Advertisement

ಅಹವಾಲು ತ್ವರಿತ ವಿಲೇವಾರಿಗೆ ಡಿಸಿ ಆದೇಶ

09:21 PM Mar 19, 2022 | Team Udayavani |

ಬಾಳೆಪುಣಿ: ಕುಡಿಯುವ ನೀರಿನ ಸಮಸ್ಯೆ, ಮನೆ ನಿವೇಶನ, ವಸತಿ ರಹಿತರಿಗೆ ಸರಕಾರಿ ಭೂಮಿ ನೀಡುವ ಕುರಿತು, ಕಂದಾಯ ಇಲಾಖೆಗಳಿಗೆ ಸಂಬಂಧಿಸಿದ ಸಮಸ್ಯೆ ಸೇರಿದಂತೆ ಶನಿವಾರ ಬಾಳೆಪುಣಿ – ಕೈರಂಗಳ ಗ್ರಾ.ಪಂ.ನ ಹೂಹಾಕುವ ಕಲ್ಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯದಲ್ಲಿ ಅರ್ಜಿಗಳನ್ನು ಸ್ವೀಕರಿಸಿ ಸಂಬಂಧಪಟ್ಟ ಇಲಾಖೆಯಲ್ಲಿ ಅರ್ಜಿಯನ್ನು ತ್ವರಿತ ವಿಲೇವಾರಿಗೆ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಆದೇಶ ನೀಡಿದರು.

Advertisement

ಈ ಸಂದರ್ಭ ಕೊರಗರ ಕಾಲನಿಗೆ ಭೇಟಿ ನೀಡಿದ ಅವರು, ಸ್ಥಳೀಯವಾಗಿ ಕೆರೆ ಅಭಿವೃದ್ಧಿ ಮತ್ತು ಮೂಳೂರು – ಇರಾ ಕೈಗಾರಿಕೆ ವಲಯ ಸಂಪರ್ಕಿಸುವ ರಸ್ತೆ ಸಮಸ್ಯೆಯ ಸ್ಥಳ ತನಿಖೆ ನಡೆಸಿದರು.

ವಸತಿ ಸಮಸ್ಯೆಗೆ ಹೆಚ್ಚು ಅರ್ಜಿ :

ಬಾಳೆಪುಣಿ ಮತ್ತು ಕೈರಂಗಳ ಗ್ರಾಮದಲ್ಲಿ ನಿವೇಶನ ರಹಿತರ ಸಮ ಸ್ಯೆಯೇ ಪ್ರಮುಖವಾಗಿತ್ತು. ನಿವೇಶನದ ಕುರಿತು ಅರ್ಜಿ ಸ್ವೀಕರಿಸಿ ಪಂಚಾಯತ್‌ನಲ್ಲಿ ಎಷ್ಟು ನಿವೇಶ ಕ್ಕಾಗಿ ಅರ್ಜಿ ಬಂದಿದೆ, ಅರ್ಜಿಗೆ ಸಂಬಂಧಿಸಿದಂತೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ವಿಚಾರಣೆಗೆ ಉತ್ತರಿಸಿದ ಪಿಡಿಒ ಚೆನ್ನಪ್ಪ ನಾಯ್ಕ, ಈವರೆಗೆ 248 ಅರ್ಜಿ ಪಂಚಾಯತ್‌ನಲ್ಲಿದ್ದು, ಪರಿಸರ ಇಲಾಖೆಯಡಿ ಭೂಮಿಯಿದ್ದು ಅದನ್ನು ನಿವೇಶನ ರಹಿತರಿಗೆ ನೀಡಬಹುದು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಪರಿಸರ ಇಲಾಖೆಗೆ 15 ಎಕರೆ ಜಮೀನು ಮೀಸಲಿಟ್ಟಿದ್ದು, ಅದನ್ನು ಬಳಕೆ ಮಾಡಿಲ್ಲ ಈ ಜಮೀನನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸಿ ಗ್ರಾ.ಪಂ.ಗೆ

ಹಸ್ತಾಂತರಿಸಲು ತಹಶೀಲ್ದಾರ್‌ಗೆ ತಿಳಿಸಿ ದ್ದೇನೆ. ಆದರೆ 248 ನಿವೇಶನ ರಹಿತರಲ್ಲಿ ಅತೀ ಕಡು ಬಡವರನ್ನು ಗುರುತಿಸಿ ಪ್ರಥಮ ಆದ್ಯತೆಯಲ್ಲಿ ನಿವೇಶನ ನೀಡಿ ಅದಕ್ಕೆ ಸಂಬಂಧಿಸಿದಂತೆ ಪಂಚಾ

