Advertisement

ಗ್ರಾಮಸ್ಥರ ಸಮಸ್ಯೆಗಳಿಗೆ ಡೀಸಿ ಸ್ಪಂದನೆ

03:12 PM Feb 21, 2021 | Team Udayavani |

ಕೆ.ಆರ್‌.ಪೇಟೆ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಜಿಲ್ಲಾಧಿಕಾರಿಗಳ ನಡಿಗೆ ಹಳ್ಳಿಯ ಕಡೆಗೆ ಕಾರ್ಯಕ್ರಮ ಹಿನ್ನೆಲೆ ತಾಲೂಕಿನ ಶೀಳನೆರೆ ಗ್ರಾಮದಲ್ಲಿ ಡೀಸಿ ಎಸ್‌.ಅಶ್ವಥಿ ಗ್ರಾಮ ವಾಸ್ತವ್ಯ ಮಾಡುವ ಮೂಲಕ ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸಿದರು. ಶುಕ್ರವಾರ ಸಂಜೆಯೇ ಗ್ರಾಮಕ್ಕೆ ಆಗಮಿಸಿದ ಡೀಸಿ ಗ್ರಾಮಸ್ಥರೊಂದಿಗೆ ಸಂವಾದ ನಡೆಸಿದರು. ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ನಂತರ ರಾತ್ರಿ ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಹೂಡಿದರು.

Advertisement

ಮಕ್ಕಳ ಶಿಕ್ಷಣಕ್ಕೆ ಆದತ್ಯೆ ನೀಡಿ: ಅರಳಿಕಟ್ಟೆ ಸಂವಾದದಲ್ಲಿ ಜಿಲ್ಲಾಧಿಕಾರಿ ಅಶ್ವಥಿ, ಹೆಣ್ಣು ಮಕ್ಕಳು ಶಿಕ್ಷಣ, ಗುಡಿ ಕೈಗಾರಿಕೆಗೆ ಒತ್ತು ನೀಡಬೇಕು. ಶಿಕ್ಷಣವು ಮಹಿಳೆಯರ ಸಂಸ್ಕಾರಕ್ಕೆ ಹಾಗೂ ಆರ್ಥಿಕ ಬಲವರ್ಧನೆಗೆ ಪ್ರೇರಣಾ ಶಕ್ತಿಯಾಗಿ ಕೆಲಸ ಮಾಡುವುದರಿಂದ ಹೆಣ್ಣು ಗಂಡು ಎಂಬ ಭೇದಭಾವ ಮಾಡದೇ ಕಡ್ಡಾಯವಾಗಿ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ ಭವಿಷ್ಯದ ನಾಗರಿಕರನ್ನು ಸಜ್ಜುಗೊಳಿಸಬೇಕು ಎಂದು ತಿಳಿಸಿದರು.

ಕಡ್ಡಾಯ ಶೌಚಾಲಯ ಬಳಸಿ: ಕಡ್ಡಾಯವಾಗಿ ಶೌಚಾಲಯಗಳನ್ನು ಬಳಸಬೇಕು. ಕುಡಿಯಲು ಶುದ್ಧ ನೀರನ್ನೇ ಬಳಸಿ, ಅಮೂಲ್ಯವಾದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಗ್ರಾಮೀಣ ಪ್ರದೇಶದ ಜನರು ವೈಯಕ್ತಿಕ ಸ್ವಚ್ಛತೆ, ಗ್ರಾಮ ನೈರ್ಮಲ್ಯಕ್ಕೆ ಒತ್ತು ನೀಡಬೇಕು ಎಂದು ಹೇಳಿದರು.

