Advertisement

ಪ್ರವಾಸಿ ತಾಣಗಳಿಗೆ ಜಿಲ್ಲಾಧಿಕಾರಿ ಭೇಟಿ

04:37 PM Nov 09, 2019 | Suhan S |

ಶ್ರೀರಂಗಪಟ್ಟಣ: ತಾಲೂಕಿನ ಐತಿಹಾಸಿಕ ಮತ್ತು ಪ್ರಮುಖ ಪ್ರವಾಸಿ ತಾಣಗಳಿಗೆ ಜಿಲ್ಲಾಧಿಕಾರಿ ಡಾ.ಎಂ.ವಿ ವೆಂಕಟೇಶ್‌ ಭೇಟಿ ನೀಡಿ ಅಲ್ಲಿನ ಮೂಲ ಸೌಲಭ್ಯಗಳ ಪರಿಶೀಲನೆ ನಡೆಸಿದರು.

Advertisement

ಪಟ್ಟಣದ ಹೊರವಲಯದಲ್ಲಿರುವ ಟಿಪ್ಪು ಬೇಸಿಗೆ ಅರಮನೆ, ಶ್ರೀ ನಿಮಿಷಾಂಬ ದೇವಾಲಯ ಹಾಗೂ ಕಾವೇರಿ ಸಂಗಮಕ್ಕೆ ಭೇಟಿ ನೀಡಿ ಕುಡಿಯುವ ನೀರು, ವಾಹನ ಪಾರ್ಕಿಂಗ್‌ ಹಾಗೂ ಇತರ ಸೌಲಭ್ಯ ಕುರಿತು ಪರಿಶೀಲಿಸಿದರು.

ನಿಮಿಷಾಂಬ ದೇವಾಲಯದ ಬಳಿ ಕಾವೇರಿ ನದಿ ತೀರ ಹಾಗೂ ಕಾವೇರಿ ಸಂಗಮದ ಬಳಿ ಎಲ್ಲೆಂದರಲ್ಲಿ ಕಸ ಎಸೆದಿ ರುವ ಹಾಗೂ ನದಿಗೆ ತ್ಯಾಜ್ಯ ಸೇರ್ಪಡೆ ಯಾಗದಂತೆ ಸ್ವತ್ಛತೆ ಕಾಪಾಡಲು ಅಧಿಕಾರಿಗಳಿಗೆ ಸೂಚಿಸಿದರು. ನಿಮಿಷಾಂಬ ದೇವಾಲಯ ಬಳಿ ಕಾವೇರಿ ನದಿ ತೀರದಲ್ಲಿ ವಿವಿಧತಿನಿಸುಗಳ ಮಾರಾಟ ಅಂಗಡಿಗಳ ತೆರವು ಮಾಡಬೇಕು, ಕಾವೇರಿ ಸಂಗಮ ಬಳಿ ಕಾವೇರಿ ನದಿ ತೀರದಲ್ಲಿ ಅಕ್ರಮ ಅಂಗಡಿಗಳನ್ನು ಒಂದು ವಾರದೊಳಗೆ ತೆರವುಗೊಳಿಸಬೇಕು, ಕಾವೇರಿ ಸಂಗಮ ಬಳಿ ನದಿ ಬಳಿ ನಿಗದಿತ ಸ್ಥಳದಲ್ಲಿ ಮಾತ್ರ ಧಾರ್ಮಿಕ ಕಾರ್ಯಕ್ರಮ ನಡೆಸಬೇಕಕೆಂದು ಸೂಚಿ ಸಿದರು. ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಹರೀಶ್‌, ಮತ್ತಿತರ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next