ಗುಡಿಬಂಡೆ: ಪಟ್ಟಣದ ಮುಖ್ಯರಸ್ತೆಯಲ್ಲಿರುವ ಭೈರೇಗೌಡ ಒಕ್ಕಲಿಗರ ಭವನದಲ್ಲಿ ನೂತನ ಡಿಸಿಸಿಬ್ಯಾಂಕ್ ಕಚೇರಿಯನ್ನು ಶಾಸಕ ಎಸ್.ಎನ್.ಸುಬ್ಟಾರೆಡ್ಡಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ ಸೇರಿದಂತೆ ಹಲವು ಗಣ್ಯರು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಶಾಸಕ ಎಸ್.ಎನ್. ಸುಬ್ಟಾರೆಡ್ಡಿ, ಈಗಾಗಲೇ ತಾಲೂಕಿನಾದ್ಯಂತ ಮಹಿಳಾ ಸಂಘಗಳಿಗೆ ಹಾಗೂ ರೈತರಿಗೆ ಕಡಿಮೆ ಬಡ್ಡಿದರದಲ್ಲಿ ನೀಡುವ ಸಾಲ ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದರು.
ಖಾತೆ ತೆರೆದು ವ್ಯವಹರಿಸಿ: ಡಿಸಿಸಿ ಬ್ಯಾಂಕ್ ಮಾತ್ರ ಮನೆ ಬಾಗಿಲಿಗೆ ಎಲ್ಲಾ ಬ್ಯಾಂಕಿಂಗ್ ವ್ಯವಹಾರ ನೀಡಲು ಸಜ್ಜಾಗಿದೆ. ಇತರೆ ಬ್ಯಾಂಕ್‌ಗಳಲ್ಲಿನೀಡುವಂತೆ ಎಲ್ಲ ರೀತಿಯ ಸಾಲ ನೀಡುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಖಾತೆ ತೆರೆದುವ್ಯವಹಾರ ನಡೆಸಬಹುದಾಗಿದೆ. ಹಾಲು ಉತ್ಪಾದಕರ ಸಂಘದ ಎಲ್ಲಾ ಖಾತೆಗಳನ್ನು ಈಬ್ಯಾಂಕ್ ಮೂಲಕವೇ ನಿರ್ವಹಿಸಿದರೆ ಹಾಗೂ ಪಟ್ಟಣದ ವರ್ತಕರು ಸಹ ಈ ಬ್ಯಾಂಕ್‌ನಲ್ಲಿಯೇವ್ಯವಹಾರ ನಡೆಸಿದರೆ ಬ್ಯಾಂಕ್ ಇನ್ನಷ್ಟು ಅಭಿವೃದ್ಧಿಯಾಗಲಿದೆ ಎಂದರು.
ಡಿಸಿಸಿ ಬ್ಯಾಂಕ್‌ನವರು ಮೊಬೈಲ್ ಬ್ಯಾಂಕ್ ವ್ಯವಸ್ಥೆಯನ್ನು ಪ್ರತಿ ಗ್ರಾಮಕ್ಕೂ ತಲುಪಿಸುವ ನಿಟ್ಟಿನಲ್ಲಿ 2 ವಾಹನಗಳನ್ನು ಕೇಳಿದ್ದು, ಅವರು ಕೊಟೇಷನ್ ನೀಡಿದ ವಾರದೊಳಗೆ ವ್ಯವಸ್ಥೆ ಮಾಡಿಕೊಡಲಾಗುವುದು ಎಂದರು.
ಮೈಕ್ರೋ ಎಟಿಎಂ ವ್ಯವಸ್ಥೆ: ಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, ಇಡೀ ಸಹಕಾರಿ ಬ್ಯಾಂಕ್‌ಗಳ ಇತಿಹಾಸದಲ್ಲಿಯೇ ಅದರಲ್ಲೂ ದೇಶದಲ್ಲಿಯೇ ಮೊದಲ ಬಾರಿಗೆ ಸಹಕಾರಿ ಬ್ಯಾಂಕ್‌ನಲ್ಲಿ ಮೈಕ್ರೋ ಎಟಿಎಂ ವ್ಯವಸ್ಥೆ ಜಾರಿಗೆ ತರಲಾಗಿದೆ. ಈ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ಖಾತೆ ತೆರೆಯುವುದರಿಂದ ಎಲ್ಲಾ ಸೇವೆ ಗಳನ್ನು ಒದಗಿಸಲಾಗುತ್ತದೆ ಎಂದು ತಿಳಿಸಿದರು.
ನಮ್ಮ ಬ್ಯಾಂಕ್‌ನ ಅಭಿವೃದ್ಧಿ ಮೆಚ್ಚಿ ನಬಾರ್ಡ್ ಬ್ಯಾಂಕ್‌ನಿಂದ ಸುಮಾರು 200 ಮೈಕ್ರೋ ಎಟಿಎಂ ಹಾಗೂ ಅಪೆಕ್ಸ್ ಬ್ಯಾಂಕ್ ವತಿಯಿಂದ ಶಾಖೆಗೆ ಕಂಪ್ಯೂಟರ್‌ಗಳು ಉಚಿತವಾಗಿ ನೀಡಿದ್ದಾರೆ ಎಂದರು.
ಈ ವೇಳೆ ಡಿಸಿಸಿ ಬ್ಯಾಂಕ್‌ನ ಮೈಕ್ರೋ ಎಟಿಎಂಗೆ ಶಾಸಕ ಎಸ್.ಎನ್.ಸುಬ್ಟಾರೆಡ್ಡಿ ಹಾಗೂ ಗಣ್ಯರು ಚಾಲನೆ ನೀಡಿದರು. ಒಕ್ಕಲಿಗರ ಸಂಘದ ಅಧ್ಯಕ್ಷಮಂಜುನಾಥ್,ಕಾರ್ಯದರ್ಶಿವೇಣುಗೋಪಾಲ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕಿ ಅನ್ಸಾರಿ, ಮುಖಂಡ ರಾದ ರಿಯಾಜ್, ಅನಿಲ್‌ಕುಮಾರ್, ಅಂಬರೀಶ್ ಇದ್ದರು.