Advertisement

ಜಿಲ್ಲಾಧಿಕಾರಿಗಳ‌ ನಡೆ ಹಳ್ಳಿಯ ಕಡೆ: ಕಾಶಾಪುರ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ

07:11 PM Feb 19, 2022 | Team Udayavani |

ಕೊರಟಗೆರೆ : ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಅರಸಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಶಾಪುರ ಗ್ರಾಮದಲ್ಲಿ ಕಂದಾಯ ಇಲಾಖೆ, ಕೊರಟಗೆರೆ ತಾಲ್ಲೂಕು ಆಡಳಿತ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಸಹಯೋಗದೊಂದಿಗೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಒಂದು ದಿನದ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು  ದಂಡಾಧಿಕಾರಿಗಳಾದ ನಾಹೀದಾ ಜಮ್ ಜಮ್ ರ  ನೇತೃತ್ವದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

Advertisement

ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದ ನಂತರ ಮಾತನಾಡಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಎಂಬ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯನ್ನು ಗ್ರಾಮದ  ಎಲ್ಲಾ ರೈತರಿಗೆ ಇಲಾಖೆಯ ಸವಲತ್ತುಗಳನ್ನು ನೇರವಾಗಿ ತಮ್ಮ ಮನೆ ಬಾಗಿಲಿಗೆ ತಲುಪಿಸುವ ಕಾರ್ಯಕ್ರಮ ಇದಾಗಿದ್ದು ಎಲ್ಲರೂ ಸದ್ಬಳಕೆ ಮಾಡಿಕೊಳ್ಳಲು ತಿಳಿಸಿದರು.

ಕಾಶಾಪುರ ಗ್ರಾಮವು ಅರಸಾಪುರ ಗ್ರಾಪಂ ಸೇರಿದ್ದು ,ತಾಲ್ಲೂಕಿನ ಗಡಿಭಾಗದಲ್ಲಿರುವ  ಈ ಗ್ರಾಮದಲ್ಲಿ ತಾಲ್ಲೂಕು ಮಟ್ಟದ ಎಲ್ಲಾ ಇಲಾಖೆಗಳ ಅಧಿಕಾರಿಗಳ ಉಪಸ್ಥಿತಿಯಲ್ಲಿ ಹಲವು ಯೋಜನೆಗಳ ಬಗ್ಗೆ ಮತ್ತು  ಇಲಾಖೆಗಳಿಂದ ದೊರೆಯುವ ಸವಲತ್ತುಗಳನ್ನು  ಹಾಗೂ ಸಾರ್ವಜನಿಕರು, ಬಹುತೇಕ ರೈತರು ತಮ್ಮ ಸಮಸ್ಯೆಗಳನ್ನು ನೇರವಾಗಿ ಅಯಾ ಇಲಾಖೆಯ ಕೌಂಟರ್ ಗಳಲ್ಲಿ ಅರ್ಜಿಗಳನ್ನು ಸ್ವೀಕರಿಸಿ, ತಕ್ಷಣ ಅಧಿಕಾರಿಯ ಗಮನಕ್ಕೆ ತಂದು ಬ ಸ್ಥಳದಲ್ಲಿಯೇ  ರೈತರಿಗೆ ಪರಿಹಾರ ಒದಗಿಸಲಾಯಿತು.

