Advertisement

ಜಲ್ಲಿ ಕ್ರಷರ್‌ ಪರಿಶೀಲಿಸಿದ ಜಿಲ್ಲಾಧಿಕಾರಿ ಸತ್ಯಭಾಮ

07:20 PM Feb 03, 2021 | Team Udayavani |

ಮುಳಬಾಗಿಲು: ಕ್ರಷರ್‌ಗಳನ್ನು ನಡೆಸುವವರು ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಮತ್ತು ಸಿಡಿಮದ್ದುಗಳನ್ನು ಸಿಡಿಸಬೇಕಾದರೆ ಇಲಾಖೆ ಅನುಮತಿ ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಸತ್ಯಭಾಮ ಎಚ್ಚರಿಕೆ ನೀಡಿದ್ದಾರೆ.

Advertisement

ತಾಲೂಕಿನ ಆವಣಿ ಹೋಬಳಿ ಹೊಸಕೆರೆ ಮತ್ತು ದೇವರಾಯಸಮುದ್ರ ಸುತ್ತಮುತ್ತಲೂ ನಡೆಸುತ್ತಿರುವ ಜಲ್ಲಿ ಕ್ರಷರ್‌ಗಳಿಗೆ ಭೇಟಿ ನೀಡಿ ಪರವಾನಿಗೆ ಮತ್ತು ಇತರೆ ದಾಖಲೆಗಳನ್ನು ಪರಿಶೀಲಿಸಿ ಮಾತನಾಡಿ, ಇತ್ತೀಚಿಗೆ ಶಿವಮೊಗ್ಗ ಸಮೀಪ ನಡೆದಿರುವ ದುರ್ಘ‌ಟನೆ ಎಲ್ಲರಿಗೂ ಭಯಭೀತಿ ಹುಟ್ಟಿಸುವಂತಾಗಿದೆ. ಅಂತಹ ಘಟನೆಗಳು ತಾಲೂಕಿನಲ್ಲಿ ನಡೆಯದಂತೆ ಮುಂಜಾಗ್ರತೆ ತೆಗೆದುಕೊಳ್ಳಬೇಕೆಂದರು.

ಇದನ್ನೂ ಓದಿ :ಬೇಡಿಕೆ ಈಡೇರಿಕೆಗೆ ಮದ್ಯ ಮಾರಾಟಗಾರರ ಆಗ್ರಹ

ಕ್ರಷರ್‌ಗಳನ್ನು ನಡೆಸುವವರು ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಮತ್ತು ಸಿಡಿ ಮದ್ದುಗಳನ್ನು ಸಿಡಿಸಬೇಕಾದರೆ ಕಡ್ಡಾಯವಾಗಿ ಇಲಾಖೆ ಅನುಮತಿ ಪಡೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಅಕ್ರಮವಾಗಿ ಸಿಡಿ ಮದ್ದುಗಳನ್ನು ಸಿಡಿಸಿದರೆ ಅಕ್ಷಮ್ಯ ಅಪರಾಧ. ತಾಲೂಕಿನಲ್ಲಿ ಯಾರಾದರೂ ಅಕ್ರಮ ಗಣಿಗಾರಿಕೆ ನಡೆಸಿದರೆ ಕಠಿಣ ಕಾನೂನು ಕ್ರಮಗಳನ್ನು ತೆಗೆದು ಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.  ತಾಲೂಕಿನಲ್ಲಿ ನಡೆಯುತ್ತಿರುವ ಜಲ್ಲಿ ಕ್ರಷರ್‌ ಗಳೆಷ್ಟು ಎಂಬುದರ ಕುರಿತು ಸಮಗ್ರ ವರದಿ ಸಲ್ಲಿಸುವಂತೆ ತಹಶೀಲ್ದಾರ್‌ ರಾಜಶೇಖರ್‌ಗೆ ಸೂಚಿಸಿದರು. ಆವಣಿ ಹೋಬಳಿ ರಾಜಸ್ವ ನಿರೀಕ್ಷಕ ಸುಬ್ರಹ್ಮಣ್ಯಂ, ಸರ್ವೇ ಇಲಾಖೆ ಶಿವಕುಮಾರ್‌, ಗ್ರಾಮ ಲೆಕ್ಕಿಗರಾದ ಕಿರಣ್‌, ಮಾನಸ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next