ಪ್ಲಾಸ್ಟಿಕ್‌ ಬಳಸಬೇಡಿ: ಪರಿಸರ ಹಾಳು ಮಾಡುವ ಪ್ಲಾಸ್ಟಿಕ್‌ ಸೇರಿದಂತೆ ಯಾವುದೇ ಉತ್ಪನ್ನ ಬಳಸಬಾರದು. ಹಣ್ಣು ತರಕಾರಿ ತರಲುಮಾರುಕಟ್ಟೆಗೆ ಹೋಗಲು ಕಡ್ಡಾಯವಾಗಿ ಬಟ್ಟೆ ಬ್ಯಾಗು ಬಳಸಬೇಕು. ಆರೋಗ್ಯಕ್ಕೆ ಧಕ್ಕೆ ಉಂಟುಮಾಡುವ ತಿಪ್ಪೇ ಗುಂಡಿಗಳನ್ನು ಊರಿನಿಂದ ಹೊರಕ್ಕೆ ಸ್ಥಳಾಂತರಿಸಬೇಕು ಎಂದು ತಿಳಿಸಿದರು.

ಸ್ಥಳದಲ್ಲಿಯೇ ಪರಿಹಾರ: ಶೀಳನೆರೆ ಗ್ರಾಮಕ್ಕೆ ಗ್ರಾಮ ವಾಸ್ತವ್ಯ ಮಾಡಿ ಸಾಮಾನ್ಯರ ಕುಂದು ಕೊರತೆ ಆಲಿಸಿ, ಸ್ಥಳದಲ್ಲಿಯೇ ಪರಿಹಾರ ಕಂಡು ಹಿಡಿಯಲು ಪಾಂಡವಪುರ ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ, ತಹಶೀಲ್ದಾರ್‌ ಎಂ.ಶಿವಮೂರ್ತಿ ಅವರಿಗೆ ಸೂಚಿಸಿದರು.

Advertisement

ಸಚಿವರ ಸೂಚನೆ ಮೇರೆಗೆ ಆಯ್ಕೆ: ಪಾಂಡವಪುರ ಉಪವಿಭಾಧಿಕಾರಿ ಶಿವಾನಂದ ಮೂರ್ತಿ ಮಾತನಾಡಿ, ಶೀಳನೆರೆ ಗ್ರಾಮದಲ್ಲಿ ಡೀಸಿ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಸಚಿವ ಕೆ.ಸಿ.ನಾರಾಯಣಗೌಡರ ವಿಶೇಷ ಆಸಕ್ತಿಯ ಮೇರೆಗೆ ಆಯ್ಕೆ ಮಾಡಲಾಗಿದೆ. ತಾಲೂಕು, ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡವು ನಿಮ್ಮ ಗ್ರಾಮದಲ್ಲಿದ್ದು, ಗ್ರಾಮದಸಮಸ್ಯೆಗಳ ನಿವಾರಣೆಗೆ ಪ್ರಾಮಾಣಿಕವಾಗಿ ಕೆಲಸಮಾಡಲಿದೆ ಎಂದು ಹೇಳಿದರು.

ಗ್ರಾಪಂ ಅಧ್ಯಕ್ಷೆ ಗಾಯಿತ್ರಿ ಸಿದ್ದೇಶ್‌, ಜಿಪಂ ಮಾಜಿ ಉಪಾಧ್ಯಕ್ಷ ಎಸ್‌.ಅಂಬರೀಷ್‌, ಗ್ರಾಪಂಸದಸ್ಯರಾದ ಶೀಳನೆರೆ ಸಿದ್ದೇಶ್‌, ಎಸ್‌. ಕೆ.ಪ್ರಕಾಶ್‌, ಪಿಎಲ್‌ಡಿ ಬ್ಯಾಂಕ್‌ ಮಾಜಿ ಅಧ್ಯಕ್ಷ ರಮೇಶ್‌, ಗ್ರಾಪಂ ಉಪಾಧ್ಯಕ್ಷ ಅವಿನಾಶ್‌, ಸದಸ್ಯೆ ಸವಿತಾ, ಯುವರಾಜ್‌, ಪುನೀತ್‌, ಉಪತಹಶೀಲ್ದಾರ್‌ ಲಕ್ಷ್ಮೀಕಾಂತ್‌, ರಾಜಸ್ವ ನಿರೀಕ್ಷಕ ನರೇಂದ್ರ, ಚಂದ್ರಕಲಾ, ರಾಜಮೂರ್ತಿ,ರಾಮಚಂದ್ರ, ಪಿಡಿಒ ನಿಂಗೇಗೌಡ, ಪೂನಾಶಂಕರ್‌ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next