Advertisement

ಗುತ್ತಿಗೆದಾರರಿಗೆ ಡಿಸಿ ಎಚ್ಚರಿಕೆ: ಕಾರ್ಮಿಕರನ್ನು ರಸ್ತೆ ಬದಿ ಬಿಟ್ಟರೆ ಕ್ರಿಮಿನಲ್‌ ಕೇಸು

11:01 AM May 13, 2020 | mahesh |

ಉಡುಪಿ: ಕಟ್ಟಡ ನಿರ್ಮಾಣ ಸಹಿತ ನಿರ್ಮಾಣ ಹಂತದ ಕೆಲಸಗಳನ್ನು ಮಾಡುವ ವೇಳೆ ಗುತ್ತಿಗೆದಾರರು ಕಾರ್ಮಿಕರನ್ನು ಕೆಲಸಕ್ಕೆ ಬಳಸಿಕೊಂಡ ಬಳಿಕ ಎಲ್ಲೆಂದರಲ್ಲಿ ಅಥವಾ ರಸ್ತೆ ಬದಿಗಳಲ್ಲಿ ಬಿಟ್ಟು ಹೋದರೆ ಅಂತಹ ಗುತ್ತಿಗೆದಾರರ ಮೇಲೆ ಕ್ರಿಮಿನಲ್‌ ಕೇಸ್‌ ದಾಖಲಿಸುವುದಾಗಿ ಜಿಲ್ಲಾಧಿಕಾರಿ ಜಿ.ಜಗದೀಶ್‌ ತಿಳಿಸಿದ್ದಾರೆ.

Advertisement

ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದು ನಗರದಲ್ಲಿ ವಾಸವಿದ್ದ 7 ಸಾವಿರಕ್ಕೂ ಅಧಿಕ ವಲಸೆ ಕಾರ್ಮಿಕರನ್ನು ಜಿಲ್ಲಾಡಳಿತ ಈಗಾಗಲೇ ಅವರ ಊರುಗಳಿಗೆ ಕಳುಹಿಸಿಕೊಟ್ಟಿದೆ. ಹೀಗಾಗಿ ಗುತ್ತಿಗೆದಾರರು ಪಕ್ಕದ ಹಳ್ಳಿಗಳ ಕಾರ್ಮಿಕರನ್ನು ಅವರಿರುವ ಸ್ಥಳದಿಂದಲೇ ವಾಹನಗಳ ಮೂಲಕ ಕರೆತಂದು ಕಟ್ಟಡ ನಿರ್ಮಾಣ ಇತ್ಯಾದಿ ಕೆಲಸಗಳನ್ನು ಮಾಡಿಸುತ್ತಿದ್ದಾರೆ. ಇವರನ್ನು ಕರೆತಂದ ಸ್ಥಳಕ್ಕೆ ಮರಳಿ ಬಿಡುವುದು ಗುತ್ತಿಗೆದಾರರ‌ ಜವಾ ಬ್ದಾರಿ. ಈ ಕೆಲಸವನ್ನು ಕರೆತಂದವರೇ ಮಾಡಬೇಕು. ಕಾರ್ಮಿಕರನ್ನು ಅರ್ಧದಲ್ಲಿ ಬಿಡು ವಂತಿಲ್ಲ. ಅಮಾನವೀಯವಾಗಿ ನಡೆಸಿಕೊಳ್ಳುವಂತಿಲ್ಲ. ಅಂತಹ ಗುತ್ತಿಗೆದಾರರ ಮೇಲೆ ಕಣ್ಣಿಡಲು ಎಲ್ಲ ತಹಶೀಲ್ದಾರ್‌ಗಳಿಗೆ ಸೂಚನೆ ನೀಡಿರುವುದಾಗಿ ಅವರು ತಿಳಿಸಿದ್ದಾರೆ.

ಬೇರೆ ರಾಜ್ಯದ ಕಾರ್ಮಿಕರು ಉಳಿದುಕೊಂಡಿದ್ದರೆ, ಅವರನ್ನು ಗುತ್ತಿಗೆದಾರರು ಊರಿಗೆ ಕಳುಹಿಸಿ ಕೊಡುವ ವ್ಯವಸ್ಥೆ ಮಾಡಬೇಕು. ಕಳುಹಿಸುವವರೆಗೆ ಊಟ-ತಿಂಡಿಯ ವ್ಯವಸ್ಥೆ ಯನ್ನು ಗುತ್ತಿಗೆದಾರರು ಮಾಡಬೇಕು. ಇಷ್ಟು ದಿನ ದುಡಿಸಿ ಈಗ ಕೈಬಿಡುವುದು ಕೂಡ ಮಾನವೀಯ ಲಕ್ಷಣ ಅಲ್ಲ ಎಂದು ಡಿಸಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next