Advertisement

ಹಿರೋಳಿ ಚೆಕ್‌ಪೋಸ್ಟ್‌ ಗೆ ಡಿಸಿ ಹಠಾತ್‌ ಭೇಟಿ 

04:54 PM Mar 14, 2021 | Team Udayavani |

ಆಳಂದ: ಇಡೀ ಭಾರತದಲ್ಲಿಯೇ ಮೊಟ್ಟ ಮೊದಲ ಕೋವಿಡ್ ಸಾವು ಕಲಬುರ್ಗಿಯಲ್ಲಿ ಸಂಭವಿಸಿ ಒಂದು ವರ್ಷ ಪೂರೈಸುವ ಮುನ್ನಾ ದಿನವಾದ ರಾತ್ರಿ ಜಿಲ್ಲಾಧಿಕಾರಿ ವಿವಿ ಜೋತ್ಸಾ ಅವರು ಮಹಾರಾಷ್ಟ್ರ ಗಡಿ ಪ್ರದೇಶದಲ್ಲಿರುವ ಹಿರೋಳಿ ಚೆಕ್‌ಪೋಸ್ಟ್‌ಗೆ ಹಠಾತ್‌ ಭೇಟಿ ನೀಡಿ ಪರಿಶೀಲಿಸಿದರು.

Advertisement

ಜಿಲ್ಲಾಧಿಕಾರಿ ವಿ.ವಿ ಜ್ಯೋತ್ಸಾ ಅವರ ನಿರ್ದೇಶನದಂತೆ ತಹಶೀಲ್ದಾರ್‌ ಯಲ್ಲಪ್ಪ ಸುಬೇದಾರ ನೇತೃತ್ವದ ಕೋವಿಡ್‌-19 ನಿಯಂತ್ರಣ ತಂಡದವರು ತಾಲೂಕಿನಲ್ಲಿ ಅದರಲ್ಲಿಯೂ ಚೆಕ್‌ಪೋಸ್ಟ್‌ಗಳಲ್ಲಿ ಮಹಾರಾಷ್ಟ್ರದಿಂದ ಆಗಮಿಸುವವರಿಗೆ ಕಡ್ಡಾಯವಾಗಿ ಕೋವಿಡ್‌-19 ನೆಗೆಟಿವ್‌ ವರದಿ ಪರಿಗಣಿಸಲು ಮುಂದಾಗಿದ್ದಾರೆ.

ನೆಗೆಟಿವ್‌ ವರದಿ ಇಲ್ಲದೇ ಇದ್ದರೆ ಅಂಥವರಿಗೆ ಮರಳಿ ಕಳಿಸುತ್ತಿದ್ದು, ಈ ಕುರಿತು ಹಠಾತ್‌ ಭೇಟಿ ನೀಡುವ ಮೂಲಕ ಚೆಕ್‌ಪೋಸ್ಟ್‌ಗಳಲ್ಲಿನ ಕಾರ್ಯನಿರ್ವಹಣೆ ಕುರಿತು ಜಿಲ್ಲಾಧಿ ಕಾರಿಗಳು ಖುದ್ದು ಪರಿಶೀಲಿಸಿದರು. ತಾಲೂಕಿನ ಹಿರೋಳಿ, ಖಜೂರಿ ಮತ್ತು ನಿಂಬಾಳದಲ್ಲಿ ಸ್ಥಾಪಿಸಲಾದ ಚೆಕ್‌ಪೋಸ್ಟ್ ಗಳ  ಕಾರ್ಯನಿರ್ವಹಣೆಯ ಮಾಹಿತಿ ಕಲೆ ಹಾಕಿದರು. ರಾತ್ರಿ, ವಿದ್ಯುತ್‌, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಕೋವಿಡ್‌ ತಪಾಸಣೆ ಕುರಿತು ಸಿಬ್ಬಂದಿಗಳಿಂದ ವಿವರಣೆ ಕೇಳಿದರು. ಅದೇ ರೀತಿ ಮಧ್ಯಾಹ್ನದಲ್ಲಿ ಬಿಸಿಲಿನ ತಾಪ ಹೆಚ್ಚಾಗುವುದರಿಂದ ನೆರಳಿನ ವ್ಯವಸ್ಥೆಯನ್ನೂ ಸಹ ಅಲ್ಲಿ ತುರ್ತಾಗಿ ಮಾಡುವಂತೆ ಕ್ರಮ ಕೈಗೊಳ್ಳಲು ಸೂಚಿಸಿದರು. ಸಹಾಯಕ ಆಯುಕ್ತ ರಾಮಚಂದ್ರ ಗಡದೆ, ಕಂದಾಯ ಮತ್ತು ಆರೋಗ್ಯ,  ಪೊಲೀಸ್‌ ಇಲಾಖೆ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next