 01, 2020 | Suhan S |

ಮುಂಬಯಿ, ಮೇ 31: ಕೋವಿಡ್ ವೈರಸ್‌ ತಡೆ ಗಟ್ಟುವಿಕೆ ಮತ್ತು ರೋಗಿಗಳ ಚಿಕಿತ್ಸೆಗೆ ಸಂಬಂಧಿಸಿದ ಕರ್ತವ್ಯಗಳನ್ನು ನಿರ್ವಹಿಸುವ ಸರಕಾರಿ, ಖಾಸಗಿ, ಗುತ್ತಿಗೆ ಮತ್ತು ಹೊರಗುತ್ತಿಗೆ ಸಿಬಂದಿಗೆ 50 ಲಕ್ಷ ರೂ. ವಿಮಾ ರಕ್ಷಣೆ ನೀಡಲು ಮಹಾರಾಷ್ಟ್ರ ಸರಕಾರ ನಿರ್ಧರಿಸಿದೆ ಎಂದು ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರು ತಿಳಿಸಿದ್ದಾರೆ.

Advertisement

ಆರ್ಥಿಕ ಪ್ಯಾಕೇಜ್‌ ಅಂತಿಮಗೊಳ್ಳುವವರೆಗೆ ಮಧ್ಯಂತರ ನಿರ್ಧಾರವಾಗಿ ಸಂಬಂಧಪಟ್ಟವರಿಗೆ 50 ಲಕ್ಷ ರೂ. ನೀಡಲಾಗುವುದು. ಮಾನವಶಕ್ತಿ, ರೋಗದ ಸಮೀಕ್ಷೆ, ಪತ್ತೆಹಚ್ಚುವಿಕೆ, ಪರೀಕ್ಷೆ, ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳುವುದು ಮತ್ತು ಸಾಂಕ್ರಾಮಿಕ ಸಮಯದಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡುವವರಿಗೆ ಪರಿಹಾರ ನೀಡುವಲ್ಲಿ ನಮ್ಮ ಸರಕಾರ ನಿರತವಾಗಿದೆ ಎಂದು ಎಂದು ಹಣಕಾಸು ಸಚಿವರಾಗಿರುವ ಪವಾರ್‌ ಅವರು ಹೇಳಿದ್ದಾರೆ.

ಸಿಬ್ಬಂದಿ ಮತ್ತು ಅವರ ಕುಟುಂಬಗಳ ಸುರಕ್ಷತೆಯ ಬಗ್ಗೆ ಸರಕಾರ ಗಂಭೀರವಾಗಿ ಚಿಂತಿಸುತ್ತಿದೆ. ಆದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪವಾರ್‌ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆರೋಗ್ಯ ಸೇವೆಗಳಲ್ಲಿರುವವರು ಈಗಾಗಲೇ ಕೇಂದ್ರ ಹಲವಾರು ಯೋಜನೆಗಳ ಪ್ರಯೋಜನ ಪಡೆಯುತ್ತಿದ್ದಾರೆ. ರಾಜ್ಯ ಸರಕಾರದ ನಿರ್ಧಾರವು ಜಿಲ್ಲೆಗೆ ಸೇರಿದ ಸಿಬ್ಬಂದಿಗೆ ಸಹಾಯ ಮಾಡುತ್ತದೆ. ಆಡಳಿತಗಳು, ಪೊಲೀಸ್‌, ಗೃಹರಕ್ಷಕರು, ಅಂಗನವಾಡಿ, ಆಹಾರ ಮತ್ತು ನಾಗರಿಕ ಸರಬರಾಜು, ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಗಳು ಮತ್ತು ಮನೆ-ಮನೆಗೆ ಸಮೀಕ್ಷೆ ನಡೆಸುವ ಸಿಬ್ಬಂದಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಆಸ್ಪತ್ರೆಯಲ್ಲಿ ದಾಖಲಾಗುವ ಅಥವಾ ರೋಗದಿಂದ ಸಾವನ್ನಪ್ಪುವ 14 ದಿನಗಳ ಮೊದಲು ಒಬ್ಬ ಸಿಬ್ಬಂದಿ ಕರ್ತವ್ಯದಲ್ಲಿದ್ದರು ಎಂದು ಜಿಲ್ಲಾಧಿಕಾರಿಗಳು ಅಥವಾ ವಿಭಾಗದ ಮುಖ್ಯಸ್ಥರು ಪ್ರಮಾಣೀಕರಿಸುವ ಅವಶ್ಯಕತೆಯಿದೆ. ಇದರಿಂದಾಗಿ ನೌಕರನು ವಿಮಾ ರಕ್ಷಣೆಯ ಲಾಭವನ್ನು ಪಡೆಯಬಹುದು. ಈಗಿನಂತೆ ಈ ಯೋಜನೆ ಸೆಪ್ಟೆಂಬರ್‌ 30 ರವರೆಗೆ ಅನ್ವಯವಾಗಲಿದೆ ಎಂದು ಪವಾರ್‌ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next