Advertisement
ಕಾಟಾಚಾರಕ್ಕಷ್ಟೇ ಸೀಮಿತಗೊಂಡಿದ್ದ ಕಂಟೈನ್‌ಮೆಂಟ್ ವ್ಯಾಪ್ತಿಜಿಲ್ಲೆಯಲ್ಲಿ ಪಾಸಿಟಿವ್ ರೋಗಲಕ್ಷಣ ಕಂಡುಬರುವ ರೋಗಿಯ ಮನೆ, ಅಂಗಡಿ, ಅಪಾರ್ಟ್‌ಮೆಂಟ್ ಸಹಿತ ಆ ಪ್ರದೇಶವನ್ನೆಲ್ಲ ಕಂಟೈನ್‌ಮೆಂಟ್ ಝೋನ್ ಮಾಡಬೇಕೆಂಬ ನಿಯಮವಿದೆ. ಆದರೆ ಅಧಿಕಾರಿಗಳು ಇಷ್ಟರವರೆಗೆ ಮನೆಗಳನ್ನಷ್ಟೇ ಸೀಲ್‌ಡೌನ್ ಮಾಡಿ ಸುಮ್ಮನಾಗುತ್ತಿದ್ದರು. ಕಂಟೈನ್‌ಮೆಂಟ್ ಝೋನ್ ಕುರಿತು ಸ್ಥಳೀಯರು ಸಹಿತ ಸಾರ್ವಜನಿಕರಿಗೆ ಮಾಹಿತಿಯನ್ನೇ ನೀಡುತ್ತಿರಲಿಲ್ಲ. ಅಧಿಕಾರಿಗಳಲ್ಲಿಯೂ ನಿಖರ ಮಾಹಿತಿ ಇರುತ್ತಿರಲಿಲ್ಲ. ಈ ಎಲ್ಲ ಅಂಶಗಳು ಕೂಡ ಕೊರೊನಾ ಉಲ್ಬಣಗೊಳ್ಳಲು ಕಾರಣ ಎನ್ನಲಾಗುತ್ತಿದೆ.
ಜಿಲ್ಲೆಯಲ್ಲಿ ಒಟ್ಟು 1,315 ಕಂಟೈನ್‌ಮೆಂಟ್ ವ್ಯಾಪ್ತಿಗಳನ್ನು ಮಾಡಲಾಗಿದೆ. 490 ಪ್ರಸ್ತುತ ಸಕ್ರಿಯವಾಗಿದೆ. ಆದರೆ ಹೆಚ್ಚಿನ ಕಂಟೈನ್‌ಮೆಂಟ್ ಝೋನ್ ಕುರಿತು ತುಂಬಾ ವಿಳಂಬವಾಗಿ ಅಧಿಕೃತ ಸೂಚನೆ ಹೊರ ಬೀಳುತ್ತಿದೆ. ಅದುವರೆಗೂ ಈ ಪ್ರದೇಶದಲ್ಲಿ ಎಂದಿನ ಜನಸಂಚಾರ, ವಹಿವಾಟು ನಡೆಯುತ್ತಿರುತ್ತದೆ. ಈ ಮೂಲಕ ಕೊರೊನಾ ಜನರಿಂದ ಜನರಿಗೆ ಹರಡುತ್ತಲೇ ಇರುತ್ತದೆ. ನಿಯಮ ಉಲ್ಲಂಘಿಸಿದರೆ ಕ್ರಮ
ಹೆಚ್ಚು ಪ್ರಕರಣಗಳು ದೃಢವಾಗುತ್ತಿರುವ ಕಾರಣದಿಂದಾಗಿ ಇನ್ನು ಮಂದೆ ಸೋಂಕಿತ ವ್ಯಕ್ತಿ ಪತ್ತೆಯಾದ ಪ್ರದೇಶವನ್ನೇ ಸೀಲ್‌ಡೌನ್ ಮಾಡಬೇಕು. ನಿಯಂತ್ರಣ ವ್ಯಾಪ್ತಿಯನ್ನು ವಿಸ್ತರಿಸಬೇಕು ಎಂದು ಬಹಳಷ್ಟು ದಿನಗಳಿಂದ ಹೇಳುತ್ತಿದ್ದರೂ ಅದರ ಪಾಲನೆ ಮಾತ್ರ ಜಿಲ್ಲೆಯಲ್ಲಿ ಆಗುತ್ತಿರಲಿಲ್ಲ. ಇನ್ನು ಮುಂದೆ ಕೋವಿಡ್‌ನಿಂದ ಯಾರಾದರೂ ಮೃತಪಟ್ಟರೆ ನಿಯಂತ್ರಿತ ವಲಯ ರಚನೆ ಮಾಡುವ ಅಧಿಕಾರಿಗಳ ಮೇಲೆ ಕ್ರಮ ಜರಗಿಸುವುದಾಗಿ ಜಿಲ್ಲಾಧಿಕಾರಿಗಳು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.
Related Articles
ಇದುವರೆಗೆ ಜಿಲ್ಲೆಯ ಎಲ್ಲ ನಿಯಂತ್ರಿತ ವಲಯಗಳಿಗೆ ಕುಂದಾಪುರ ಉಪವಿಭಾಗಾಧಿಕಾರಿಗಳೇ ಇನ್ಸಿಡೆಂಟ್ ಕಮಾಂಡರ್ ಆಗಿದ್ದರು. ಈಗ ಸರಕಾರ ಮತ್ತೆ ಮೂವರು ಇನ್ಸಿಡೆಂಟ್ ಕಮಾಂಡರ್‌ಗಳನ್ನು ನಿಯೋಜಿಸಲು ಅನುಮತಿ ನೀಡಿದೆ. ಕಂಟೈನ್‌ಮೆಂಟ್ ವ್ಯಾಪ್ತಿ ಹೆಚ್ಚಳಕ್ಕೆ ಕ್ರಮ ತೆಗೆದುಕೊಳ್ಳಲಾಗಿದೆ.
-ಜಿ.ಜಗದೀಶ್, ಜಿಲ್ಲಾಧಿಕಾರಿ
Advertisement