ಬಳಿಕ ಉದಯವಾಣಿ ಜತೆಗೆ ಮಾತನಾಡಿ, ಮಳೆ ಸುರಿಯುತ್ತಿರುವ ಕಾರಣ ಸೂಕ್ತ ಮುನ್ನೆಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ. ಟಾರ್ಪಾಲಿನ್ ಅಳವಡಿಸುವ ಮೂಲಕ ನೀರು ಇಂಗದಂತೆ ಕ್ರಮ ಕೈಗೊಳ್ಳಲು ತಿಳಿಸಲಾಗಿದ್ದು, ಶಾಶ್ವತ ಪರಿಹಾರದ ಬಗ್ಗೆ ಗಮನಹರಿಸಲಾಗುತ್ತದೆ. ಗುಡ್ಡ ಕುಸಿತಕ್ಕೆ ಕಾರಣದ ಬಗ್ಗೆ ವರದಿ ಪಡೆದು ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದರು.
Advertisement
ಸ್ಥಳಕ್ಕೆ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಭೇಟಿ ನೀಡಿ, ಈ ಸಮಸ್ಯೆಗೆ ಕಾರಣರಾದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ರಸ್ತೆ ಮುಚ್ಚಿರುವ ಕಾರಣ ದೊಂಬೆ ಭಾಗದ ಜನರು ಹತ್ತಾರು ಕಿ.ಮೀ. ಸುತ್ತು ಬಳಸಿ ಬರುವಂತಾಗಿದ್ದು, ಈ ಬಗ್ಗೆಯೂ ಅಧಿಕಾರಿಗಳು ಗಮನ ಹರಿಸಬೇಕು ಎಂದರು. ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಸ್ಥಳಕ್ಕೆ ಭೇಟಿ ನೀಡಿದರು. ಗುಡ್ಡ ಕುಸಿತದಿಂದ ದೈನಂದಿನ ಚಟುವಟಿಕೆಗೆ ತೊಂದರೆ ಯಾಗು ತ್ತಿದ್ದು, ಜಿಲ್ಲಾಡಳಿತ ಶಾಶ್ವತ ಪರಿ ಹಾರ ಬಗ್ಗೆ ಗಮನಹರಿಸ ಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ರವಿವಾರದಿಂದ ಮಣ್ಣು ತೆರವು ಕಾರ್ಯ ಆರಂಭಿಸಲಿದೆ ಮತ್ತು ರಸ್ತೆ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಪಟ್ಟಣ ಪಂಚಾಯತ್ ಅಧಿಕಾರಿಗಳು ತಿಳಿಸಿದ್ದಾರೆ. ಗರಂ ಆದ ಡಿಸಿ
ಜಿಲ್ಲಾಧಿಕಾರಿಗಳು ಒತ್ತಿನೆಣೆ ಹೆದ್ದಾರಿ ಕಾಮಗಾರಿಯನ್ನು ವೀಕ್ಷಿಸಿದರು. ಈ ಸಂಧರ್ಭದಲ್ಲಿ ಹೆದ್ದಾರಿ ಪಕ್ಕದಲ್ಲಿರುವ ಕಸದ ರಾಶಿ ವಿಲೇವಾರಿಯಾಗದಿರುವ ಕುರಿತು ಮತ್ತು ಹೇನ್‌ಬೇರು ಬಳಿ ನೀರಿನ ಒತ್ತಡಕ್ಕೆ ರಸ್ತೆ ಶಿಥಿಲಗೊಂಡಿರುವ ಬಗ್ಗೆ ಐಆರ್‌ಬಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ತತ್‌ಕ್ಷಣ ಸಮಸ್ಯೆಯನ್ನು ಸರಿಪಡಿಸಲು ತಿಳಿಸಿದರು. ಬಳಿಕ ದೊಂಬೆ ಚೋಣುಮನೆ ಪರಿಸರದಲ್ಲಿ ಕಡಲ್ಕೊರೆತ ಉಂಟಾಗಿರುವ ಸ್ಥಳಕ್ಕೆ ಭೇಟಿ ನೀಡಿದರು.
ಕುಂದಾಪುರ ಸಹಾಯಕ ಕಮಿ ಷನರ್ ರಶ್ಮೀ ಆರ್., ಬೈಂದೂರು ತಹಶೀಲ್ದಾರ್ ಪ್ರದೀಪ್ ಆರ್., ಕಂದಾಯ ಇಲಾಖೆಯ ಪ್ರಥಮ ದರ್ಜೆ ನಿರೀಕ್ಷಕ ದೀಪಕ್, ಬೈಂದೂರು ವೃತ್ತ ನಿರೀಕ್ಷಕ ಸವಿತ್ರ ತೇಜ್, ಠಾಣಾಧಿಕಾರಿ ತಿಮ್ಮೇಶ್ ಬಿ.ಎನ್., ಗಸ್ತು ಅರಣ್ಯ ಪಾಲಕ ಮಂಜುನಾಥ ನಾಯ್ಕ ಮೊದಲಾದವರು ಜಿಲ್ಲಾಧಿಕಾರಿ ಜತೆಗಿದ್ದರು.
Related Articles
Advertisement