Advertisement

20ರಂದು ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮ

02:20 PM Mar 17, 2021 | Team Udayavani |

ತುಮಕೂರು: ಕಂದಾಯ ಇಲಾಖೆಯ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಕಾರ್ಯಕ್ರಮದಡಿ ಮಾ.20ರಂದು ಜಿಲ್ಲೆಯಗುಬ್ಬಿ ತಾಲೂಕಿನ ಕಾಡಶೆಟ್ಟಿಹಳ್ಳಿ ಗ್ರಾಮದಲ್ಲಿಜಿಲ್ಲಾಧಿಕಾರಿಗಳಾದ ವೈ.ಎಸ್‌.ಪಾಟೀಲ ಇಡೀದಿನ ಗ್ರಾಮದಲ್ಲಿದ್ದು ಜನರ ಸಮಸ್ಯೆಗಳನ್ನುಆಲಿಸಲಿದ್ದಾರೆ.

Advertisement

ಜಿಲ್ಲಾಧಿಕಾರಿಗಳ ಗ್ರಾಮ ಭೇಟಿಯಸಂದರ್ಭದಲ್ಲಿ ತುಮಕೂರು ಉಪವಿಭಾಗಾಧಿಕಾರಿ ಹಾಗೂ ಗುಬ್ಬಿ ತಾಲೂಕಿನ ತಹಶೀಲ್ದಾರ್‌,ಕೃಷಿ, ತೋಟಗಾರಿಕೆ, ಆರೋಗ್ಯ, ಆಹಾರ,ಸಮಾಜ ಕಲ್ಯಾಣ, ಮತ್ತಿತರ ಇಲಾಖೆಗಳಅಧಿಕಾರಿಗಳು ಸ್ಥಳದಲ್ಲೇ ಹಾಜರಿದ್ದು, ಆಯಾಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರಹಾಗೂ ಮಾಹಿತಿ ನೀಡಲಿದ್ದಾರೆ.

ಇದೇ ಮಾದರಿಯಲ್ಲಿ ಜಿಲ್ಲಾಧಿಕಾರಿಗಳುಭೇಟಿ ನೀಡುವ ತಾಲೂಕನ್ನು ಹೊರತುಪಡಿಸಿಇತರೆ ತಾಲೂಕುಗಳ ತಹಶೀಲ್ದಾರ್‌ಗಳು ಹಾಗೂಉಪವಿಭಾಗಾಧಿಕಾರಿಗಳು ಗ್ರಾಮಗಳಲ್ಲಿ ಇಡೀದಿನ ಇದ್ದು ಜನರ ಸಮಸ್ಯೆ ಆಲಿಸುವರು.ಅದರಂತೆ ಮಾ.20ರಂದು ತುರುವೇಕೆರೆ ತಾಲ್ಲೂಕಿನ ತೊರೆಮಾವಿನಹಳ್ಳಿ, ಚಿಕ್ಕನಾಯಕ ನಹಳ್ಳಿ ತಾಲೂಕಿನ ಸಿಂಗದಹಳ್ಳಿ, ತುಮಕೂರುತಾಲೂಕಿನ ಲಕ್ಕನಹಳ್ಳಿ ಹಟ್ಟಿ, ಶಿರಾ ತಾಲೂಕಿನದೊಡ್ಡ ಆಲದಮರ(ಹನುಮಂತನಗರ),ಕುಣಿಗಲ್‌ ತಾಲೂಕಿನ ಬಿಸಿನೆಲೆ ಕಾಡಶೆಟ್ಟಿಹಳ್ಳಿ, ಪಾವಗಡ ತಾಲೂಕಿನ ಜಾಲೋಡು, ಕೊರಟಗೆರೆ ತಾಲೂಕಿನ ಸಿ.ಎನ್‌.ದುರ್ಗ, ತಿಪಟೂರು ತಾಲೂಕಿನ ಹೊಸಹಳ್ಳಿ, ಮಧುಗಿರಿ ತಾಲೂಕಿನಬ್ಯಾಡರಹಳ್ಳಿಗೆ ತಹಶೀಲ್ದಾರ್‌ ಹಾಗೂ ಮಧುಗಿರಿ ಉಪವಿ ಭಾಗಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದಿನವಿಡಿ ಅಲ್ಲಿಯೇ ಇದ್ದು ಸಮಸ್ಯೆ ಆಲಿಸಲಿದ್ದಾರೆ.

ಗ್ರಾಮ ಭೇಟಿಯ ಸಂದರ್ಭದಲ್ಲಿ ಗ್ರಾಮದಲ್ಲಿನಪಹಣಿಯಲ್ಲಿನ ಲೋಪದೋಷ ಗಳು, ಪಹಣಿಕಾಲಂ ನಂಬರ್‌ 3 ಮತ್ತು ಆಕಾರ್‌ ಬಂದ್‌ ತಾಳೆಹೊಂದಿರುವ ಬಗ್ಗೆ, ಕಾಲಂ ನಂ.3 ಮತ್ತು 9 ತಾಳೆ ಹೊಂದಿರುವ ಕುರಿತು, ಪೌತಿಖಾತೆ, ರೇಷನ್‌ ಕಾರ್ಡ್‌ಗೆ ಸಂಬಂಧಿಸಿದ ಸಮಸ್ಯೆಗಳು, ಮತದಾರರ ಪಟ್ಟಿ ಪರಿಷ್ಕರಣೆ, ಸ್ಮಶಾನ ಲಭ್ಯತೆ ಬಗ್ಗೆ ಪರಿಶೀಲನೆ, ಆಶ್ರಯ ಯೋಜನೆಯಡಿವಸತಿ ಕಲ್ಪಿಸುವುದು, ಸರ್ಕಾರಿ ಜಮೀನುಒತ್ತುವರಿ ಬಗ್ಗೆ, ಆಧಾರ್‌ ಕಾರ್ಡ್‌ನಅನುಕೂಲತೆ, ಹದ್ದುಬಸ್ತು, ಪೋಡಿ, ದರಕಾಸ್ತುಇತ್ಯಾದಿ ಅಂಶಗಳನ್ನು ಪರಿಶೀಲಿಸಲಿದ್ದಾರೆ.

ಜನರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲಿಯೇ ಇತ್ಯರ್ಥವಾಗುವ ಪ್ರಕರಣಗಳನ್ನು ವಿಲೇವಾರಿಮಾಡಲಾಗುವುದು. ಸ್ಥಳದಲ್ಲಿ ವಿಲೇವಾರಿ ಆಗದಅರ್ಜಿಗಳನ್ನು ನಿಯಮಾನುಸಾರ ನಂತರದದಿನಗಳಲ್ಲಿ ಪರಿಶೀಲಿಸಿ ವಿಲೇವಾರಿಮಾಡಲಾಗುವುದು ಎಂದು ಜಿಲ್ಲಾಧಿಕಾರಿ ವೈ. ಎಸ್‌.ಪಾಟೀಲ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next