ಮಧುಗಿರಿ: ಕಳೆದ ಅವಧಿಯಲ್ಲಿ ಬಗರ್‌ಹುಕುಂ ಸಮಿತಿಯಿಂದ ಪಕ್ಷಪಾತ-ಜಾತಿವಾದದ ಸೋಂಕುತಗುಲಿ ಕೆಲ ಅರ್ಹ ಫಲಾನುಭವಿಗಳಿಗೆಅನ್ಯಾಯವಾಗಿದ್ದು, ಅದನ್ನು ಸರಿಪಡಿಸುವಕೆಲಸವನ್ನು ನಾವೆಲ್ಲ ಮಾಡಬೇಕಿದೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.
ತಾಲೂಕಿನ ಮರಿತಿಮ್ಮನಹಳ್ಳಿಯಲ್ಲಿ ತಾಲೂಕು ಆಡಳಿತದಿಂದ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕರು, ಕಳೆದ ಬಗರ್‌ಹುಕುಂ ಸಮಿತಿಯಿಂದತುಂಬಾ ಲೋಪವಾಗಿದ್ದು, ಅರ್ಹರನ್ನು ಕಡೆಗಣಿಸಿಜಾತಿ ಆಧಾರದ ಮೇಲೆ ಸಾಗುವಳಿ ಚೀಟಿನೀಡಲಾಗಿದೆ. ಇದರಲ್ಲಿ ಮತ್ತಷ್ಟೂ ಕಾನೂನು ಉಲ್ಲಂಘನೆ ಕಡತಗಳಿದ್ದು, ಫಲಾನುಭವಿಗಳ ಬಳಿ ರಶೀದಿ ಇದ್ದರೂ ಕಚೇರಿಯಲ್ಲಿ ಅರ್ಜಿಯಿಲ್ಲದಾಗಿದೆ.
ಈ ಬಾರಿ ತಹಶೀಲ್ದಾರ್ ಹೊಸ ಆಯಾಮದಲ್ಲಿ ಕಡತ ಪರಿಶೀಲನೆ ಮಾಡುತ್ತಿದ್ದು ಸರಿಪಡಿಸ ಲಾಗುವುದು. ಆದರೆ ಕಳೆದ ಬಾರಿಯ ಪಟ್ಟಿಯಲ್ಲಿಹೆಸರಿದ್ದು ಸಾಗುವಳಿ ಚೀಟಿಯಿಲ್ಲ. ಚೀಟಿ ನೀಡಿದರೆ ಪಹಣಿಯಿಲ್ಲ. ಪಹಣಿ ನೀಡಿದರೆ ಹದ್ದುಬಸ್ತಿಲ್ಲ. ಒಂದೇ ಸ.ನಂ ನಲ್ಲಿ 10 ಜನರ ಹೆಸರಿದ್ದರೂಇಬ್ಬರಿಗೆ ಕೊಟ್ಟು 8 ಜನರಿಗೆ ನೀಡಿಲ್ಲ. ಇಂತಹ ಹಲವಾರು ದೋಷಗಳು ನಡೆದಿವೆ. ಈ ಬಗ್ಗೆ ಯಾರನ್ನೂ ದೂಷಿಸಲ್ಲ. ಆದರೆ, ಕಾನೂನು ಪ್ರಕಾರ ಅರ್ಹರಿರುವ ಎಲ್ಲ ಬಡವರಿಗೆ ಜಮೀನಿನ ಹಕ್ಕು ನೀಡುತ್ತೇನೆ. ಇದರಲ್ಲಿನನಗೆ ಜಾತಿ-ಪಕ್ಷ ಹಾಗೂ ಯಾವುದೂ ಮುಖ್ಯವಲ್ಲ.ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ತಹಶೀಲ್ದಾರ್‌ಗೆ ಕೆಳ ಹಂತದ ಸಿಬ್ಬಂದಿಗಳು ಪ್ರಾಮಾಣಿಕ ಸಹಕಾರನೀಡಬೇಕು. ಆದರೆ ಕೆಳಹಂತದ ಸಿಬ್ಬಂದಿಗಳ ಸಹಕಾರ ಸಿಗುತ್ತಿಲ್ಲ ಎಂಬ ದೂರು ಬಂದಿದ್ದು ತಪ್ಪು ತಿದ್ದುಕೊಳ್ಳಿ ಎಂದರು.
ಕಚೇರಿಗೆ ಬಂದ ಜನರನ್ನು ಕೂರಿಸಿ ಸಮಾಧಾನದಿಂದ ಮಾತನಾಡಿಸಿ ಕೆಲಸ ಮಾಡಿಕೊಡಿ. 100 ಅರ್ಜಿಗಳು ಬಂದರೆ ಅದರಲ್ಲಿ 50 ಅರ್ಜಿಗಳುಸ್ಥಳದಲ್ಲೇ ಬಗೆಹರಿದರೆ ಮಾತ್ರ ಈ ಕಾರ್ಯಕ್ರಮ ಸಾರ್ಥಕತೆ ಪಡೆಯಲಿದೆ ಎಂದರು.
ಬಗರ್‌ಹುಕುಂ ಸಮಿತಿ ಹಿಂದಿನ ಅವಧಿಯಲ್ಲಿ ಜಾತಿ, ಪಕ್ಷದ ಆಧಾರದ ಮೇಲೆ ಕೆಲಸ ಮಾಡಿದ್ದು,ನನಗೆ ಕಾನೂನು ಮುಖ್ಯವೇ ಹೊರತು ಜಾತಿಮುಖ್ಯವಲ್ಲ. ಎಲ್ಲ ಜಾತಿಯಲ್ಲಿ ಬಡವರಿದ್ದುಅರ್ಹರಿಗೆ ಅನ್ಯಾಯವಾಗಲು ಬಿಡಲ್ಲ ಎಂದು ಶಾಸಕರು ಹೇಳಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಸುರೇಶಾಚಾರ್, ಗ್ರೇಡ್ 2 ತಹಶೀಲ್ದಾರ್ ತಿಪ್ಪೇಸ್ವಾಮಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವೆಂಕಟೇಶಯ್ಯ, ಕಂದಾಯಾಧಿಕಾರಿ ಜಯರಾಮಯ್ಯ, ವಿಐಗಳಾದ ಪರಮೇಶ್, ಶರಣಪ್ಪ, ಶಿವಕುಮಾರ್, ಗ್ರಾಮಸಹಾಯಕರಾದ ಗಂಗಾಧರ್, ರಾಮಕೃಷ್ಣ,ಕೆಂಚಪ್ಪ, ಓಬಳೇಶ್, ಗೋವಿಂದರಾಜು, ಗ್ರಾಪಂಸದಸ್ಯೆ ಗೌರಮ್ಮ, ಗಣೇಶ್, ನರಸಿಂಹಮೂರ್ತಿ,ಪಿಡಿಒ ಗೌಡಪ್ಪ, ಮುಖ್ಯಶಿಕ್ಷಕ ವೀರಕ್ಯಾತಪ್ಪ,ಶಿಕ್ಷಕರಾದ ನರಸಿಂಹಮೂರ್ತಿ, ಸಂಪತ್‌ಕುಮಾರ್, ಮುಖಂಡ ರಾದ ಶಿವಣ್ಣ, ನಾಗರಾಜು,ಶಿವಕುಮಾರ್, ತಾಲೂಕು ಮಟ್ಟದ ಇತರೆಇಲಾಖೆಗಳ ಅಧಿಕಾರಿಗಳು ಗ್ರಾಮಸ್ಥರು ಇದ್ದರು.