ಕಟಪಾಡಿ: ಅಕಾಲಿಕ ಮಳೆಯ ಪರಿಣಾಮ ಪ್ರಾಪಂಚಿಕವಾಗಿ ಗುರುತಿಸಲ್ಪಟ್ಟ ಜಿಐ ಮಾನ್ಯತೆಯೊಂದಿಗೆ ಪೇಟೆಂಟ್ ಪಡೆದಿರುವ ಮಟ್ಟುಗುಳ್ಳ ಬೆಳೆಯು ಹಾನಿಗೀಡಾಗಿದ್ದು, ಕಂಗೆಟ್ಟ ಮಟ್ಟುಗುಳ್ಳ ಬೆಳೆಗಾರರ ಕೃಷಿ ಕ್ಷೇತ್ರಕ್ಕೆ ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಹಾಗೂ ತೋಟಗಾರಿಕೆ, ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಬೆಳೆ ಹಾನಿ ಪರಿಶೀಲನೆಯನ್ನು ಮಂಗಳವಾರ ನಡೆಸಿರುತ್ತಾರೆ. ಸರಕಾರದ ಮಟ್ಟದಿಂದ ಲಭ್ಯ ಅವಕಾಶದಡಿ ಸೂಕ್ತ ಪರಿಹಾರವನ್ನು ಒದಗಿಸುವ ಭರವಸೆಯನ್ನು ನೀಡಿದರು.
ಗ್ರಾಮಸ್ಥರು ಮಟ್ಟು ಹೊಳೆಗೆ ತಡೆಗೋಡೆ ನಿರ್ಮಿಸಿ ಈ ಭಾಗದಲ್ಲಿ ಸುರಕ್ಷತೆಯನ್ನು ಕಲ್ಪಿಸುವಂತೆ ಜಿಲ್ಲಾಧಿಕಾರಿ ಅವರಲ್ಲಿ ವಿನಂತಿಸಿಕೊಂಡರು.
ಈ ಸಂದರ್ಭ ಕೋಟೆ ಗ್ರಾ.ಪಂ. ಅಧ್ಯಕ್ಷ ಕಿಶೋರ್ ಕುಮಾರ್ ಅಂಬಾಡಿ, ಉಡುಪಿ ಜಿ.ಪಂ. ಮಾಜಿ ಅಧ್ಯಕ್ಷೆ ಸರಸು ಡಿ.ಬಂಗೇರ, ಕಾಪು ತಾಲೂಕು ತಹಶೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ , ಕಂದಾಯ ನಿರೀಕ್ಷಕ ಸುಧೀರ್ ಶೆಟ್ಟಿ, ತೋಟಗಾರಿಕೆ ಇಲಾಖೆಯ ಉಡುಪಿ ಜಿಲ್ಲಾ ಉಪ ನಿರ್ದೇಶಕಿ ಭುವನೇಶ್ವರೀ, ಹಿರಿಯ ಸಹಾಯಕ ನಿರ್ದೇಶಕ ಎಲ್ ಹೇಮಂತ್ ಕುಮಾರ್, ಕೋಟೆ ಗ್ರಾಮದ ಗ್ರಾಮ ಕರಣಿಕ ಲೋಕನಾಥ್ ಲಮ್ಹಾಣಿ, ಗ್ರಾಮ ಸಹಾಯಕ ಕೃಷ್ಣ, ಮಟ್ಟುಗುಳ್ಳ ಬೆಳೆಗಾರರ ಸಂಘದ ಮ್ಯಾನೇಜರ್ ಲಕ್ಷ್ಮಣ್ ಮಟ್ಟು, ಮಟ್ಟುಗುಳ್ಳ ಬೆಳೆಗಾರರು, ಮತ್ತಿ ತರು ಉಪಸ್ಥಿತರಿದ್ದರು.
ಇದನ್ನೂ ಓದಿ : ಸುರತ್ಕಲ್: ನಿಂತಿದ್ದ ಗೂಡ್ಸ್ ರೈಲಿನ ಮೇಲೆ ಸೆಲ್ಫಿ ತೆಗೆಯಲು ಹೋದ ಯುವಕನಿಗೆ ವಿದ್ಯುತ್ ಶಾಕ್