Advertisement

ಯತ್‌ನಲ್ಲಿ ವಾರ್ಡ್‌ವಾರು ಸಭೆ ನಡೆಸಿ ಫಲಾನುಭವಿಗಳನ್ನು ಗುರುತಿಸಿ ಸಭೆಯಲ್ಲಿ ನಿರ್ಣಯ ತೆಗೆದು ಕೊಳ್ಳಿ. ಬಳಿಕ ಪಂಚಾಯತ್‌ನಲ್ಲಿ ನಿವೇಶನ ರಹಿತರ ಮಾಹಿತಿಯನ್ನು ಸಾರ್ವ ಜನಿಕರ ಮಾಹಿತಿಗಾಗಿ ಪ್ರಕಟಿಸಿ, ಇದರಲ್ಲಿ ಅರ್ಹರನ್ನು ಗುರುತಿಸಲು ಸಾಧ್ಯವಾಗುತ್ತದೆ ಎಂದರು.

ಕ್ರಮಕೈಗೊಳ್ಳಿ  :

ಬೇಸಗೆ ಕಾಲದಲ್ಲಿ ನೀರಿನ ಸಮಸ್ಯೆಗೆ ತುರ್ತು ಅನುದಾನ ಬಳಸಿಕೊಂಡು ಹಳೆ ಬೋರ್‌ವೆಲ್‌ಗ‌ಳ ದುರಸ್ತಿ, ಪೈಪ್‌ಲೈನ್‌ ಸಮಸ್ಯೆ ಇರುವಲ್ಲಿ ಜಲ್‌ಜೀವನ್‌ ಮಿಷನ್‌ನಡಿ ಅನುದಾನ ಬಿಡುಗಡೆಗೆ ಅವಕಾಶವಿದ್ದು, ಸಂಬಂಧಪಟ್ಟ ಅಧಿ ಕಾರಿಗಳಿಗೆ ತುರ್ತುಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.

ಗ್ರಾಮವಾಸ್ತವ್ಯದಲ್ಲಿ ರಸ್ತೆ ಅತಿ ಕ್ರಮಣ, ಕಾಲು ದಾರಿ ಅತಿಕ್ರಮಣಕ್ಕೆ ಸಂಬಂಧಿಸಿದ ಅರ್ಜಿಗಳಿಗೆ ಪ್ರತಿ ಕ್ರಿಯಿಸಿ ಸ್ಥಳೀಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಅತಿಕ್ರಮಣ ಆಗಿದ್ದರೆ ಪಿಡಿಒ ಮತ್ತು ಗ್ರಾಮಕರಣಿಕರು ಸ್ಥಳ ತನಿಖೆ ನಡೆಸಿ ಕ್ರಮ ಕೈಗೊಳ್ಳಿ, ಜಿಲ್ಲಾಧಿಕಾರಿ ಗಳಿಗೆ ಅರ್ಜಿ ನೀಡಿದ ಕಾರಣದಿಂದ ಅರ್ಜಿದಾರರ ಪರವಾಗಿ ಸ್ಪಂದನೆ ಬೇಡ, ಅಲ್ಲಿ ನ್ಯಾಯಯುತ ಪರಿಹಾರ ಕೈಗೊಳ್ಳಿ ಎಂದು ಡಿಸಿ ತಿಳಿಸಿದರು.

ಕೊರಗರ ಕಾಲನಿಗೆ ಭೇಟಿ  :

ಕುಕ್ಕುದಕಟ್ಟೆ ಸಹಿತ ಕೊರಗ ಜನಾಂಗದ ಕಾಲನಿಗೆ ಭೇಟಿ ನೀಡಿ ಅವರ ಮೂಲ ಸೌಕರ್ಯ ಅಭಿವೃದ್ಧಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ವಿದ್ಯಾಭ್ಯಾಸ ಮೊಟಕುಗೊಳಿಸಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಅವ ರಿಗೆ ಶಿಕ್ಷಣ ಮುಂದುವರಿಸಲು ಕ್ರಮ ಕೈಗೊಳ್ಳಲು ಸೂಚಿಸಿದರು. ಬಾಬು ಕೊರಗ, ಗುರುವ, ಬಾಗಿ ಅವರ ಮನೆಗೆ ಭೇಟಿ ನೀಡಿ ಮಾತನಾಡಿದರು.

