Advertisement

ಆರ್ಥಿಕ ಅಭಿವೃದ್ಧಿಗಾಗಿ ಡಿಸಿಸಿ ಬ್ಯಾಂಕ್‌ ನೆರವು

06:39 PM Feb 19, 2021 | Team Udayavani |

ಚಿಕ್ಕಬಳ್ಳಾಪುರ: ಬಡವರು ಮತ್ತು ಮಹಿಳೆಯರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸೇವೆ ಮಾಡಲು ಅವಕಾಶ ಹೊಂದಿರುವ ತಾವೇ ಪುಣ್ಯವಂತರು. ಸಿಕ್ಕಿರುವ ಅವಕಾಶವನ್ನು ಬಡವರ ಸೇವೆಗೆ ಮುಡುಪಾಗಿಟ್ಟು ಹೊಸ ಬದಲಾವಣೆ ತರಬೇಕೆಂದು ಡಿಸಿಸಿ ಬ್ಯಾಂಕ್‌ ನಿರ್ದೇಶಕ ಎಚ್‌. ಎಸ್‌.ಮೋಹನ್‌ರೆಡ್ಡಿ ಹೇಳಿದರು.  ನಗರದ ಪತ್ರಕರ್ತರ ಭವನದಲ್ಲಿ ಡಿಸಿಸಿ ಬ್ಯಾಂಕ್‌ ವತಿಯಿಂದ ಎಸ್‌.ಎಫ್‌.ಸಿ.ಎಸ್‌ ಹಾಗೂ ವಿ.ಎಸ್‌. ಎಸ್‌.ಎನ್‌ ಸೊಸೈಟಿಗಳಿಗೆ ಗಣಕಯಂತ್ರಗಳನ್ನು ವಿತರಿಸಿ ಮಾತನಾಡಿದ ಅವರು, ಸಮಾಜದಲ್ಲಿ ಬಡವರು, ಮಹಿಳೆಯರು ಹಾಗೂ ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಡಿಸಿಸಿ ಬ್ಯಾಂಕ್‌ ವತಿಯಿಂದ ಬಡ್ಡಿರಹಿತ ಸಾಲ ಸಹಿತ ಅನೇಕ ಸೌಲಭ್ಯಗಳನ್ನು ನೀಡುತ್ತಿದ್ದು, ಈ ಕುರಿತು ಜನರಲ್ಲಿ ಅರಿವು ಮತ್ತು ಜಾಗƒತಿ ಮೂಡಿಸಬೇಕೆಂದರು.

Advertisement

ಗ್ರಾಮೀಣ ಪ್ರದೇಶದಲ್ಲಿರುವ ಎಸ್‌.ಎಫ್‌ .ಸಿ.ಎಸ್‌ ಹಾಗೂ ವಿ.ಎಸ್‌.ಎಸ್‌.ಎನ್‌ ಸೊಸೈಟಿಗಳಲ್ಲಿ ವ್ಯವಸ್ಥೆಗಳನ್ನು ಪಾರದರ್ಶಕವಾಗಿರಲು ಡಿಸಿಸಿ ಬ್ಯಾಂಕ್‌ ಮೂಲಕ ಉಚಿತವಾಗಿ ಗಣಕಯಂತ್ರಗಳನ್ನು ನೀಡುತ್ತಿದ್ದೇವೆ. ಜನರ ಮನೆಬಾಗಿಲಿಗೆ ಬ್ಯಾಂಕಿನ ವ್ಯವಸ್ಥೆಯನ್ನು ಜಾರಿಗೊಳಿಸಲು ಮೊಬೈಲ್‌ ಬ್ಯಾಂಕಿಂಗ್‌ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದರು.

ಇದನ್ನೂ ಓದಿ:ವ್ಯಕ್ತಿತ್ವ ವಿಕಸನಕ್ಕೆ ಸಂವಹನ ಕೌಶಲ್ಯ ಸಹಕಾರಿ

ಸ್ವಸಹಾಯ ಸಂಘಗಳ ಪ್ರತಿನಿಧಿಗಳು ಸಹಬ್ಯಾಂಕ್‌ನಿಂದ ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿಸಿ ಬ್ಯಾಂಕ್‌ನ ಅಭಿವೃದ್ಧಿಗೆ ಸಹಕರಿಸುತ್ತಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಅಡ್ಡಗಲ್‌, ಮೈಲಪ್ಪನಹಳ್ಳಿ, ನಂದಿ, ದಿಬ್ಬೂರ್‌, ಚಿಕ್ಕಪೈಲಗುರ್ಕಿ ವಿ.ಎಸ್‌.ಎಸ್‌. ಎನ್‌ಗಳು, ಜಾತವಾರಹೊಸಹಳ್ಳಿ, ಕೊಲವನಹಳ್ಳಿ, ದೊಡ್ಡಮರಳಿ, ಕಸಬಾ ಪ್ಯಾಕ್ಸ್‌ಗಳಿಗೆ ಗಣಕಯಂತ್ರ ವಿತರಿಸಲಾಯಿತು.

Advertisement

ಡಿಸಿಸಿ ಬ್ಯಾಂಕ್‌ ನಿರ್ದೇಶಕ ಕೆ.ಎಸ್‌.ದ್ಯಾವಪ್ಪ, ಬಿ.ಆರ್‌.ಅಶ್ವತ್ಥಪ್ಪ, ಡಿಸಿಸಿ ಬ್ಯಾಂಕ್‌ ವ್ಯವಸ್ಥಾಪಕಿ ಜಿ.ಜ್ಯೋತಿ, ಮೇಲ್ವಿಚಾರಕಿ ಕೆ.ಎ.ವಸಂತಾ, ಜಾತವಾಹೊಸಹಳ್ಳಿ ಎಸ್‌.ಎಫ್‌.ಸಿ.ಎಸ್‌ ಬ್ಯಾಂಕ್‌ ಅಧ್ಯಕ್ಷ ಎಲ್‌.ಮುನಿರೆಡ್ಡಿ, ಕಸಬಾ ಪ್ಯಾಕ್ಸ್‌ ಅಧ್ಯಕ್ಷ ಚನ್ನಕೃಷ್ಣಪ್ಪ, ಮೈಲಪ್ಪನಹಳ್ಳಿ ವಿ.ಎಸ್‌.ಎಸ್‌.ಎನ್‌ ಅಧ್ಯಕ್ಷ ಜಗದೀಶ್‌ರೆಡ್ಡಿ ಹಾಗೂ ವಿವಿಧ ಸೊಸೈಟಿಗಳ ಸಿಇಒಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next