Advertisement

ತಿಂಗಳಲ್ಲಿ ನಾಲ್ಕು ದಿನ ತಹಶೀಲ್ದಾರರ ಕಚೇರಿಗೆ ಜಿಲ್ಲಾಧಿಕಾರಿ ಭೇಟಿ: ಸಚಿವ ಅಶೋಕ

02:22 PM May 28, 2022 | Team Udayavani |

ಬೀದರ್: ಕಂದಾಯ ಇಲಾಖೆಯಲ್ಲಿ ಮತ್ತಷ್ಟು ಸುಧಾರಣೆ ತರುವ ಪ್ರಯತ್ನ ಮಾಡಲಾಗುತ್ತಿದ್ದು, ಇನ್ಮುಂದೆ ಜಿಲ್ಲಾಧಿಕಾರಿಗಳು ತಿಂಗಳಲ್ಲಿ ನಾಲ್ಕು ಬಾರಿ ತಮ್ಮ ಜಿಲ್ಲೆಯ ತಾಲೂಕು ತಹಶೀಲ್ದಾರರ ಕಚೇರಿಗೆ ಭೇಟಿ ನೀಡಿ ಜನರ ಅಹವಾಲು ಅಲಿಸಲಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದರು.

Advertisement

ಜಿಲ್ಲೆಯ ವಡಗಾಂವ್ ಗ್ರಾಮದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸಿ ನಡೆ – ಹಳಿ ಕಡೆ ಕಾರ್ಯಕ್ರಮದ‌‌ ಮೂಲಕ, ಮನೆ ಬಾಗಿಲಿಗೆ ಆಡಳಿತ ಯಂತ್ರ ವ್ಯವಸ್ಥೆಯಿಂದ ಜನರ ಅಲೆದಾಟ ಮತ್ತು ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಬಿದ್ದಿದೆ. ಅಧಿಕಾರಿ ವರ್ಗ ಜನ ಸಾಮಾನ್ಯರಿಗೆ ಇನ್ನಷ್ಟು ಹತ್ತಿರವಾಗುವ ನಿಟ್ಟಿನಲ್ಲಿ ಪ್ರತಿ ವಾರ ಒಂದು ತಹಶೀಲ್ದಾರ ಕೇಂದ್ರಕ್ಕೆ ಜಿಲ್ಲಾಧಿಕಾರಿಗಳು ಭೇಟಿ‌ ಕೊಟ್ಟು, ಜನರ ಸಮಸ್ಯೆಗಳನ್ನು ಆಲಿಸುವರು ಮತ್ತು ಕುಂದು ಕೊರತೆಗಳಿಗೆ ಸ್ಪಂದಿಸುವರು. ಈ ಸಂಬಂಧ ಮೂರು ದಿನಗಳಲ್ಲಿ ಅದೇಶ ಹೊರಡಿಸಲಾಗುವುದು ಎಂದು ತಿಳಿಸಿದರು.

ವಡಗಾಂವ್ ದಲ್ಲಿ ಏಳನೇ ಗ್ರಾಮ ವಾಸ್ತವ್ಯ ಮಾಡಿದ್ದು, ಜನರ‌ ಕಷ್ಟಗಳು ಅರಿತುಕೊಳ್ಳಲು ಮತ್ತು ಅವುಗಳ ಪರಿಹಾರಕ್ಕಾಗಿ ರಾಜ್ಯದಲ್ಲಿ ಹೊಸಯೋಜನೆ ಜಾರಿಗೆ ತರಲು ಸಾಧ್ಯವಾಗುತ್ತಿದೆ. ಹಾಗಾಗಿ ಗ್ರಾಮ ವಾಸ್ತವ್ಯ ನನಗೆ ಪಾಠ ಶಾಲೆ ಆಗಿದ್ದು, ಮುಂದಿನ ವಾಸ್ತವ್ಯದಲ್ಲಿ ಮತ್ತಷ್ಟು ಸುಧಾರಣೆಗೆ ಯೋಜಿಸಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ:ಗ್ರಾ.ಪಂ ಸದಸ್ಯನಿಗೆ ಕಪಾಳ ಮೋಕ್ಷ: ಪಿಎಸ್ ಐ ಅಮಾನತ್ತಿಗೆ ಒತ್ತಾಯಿಸಿ ಠಾಣೆಗೆ ಮುತ್ತಿಗೆ

ರಾಜ್ಯದಲ್ಲಿ 18 ಸಾವಿರಕ್ಕೂ ಹೆಚ್ಚು ಬಂಜಾರಾ ತಾಂಡಾ ಮತ್ತು ಕುರುಬರಹಟ್ಟಿಗಳನ್ನು ಗುರುತಿಸಲಾಗಿದ್ದು, ಬೀದರ ಜಿಲ್ಲೆಯ 98 ಸೇರಿ ಈಗಾಗಲೇ‌ 800 ವಸತಿ‌ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಲಾಗಿದೆ. ಇನ್ನುಳಿದ ಪ್ರದೇಶಗಳನ್ನು ಸಹ ಕಂದಾಯ ವ್ಯಾಪ್ತಿಗೆ ಸೇರಿಸಿ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಮಾಹಿತಿ ನೀಡಿದರು.

Advertisement

ನಾನು ಈಗಾಗಲೇ‌ ವಾಸ್ತವ್ಯ‌ಮಾಡಿದ 7 ಗ್ರಾಮಗಳಿಗೆ‌ ಅಭಿವೃದ್ಧಿ ಕಾಮಗಾರಿಗಳ ಅಭಿವೃದ್ಧಿಗಾಗಿ ತಲಾ ಒಂದು ಕೋಟಿ ರೂ.‌ ಘೋಷಣೆ ಮಾಡಿದ್ದು, ಅನುದಾನದ ಸದ್ಬಳಕೆ‌ ಸಂಬಂಧಿಸಿದಂತೆ ನಾನೇ ಖುದ್ದಾಗಿ ಸೂಪರವೈಸ್ ಮಾಡುತ್ತೇನೆ ಎಂದು ಹೇಳಿದ ಸಚಿವ ಅಶೋಕ, ಜಿಲ್ಲೆಯ ವಡಗಾಂವ್ ನಲ್ಲಿ ಜರುಗಿದ ಗ್ರಾಮ ವಾಸ್ತವ್ಯದಲ್ಲಿ 2400ಕ್ಕೂ ಹೆಚ್ಚು‌ ಫಲಾನುಭವಿಗಳಿಗೆ ಸ್ಥಳದಲ್ಲೆ ಸೌಲತ್ತು ವಿತರಣೆ ಮಾಡಲಾಗಿದೆ. ಕಾರ್ಯಕ್ರಮಗಳ ಅನುಷ್ಠಾನ ಕುರಿತಂತೆ ಅಧಿಕಾರಿಗಳಿಗೆ ಚುರುಕು ಮೂಡಿಸಿದ್ದೇನೆ. ನಿರ್ಲಕ್ಷ ಮತ್ತು‌ ವಿಳಂಬ ಮಾಡುವವರಿಗೆ ಬೇರೆಡೆ ಎತ್ತಂಗಡಿ ಮಾಡುವ ಎಚ್ಚರಿಕೆ ನೀಡಿದ್ದೇನೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next