ತೋಟಗಾರಿಕೆ ಇಲಾಖೆಗೆ ಸಂಬಂದಿಸಿದಂತೆ ರೈತ ರವಿಕುಮಾರ್ ಪ್ರಶ್ನಿಸಿ ರೈತರಿಗೆ ತೋಟಗಾರಿಕೆ ಬೆಳೆಗಳ ಬಗ್ಗೆ ಮಾಹಿತಿ ಕೇಳಿದಾಗ ಸಹಾಯಕ‌ ನಿರ್ದೇಶಕಿ ಪುಷ್ಪಲತಾ ಸಮರ್ಪಕ ಉತ್ತರ ನೀಡದೇ ತಡಬಡಾಯಿಸಿದರು. ರೈತರಿಗೆ ತೋಟಗಾರಿಕೆ ಬೆಳೆಗಳ ಬಗ್ಗೆ ಇದುವರೆಗೂ ಯಾವುದೆ ಕಾರ್ಯಗಾರವನ್ನು ಏರ್ಪಡಿಸಿಲ್ಲ.  ಈ ಇಲಾಖೆಗೆ ಬರುವ ಯೋಜನೆಗಳ ಮಾಹಿತಿಯನ್ನು ರೈತರಿಗೆ ತಿಳಿಸಿಲ್ಲ.  ಈ ಭಾಗದ ಗ್ರಾಮಕ್ಕೆ ಒಂದು ಬಾರಿಯು ಅಧಿಕಾರಿಗಳು ಭೇಟಿ ನೀಡಿಲ್ಲ. ತಕ್ಷಣ ತಹಶಿಲ್ದಾರ್  ಮದ್ಯಪ್ರವೇಶಿಸಿ ಈಗಲೇ ರೈತನ ಜಮೀನಿಗೆ ಭೇಟಿ ನೀಡಿ ಪರಿಹಾರ ಸೂಚಿಸುವಂತೆ ಅದಿಕಾರಿಗೆ ತಿಳಿಸಿದರು.

ವಲಯ ಅರಣ್ಯ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶ್ ರವರಿಗೆ ರೈತರು ಪ್ರಶ್ನೆ ಕೇಳಿ ಈ ಭಾಗದಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು  ರೈತರ ಕುರಿ ಮೇಕೆಗಳ ರೊಪ್ಪಕ್ಕೆ ನೇರವಾಗಿ ರಾತ್ರಿ ಹೊತ್ತಿನಲ್ಲಿ ಚಿರತೆಗಳು ದಾಳಿ ಇಡುತ್ತೀವೆ. ರೈತರ ಕುರಿ ಮೇಕೆಗಳನ್ನು ಚಿರತೆ ಕೊಂದು ತಿನ್ನುತ್ತಿದೆ. ಇದಕ್ಕೆ ಅಧಿಕಾರಿ ಉತ್ತರಿಸಿ ಈಗಾಗಲೇ ಚಿರತೆ ಹಿಡಿಯಲು, ಈ ಭಾಗದಲ್ಲಿ ಎರಡು ಭೋನುಗಳನ್ನು ಇಡಲಾಗಿದೆ. ಅದರೆ ಚಾಣಾಕ್ಷ ಚಿರತೆ ಭೋನಿನ ಪಕ್ಕದಲ್ಲಿ ಹಾದುಹೋಗಿರುವ ಚಿತ್ರ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ ಅದರೆ ಚಿರತೆ ಮಾತ್ರ ಭೋನಿನೋಳಗೆ ಬೀಳುತ್ತಿಲ್ಲ ಎಂದು ಉತ್ತರಿಸಿದರು.

Advertisement

ಈ ಕಾರ್ಯಕ್ರಮದಲ್ಲಿ ಅರಸಾಪುರ ಗ್ರಾಪಂ ಅದ್ಯಕ್ಷ ರಾಮಕೃಷ್ಣ, ಪಿಡಿಓ ಸುರೇಶ್, ತಾಲ್ಲೂಕು ಮಟ್ಟದ ಅಧಿಕಾರಿಗಳಾದ ಸಿಡಿಪಿಒ ಅಂಬಿಕಾ, ನಾಗರಾಜು ಹೆಚ್, ಬೆಸ್ಕಾಂ ಇಂಜಿನಿಯರ್ ಮಲ್ಲಣ್ಣ, ಪೋಲಿಸ್ ಇಲಾಖೆಯ ಮುಖ್ಯ ಪೇದೆ ಬಾಲನಾಯ್ಕ್, ಗ್ರಾಮಸ್ಥರು, ಹಾಗೂ ರೈತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next