ಚಿಕ್ಕಬಳ್ಳಾಪುರ: ನಗರದ ತಹಶೀಲ್ದಾರ್, ಉಪವಿಭಾಗಾಧಿಕಾರಿ ಕಚೇರಿಗೆ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಭೇಟಿ ನೀಡಿ ಕಚೇರಿಯಲ್ಲಿನ ಸಮಸ್ಯೆಗಳು, ಆಡಳಿತ ಕಾರ್ಯಗಳ ಪ್ರಗತಿ ಪರಿಶೀಲನೆ, ಸಾರ್ವಜನಿಕರ ಕುಂದು ಕೊರತೆ ಆಲಿಸಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಆದೇಶದ ಅನ್ವಯ ತಹಶೀಲ್ದಾರ್ ಕಚೇರಿ ಗಳಿಗೆ ಭೇಟಿ ನೀಡಿ, ಅಲ್ಲಿನ ಕಾರ್ಯವೈಖರಿ , ವ್ಯವಸ್ಥೆ ಪರಿಶೀಲಿಸಿ ಅದರ ಸುಧಾರಣೆಗೆ ಸಲಹೆ ನೀಡುವು ದಾಗಿದೆ. ಈ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಜಿಲ್ಲೆಯ ಹೃದಯಭಾಗವಾದ ಚಿಕ್ಕಬಳ್ಳಾಪುರ ತಾಲೂಕು ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಉತ್ತಮವಾಗಿ ಕಾರ್ಯನಿರ್ವ ಹಿಸಲಾಗುತ್ತಿದೆ ಎಂದು ಹೇಳಿದರು.
ಜನಸ್ನೇಹಿ ಕಾರ್ಯನಿರ್ವಹಣೆ: ತಾಲೂಕು ಕಚೇರಿಯಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಅಧಿ ಕಾರಿಗಳು, ಸಿಬ್ಬಂದಿ ಜನಸ್ನೇಹಿ ಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಕಾಲದಲ್ಲಿ ಜಿಲ್ಲೆಯು ಉತ್ತ ಮ ಸಾಧನೆ ಮಾಡಿರುವುದರಿಂದ ಆಡಳಿತ ವ್ಯವಸ್ಥೆಯಲ್ಲಿ ಜನ ರಿಗೆ ಸಿಗುವಂತಹ ಸೇವೆಗಳನ್ನು ಸಕಾಲದಲ್ಲಿ ತಲುಪಿಸುವ ಕಾರ್ಯ ನಡೆಯುತ್ತಿದೆ. ಜೊತೆಗೆ ಜನರಿಂದ ಬಂದಂತಹ ಅಹವಾಲು, ಅರ್ಜಿಗಳನ್ನು ಕಾಲಮಿತಿಯೊಳಗೆ ಪರಿಣಾಮ ಕಾರಿಯಾಗಿ ಇತ್ಯರ್ಥಪಡಿಸಲಾಗುತ್ತಿದೆ. ಹೀಗಾಗಿ ಜನರಿಂದ ಯಾವುದೇ ಒತ್ತಡವಿಲ್ಲ. ಜೊತೆಗೆ ಕಚೇರಿ ಮುಂದೆ ಜನಸಂಖ್ಯೆ ವಿರಳ ವಾಗಿರುವುದು ಸಂತೋಷದ ಸಂಗತಿ ಎಂದು ವಿವರಿಸಿದರು.
ಹಲವು ವರದಿ ಸಿದ್ಧಪಡಿಸಲಾಗಿದೆ: ಕಚೇರಿಯಲ್ಲಿ ದಾಖಲೆ ಕೊಠಡಿಗಳನ್ನು ಮತ್ತಷ್ಟು ಸುಧಾರಿಸಲು ಹಲವು ವರದಿ ಸಿದ್ಧ ಪಡಿಸಲಾಗುತ್ತಿದ್ದು, ಅದರ ಆಧಾರದ ಮೇಲೆ ಮತ್ತಷ್ಟು ಸಲಹೆ ಸೂಚನೆ ನೀಡಲಾಗುವುದು. ಕಚೇರಿಯ ಭೂಮಿ ಶಾಖೆ, ಸಿಬ್ಬಂದಿ ಕೊಠಡಿ, ಅಭಿಲೇಖಾಲಯ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆ, ಚುನಾವಣೆ ಶಾಖೆ, ನ್ಯಾಯಾಲಯ ಸಭಾಂಗಣ, ತಹಶೀಲ್ದಾರ್ ಗ್ರೇಡ್ ಚೇಂಬರ್, ಉಪವಿಭಾಗಾಧಿಕಾರಿ ಕಚೇರಿ ಸೇರಿ ಎಲ್ಲಾ ಶಾಖೆಗಳಿಗೆ ಭೇಟಿ ನೀಡಿ, ಪರಿಶೀಲಿಸಲಾಗಿದೆ ಎಂದರು.
ಒತ್ತುವರಿ ವಿರುದ್ಧ ಕ್ರಮ: ಜಿಲ್ಲೆಯಲ್ಲಿ ರಸ್ತೆ, ರಾಜಕಾಲುವೆ ಸೇರಿ ಸರ್ಕಾರಿ ಭೂಮಿ ಒತ್ತುವರಿ ಮಾಡಿರುವುದು ಕಂಡು ಬಂದಲ್ಲಿ ಕೂಡಲೇ ತೆರವುಗೊಳಿಸಲಾಗುವುದು ಎಂದು ತಿಳಿಸಿದರು. ಎಸಿ ಡಾ.ಜಿ.ಸಂತೋಷ್‌ಕುಮಾರ್, ತಹಶೀಲ್ದಾರ್ ಗಣಪತಿ ಶಾಸ್ತ್ರಿ, ತಾಲೂಕು ಆಡಳಿತಾ ಧಿಕಾರಿಗಳು, ಸಿಬ್ಬಂದಿ ಇದ್ದರು.