Advertisement

ಅಭಿವೃದ್ಧಿ ಪಥದತ್ತ ಡಿಸಿಸಿ ಬ್ಯಾಂಕ್‌ ದಾಪುಗಾಲು

09:28 PM Jun 01, 2021 | Team Udayavani |

ಸುರಪುರ: 152 ಕೋಟಿಯಷ್ಟು ನಷ್ಟದಲ್ಲಿದ್ದ ಜಿಲ್ಲಾ ಸಹಕಾರ ಬ್ಯಾಂಕ್‌ ಪ್ರಸಕ್ತ ಸಾಲಿನಲ್ಲಿ 8 ಕೋಟಿಯಷ್ಟು ಲಾಭಗಳಿಸಿ ಅಭಿವೃದ್ಧಿಪಥದತ್ತ ದಾಪುಗಾಲಿಟ್ಟಿದೆ ಎಂದು ಕಲಬುರಗಿ-ಯಾದಗಿರಿ ಸಹಕಾರಿ ಬ್ಯಾಂಕ್‌ ಉಪಾಧ್ಯಕ್ಷ ಡಾ| ಸುರೇಶ ಸಜ್ಜನ್‌ ಹೇಳಿದರು. ನಗರದ ಉಸ್ತಾದ ಪೆಟ್ರೋಲ್‌ ಬಂಕ್‌ ಹತ್ತಿರದಲ್ಲಿ ನೂತನವಾಗಿ ನಿರ್ಮಿಸಿರುವ ಡಿಸಿಸಿ ಬ್ಯಾಂಕ್‌ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಶಾಸಕ ರಾಜುಗೌಡ ನೇತೃತ್ವದಲ್ಲಿ ಜಿಲ್ಲೆಯ ಎಲ್ಲ ಶಾಸಕರು ಸಚಿವರ ನಿಯೋಗ ಸಿಎಂ ಅವರನ್ನು ಭೇಟಿ ಮಾಡಿ ಮನವಿ ಮಾಡಲಾಗಿತ್ತು. ಮನವಿಗೆ ಸ್ಪಂದಿಸಿದ ಸಿಎಂ 10 ಕೋಟಿ ಶೇರು ಬಂಡವಾಳ ನೀಡಿದ್ದಾರೆ. ಜತೆಗೆ ಕೇಂದ್ರ ಕಚೇರಿ ಕಟ್ಟಡಕ್ಕೂ 10 ಕೋಟಿ ಅನುದಾನ ನೀಡುವುದರೊಂದಿಗೆ ಸಹಕಾರಿ ಕ್ಷೇತ್ರದ ಬಲರ್ವಧನೆಗೆ ನೆರವಾಗಿದ್ದಾರೆ.

ಈ ವೇಳೆ ಸಂಘದ ಪರವಾಗಿ ಸಿಎಂ ಅವರನ್ನು ಅಭಿನಂದಿಸುವುದಾಗಿ ಹೇಳಿದರು. ಬರುವ ದಿನಗಳಲ್ಲಿ ಬೆಳೆ ಸಾಲ ಪ್ರಮಾಣ ಹೆಚ್ಚಿಸಿ ರೈತರ ಬಲವರ್ಧನೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು. ರೈತರು ಹಣ ಪಡೆಯಲು ಮತ್ತು ತುಂಬಲು ಬ್ಯಾಂಕ್‌ ಗೆ ಬರುವ ತಾಪತ್ರಯ ತಪ್ಪಿಸುವ ಉದ್ದೇಶದಿಂದ ಕೆಲವೇ ದಿನಗಳಲ್ಲಿ ಮೊಬೈಲ್‌ ಬ್ಯಾಂಕ್‌ ಸೇವೆ ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ ಎಂದರು. ದೇವಾಪುರ ಜಡಿಶಾಂತಲಿಂಗೇಶ್ವರ ಮಠದ ಶಿವುಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಸಂಘದ ಆಡಳಿತ ಮಂಡಳಿ ರೈತ ಸ್ನೇಹಿಯಾಗಿ ಕೆಲಸ ಮಾಡಬೇಕು.

ಕೋವಿಡ್‌ ಸಂಕಷ್ಟದಲ್ಲಿರುವ ರೈತರ ಕಣ್ಣೀರೊರೆಸುವ ಮೂಲಕ ರೈತರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಸಲಹೆ ನೀಡಿದರು. ನಿರ್ದೇಶಕ ಶಿವಾನಂದ ಮಾಣಕರ್‌ ಮಾತನಾಡಿ, ಸಂಘದ ಅಭಿವೃದ್ಧಿಗೆ ನೂತನ ಆಡಳಿತ ಮಂಡಳಿ ಸಾಕಷ್ಟು ಶ್ರಮಿಸುತ್ತಿದೆ. ಜಿಲ್ಲೆಯಲ್ಲಿಯೇ ಇದೊಂದು ಮಾದರಿ ಸಂಘವನ್ನಾಗಿ ಮಾಡಲು ಅಧಿ ಕಾರಿ ಮತ್ತು ಸಿಬ್ಬಂದಿ ವರ್ಗ ಶ್ರಮಿಸಬೇಕು ಎಂದರು. ಸಂಘದ ತಾಲೂಕು ಅಧ್ಯಕ್ಷ ಬಾಪುಗೌಡ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು.

ಬ್ಯಾಂಕಿನ ಜನರಲ್‌ ಮ್ಯಾನೇಜರ್‌ ಚಿದಾನಂದ ನಿಂಬಾಳಕರ್‌, ಸಹಕಾರಿ ಅಭಿವೃದ್ಧಿ ಅಧಿ ಕಾರಿ ಮಲ್ಲಿಕಾರ್ಜುನ, ನಿರ್ದೇಶಕರಾದ ಶರಣಬಸಪ್ಪ ಅಷ್ಠಗಿ, ಬಸವರಾಜ ಪಾಟೀಲ, ನಿಂಗಣ್ಣ ಜೇವರ್ಗಿ, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ರಾಮನಗೌಡ ಸುಬೇದಾರ, ಕೃಷ್ಣ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಜಾ ಮುಕುಂದ ನಾಯಕ, ಕಿಶೋರಚಂದ್‌ ಜೈನ್‌, ಬಸವೇಶ್ವರ ಪತ್ತಿನ ಸಹಕಾರಿ ಸಂಘದ ನಿರ್ದೇಶಕಿ ಜಯಲಲಿತಾ ಪಾಟೀಲ, ಮಂಜುನಾಥ ಗುಳಗಿ ಇದ್ದರು. ಬ್ಯಾಂಕ್‌ ವ್ಯವಸ್ಥಾಪಕ ಬಸವರಾಜ ಸ್ವಾಗತಿಸಿದರು. ಶಿವರುದ್ರ ಉಳ್ಳಿ ನಿರೂಪಿಸಿ, ವಂದಿಸಿದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next