ಗೌರಿಬಿದನೂರು: ಗ್ರಾಮೀಣ ಭಾಗದಸ್ತ್ರೀಶಕ್ತಿ ಸ್ವಸಹಾಯ ಸಂಘಗಳಿಗೆ ಸಾಲಸೌಲಭ್ಯ ಒದಗಿಸುವ ಮೂಲಕ ಅವರಬದುಕಿಗೆ ಡಿಸಿಸಿ ಬ್ಯಾಂಕ್ ಆಸರೆ ಆಗಿದೆಎಂದು ಶಾಸಕ ಎನ್.ಎಚ್.ಶಿವಶಂಕರರೆಡ್ಡಿತಿಳಿಸಿದರು.
ತಾಲೂಕಿನ ರಮಾಪುರದಲ್ಲಿ ವಿಎಸ್‌ಎಸ್‌ಎನ್‌ನಿಂದ ಫಲಾನುಭವಿಗಳಿಗೆ ಸಾಲದಎಟಿಎಂ ಕಾರ್ಡ್ ವಿತರಿಸಿ ಮಾತನಾಡಿದ ಅವರು, ಕೊರೊನಾ ಸೋಂಕಿನಪ್ರಭಾವದಿಂದ ಪ್ರತಿ ಮನೆಯ ಆದಾಯದಮೂಲ ಸ್ಥಗಿತಗೊಂಡು ಕುಟುಂಬನಿರ್ವಹಣೆ ಕಷ್ಟವಾಗಿದೆ. ಸ್ವಾವಲಂಬಿಬದುಕು ಸಾಗಿಸುವ ಮಹಿಳೆಯರ ಕೈಬಲಪಡಿಸಲು ಬಡ್ಡಿ ರಹಿತವಾಗಿ ಸ್ತ್ರೀ ಶಕ್ತಿಸಂಘಗಳ ಮೂಲಕ ಡಿಸಿಸಿ ಬ್ಯಾಂಕ್ ಸಾಲನೀಡುತ್ತಿದೆ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿಗೋವಿಂದಗೌಡ ಮಾತನಾಡಿ, ಈಭಾಗದಲ್ಲಿನ ಬಡ ಮತ್ತು ಮಧ್ಯಮ ವರ್ಗಗಳಿಗೆ ಸಾಲ ಸೌಲಭ್ಯ ನೀಡುವ ಮೂಲಕಅವರಕುಟುಂಬಕ್ಕೆಬ್ಯಾಂಕ್‌ಆಸರೆಯಾಗಿದೆಎಂದು ಹೇಳಿದರು.ಡಿಸಿಸಿ ಬ್ಯಾಂಕ್ ನಿರ್ದೇಶಕ ಮರಳೂರುಹನುಮಂತರೆಡ್ಡಿ ಮಾತನಾಡಿ, ಅವಿಭಜಿತ ಜಿಲ್ಲೆಯ ಗ್ರಾಮೀಣ ಮಹಿಳೆಯರ ಬದುಕಿಗೆ ಡಿಸಿಸಿ ಬ್ಯಾಂಕ್ ಆಸರೆಯಾಗಿದೆ. ಸಕಾಲದಲ್ಲಿ ಅವರ ಸಂಕಷ್ಟಕ್ಕೆ ಸ್ಪಂದಿಸುವ ಮೂಲಕಸಾಕಷ್ಟು ಕುಟುಂಬಗಳಿಗೆ ಬೆನ್ನೆಲುಬಾಗಿದೆ.
ಮಹಿಳೆಯರು ತಮ್ಮ ಗ್ರಾಮಗಳಲ್ಲಿಯೇಹೈನುಗಾರಿಕೆ, ಕೋಳಿ ಸಾಕಾಣಿಕೆ, ಆಹಾರಪದಾರ್ಥಗಳ ಸಿದ್ಧಪಡಿಸುವಿಕೆ ಸೇರಿಇನ್ನಿತರಸ್ವ ಉದ್ಯೋಗ ಕೈಗೊಳ್ಳಲು ಸಾಧ್ಯವಾಗುತ್ತದೆಎಂದು ಹೇಳಿದರು.
ರಮಾಪುರ ವ್ಯವಸಾಯ ಸೇವಾಸಹಕಾರದಲ್ಲಿ ಒಟ್ಟು28 ಸ್ತ್ರೀ ಶಕ್ತಿ ಸ್ವಸಹಾಯಗುಂಪುಗಳಿಗೆ 1.4 ಕೋಟಿ ರೂ. ಸಾಲದಎಟಿಎಂ ಕಾರ್ಡ್ ವಿತರಿಸಲಾಗಿದೆ ಎಂದುಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಮಹಮದ್‌ಅಸ್ಲಾಂ ತಿಳಿಸಿದರು.
ರಮಾಪುರ ವಿಎಸ್‌ಎಸ್‌ಎನ್ ಅಧ್ಯಕ್ಷಟಿ.ಎನ್.ನಾರಾಯಣಪ್ಪ, ಉಪಾಧ್ಯಕ್ಷೆಸುಶೀಲಮ್ಮ, ಕಾರ್ಯದರ್ಶಿ ರಾಮಣ್ಣ, ಡಿಸಿಸಿಬ್ಯಾಂಕ್‌ನ ಮೇಲ್ವಿಚಾರಕ ಚಂದ್ರಶೇಖರ್,ಮುಖಂಡರಾದ ಎಚ್.ಎನ್.ಪ್ರಕಾಶರೆಡ್ಡಿ,ಆರ್.ಇ.ರಾಮಕೃಷ್ಣಪ್ಪ, ವಿಎಸ್‌ಎಸ್‌ಎನ್‌ಆಡಳಿತ ಮಂಡಳಿ ನಿರ್ದೇಶಕ ಎಂ.ಆರ್.ಶ್ರೀನಿವಾಸರೆಡ್ಡಿ, ಬಿ.ಲಕ್ಷಿ ¾àಪತಿ, ರಾಮಪ್ಪ,ಎದ್ದಲಪ್ಪ, ಅಶ್ವತ್ಥಪ್ಪ, ಅಂಜಿನಪ್ಪ, ಮಲ್ಲಕ್ಕಭಾಗವಹಿಸಿದ್ದರು.