ನಾರ್ಯ ಪರಿಶಿಷ್ಟ ಕಾಲನಿಗೆ ಭೇಟಿ ನೀಡಿ ಹಿರಿಯರ ಹೆರಸಲ್ಲಿರುವ ಜಮೀನನ್ನು ಈಗಿರುವ ಹಕ್ಕುದಾರರ ಹೆಸರ‌್ಲಲಿ ಮಾಡುವಂತೆ ಅದಾಲತ್‌ ಕರೆದು ವಿಲೇವಾರಿ ಮಾಡಲು ಸೂಚಿಸಿ ದರು. ಅನಂತರ ಮೈದಾನಕ್ಕೆ ಭೇಟಿ ನೀಡಿ ಅಭಿವೃದ್ಧಿಗೆ ಅನುದಾನ ನೀಡುವ ಭರವಸೆ ನೀಡಿದರು.

ರಸ್ತೆ ಸ್ಥಳ ತನಿಖೆ :

ಬಾಳೆಪುಣಿ ಮತ್ತು ಇರಾ ಗ್ರಾ.ಪಂ. ಗಡಿಭಾಗದಲ್ಲಿ ಬರುವ ಇರಾ ಕೈಗಾರಿಕೆ ಸಂಪರ್ಕ ರಸ್ತೆ ದುರವಸ್ಥೆಯಿಂದ  ಜನರು ತೊಂದರೆ ಅನುಭವಿಸುತ್ತಿರವ ವಿಚಾರ ದಲ್ಲಿ ಸ್ಥಳ ತನಿಖೆ ನಡೆಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಉದಯವಾಣಿ ಸುದಿನ ವರದಿಗೆ ಸ್ಪಂದನೆ  :

ಜಿಲ್ಲಾಧಿಕಾರಿಗಳ ಭೇಟಿ ಹಿನ್ನೆಲೆಯಲ್ಲಿ ಸಂಬಂಧಿಸಿದಂತೆ ಉದಯವಾಣಿ ಸುದಿನದ ಶನಿವಾರದ ಸಂಚಿಕೆಯಲ್ಲಿ ಬಾಳೆಪುಣಿ ಗ್ರಾಮದ ಸಮಸ್ಯೆಯ ಬಗ್ಗೆ ವರದಿ ಪ್ರಕಟವಾಗಿತ್ತು. ಈ ವರದಿಯ ಆಧಾರದಲ್ಲಿ ಕೊರಗ ಜನಾಂಗದ ಮೂಲ ಸೌಕರ್ಯ ಅಭಿವೃದ್ಧಿಗೆ, ಮೂಳೂರು ರಸ್ತೆ ದುರವಸ್ಥೆಯ ಸ್ಥಳ ತನಿಖೆ ನಡೆಸಿದ ಜಿಲ್ಲಾಧಿಕಾರಿಗಳು ವಸತಿ ನಿವೇಶನಕ್ಕೆ ಸಂಬಂಧಿಸಿದ ವಿಚಾರದಲ್ಲಿ ತತ್‌ಕ್ಷಣವೇ ಕ್ರಮಕೈಗೊಳ್ಳುವಂತೆ ಆದೇಶ ನೀಡಿದರು.

 

ಚರ್ಚಿತ ಪ್ರಮುಖ ಅಂಶ  :

  • ಎಪಿಎಲ್‌ನಲ್ಲಿದ್ದು, ಬಿಪಿಎಲ್‌ ಕಾರ್ಡ್‌ಗೆ ಅರ್ಹ ರಾಗಿದ್ದರೆ ಅರ್ಜಿ ಸಲ್ಲಿಸಲು ಅವಕಾಶವಿದೆ.
  • ವೃದ್ಧಾಪ್ಯವೇತನ ಸಮರ್ಪಕವಾಗಿ ದೊರೆಯುವಂತೆ ಮಾಡಿ.
  • ಕೋವಿಡ್‌ನಿಂದ ಸಾವಿಗೀಡಾಗಿ ಅವರಿಗೆ ಪರಿಹಾರ ಬರದೇ ಇದ್ದಲ್ಲಿ ಸಾವಿಗೆ ಸಂಬಂಧಪಟ್ಟ ದಾಖಲೆಗಗಳನ್ನು ಸಲ್ಲಿಸಿ.
  • ನಿವೇಶನ ರಹಿತರಾಗಿರುವ ಜೋಗಿ ಸಮುದಾಯದ ಅನೇಕ ಕುಟುಂಬಗಳಿಗೆ ಜಮೀನು ಗುರುತಿಸಲು ಸೂಚನೆ.
Advertisement

Udayavani is now on Telegram. Click here to join our channel and stay updated with the latest news.

Next