Advertisement

ಬಹು ವರ್ಷಗಳ ಬೇಡಿಕೆಯಾದ ಕ್ರೀಡಾಂಗಣಕ್ಕೆ ಜಾಗ ಮಂಜೂರಾತಿಗೆ ಆದೇಶಿಸಿದ ಜಿಲ್ಲಾದಿಕಾರಿ

06:43 PM Mar 23, 2022 | Team Udayavani |

ಗುಡಿಬಂಡೆ: ತಾಲೂಕಿನ ಕ್ರೀಡಾಪಟುಗಳ ಬಹು ವರ್ಷಗಳ ಬೇಡಿಕೆಯಾದ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣಕ್ಕೆ ಸೂಕ್ತ ಜಾಗಕ್ಕಾಗಿ ಜಿಲ್ಲಾಧಿಕಾರಿ ಆರ್.ಲತಾ ಅಮಾನಿಬೈರಸಾಗರ ಗ್ರಾಮದ ಸರ್ವೆ ನಂ. 3 ರಲ್ಲಿ 6-00 ಎಕರೆ ಜಮೀನು ಮಂಜೂರು ಮಾಡಲು ಅಧೇಶ ಹೊರಡಿಸಿದ್ದಾರೆ.

Advertisement

ಕ್ರೀಡಾಂಗಣಾಕ್ಕಾಗಿ ಜಾಗ ಗುರುತು: ಸುಮಾರು ವರ್ಷಗಳ ಹಿಂದೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಂಗಳೂರು ರವರು ಪತ್ರ ಮುಖೇನ ಜಿಲ್ಲಾಧಿಕಾರಿಗಳಿಗೆ ಮತ್ತು ಗುಡಿಬಂಡೆ ತಹಶೀಲ್ದಾರ್ ರವರಿಗೆ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣಕ್ಕಾಗಿ ಸೂಕ್ತ ಜಾಗ ಗುರುತಿಸಿ ಮಂಜೂರು ಮಾಡುವಂತೆ ಆದೇಶ ಪತ್ರ ನೀಡಿರುತ್ತಾರೆ, ಹಾಗೂ ಜಿಲ್ಲಾಧಿಕಾರಿಗಳು ಸಹ ತಹಶೀಲ್ದಾರ್‌ಗೆ ಜಾಗ ಗುರುತಿಸಿ ಮಂಜೂರಾತಿ ಆದೇಶಕ್ಕಾಗಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿರುತ್ತಾರೆ, ಅದರಂತೆ ಕಳೆದ ವರ್ಷ 2020ನೇ ಸೆ.22 ರಂದು ಜಿಲ್ಲಾ ಕ್ರೀಡಾ ಇಲಾಖೆಯ ನಿರ್ದೆಶಕಿ ಪಟ್ಟಣದ ಹತ್ತಿರ ಇರುವ ಅಮಾನಿಬೈರಸಾಗರ ಗ್ರಾಮದ ಸ.ನಂ. 3 ರ ಸರ್ಕಾರಿ ಜಮೀನಿಗೆ ಬೇಟಿ ನೀಡಿ, ಜಾಗದಲ್ಲಿ ಕ್ರೀಡಾಂಗಣ ನಿರ್ಮಿಸಲು ಒಪ್ಪಿಗೆ ಸೂಚಿಸಿ ಹೋಗಿದ್ದರು.

ಉದಯವಾಣಿ ವರದಿ: ಇದರ ಬೆನ್ನೆಲ್ಲೆ ಈ ವಿಚಾರವಾಗಿ ದಿನಾಂಕ: 29-09-2021 ರಂದು ’ಕ್ರೀಡಾಂಗಣಕ್ಕೆ ಜಾಗ ಗುರುತಿಸಿದ್ರೂ ಮಂಜೂರು ಮಾಡಿಲ್ಲ’ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಕಟಿಸಿತ್ತು. ಈ ವಿಚಾರವಾಗಿ ಎಚ್ಚೆತ್ತುಕೊಂಡ ಅಬಕಾರಿ ಇಲಾಖೆ ಅಧಿಕಾರಿಗಳು ಸಹ ಸ್ಥಳಕ್ಕೆ ಬೇಟಿ ನೀಡಿದ್ದರು, ತದ ನಂತರ ಅಬಕಾರಿ ಇಲಾಖೆಯ ಹಿಂಬರಹದ ನಂತರ ಜಿಲ್ಲಾಧಿಕಾರಿಗಳು ಕೆಲವು ಷರತ್ತುಗಳನ್ನು ವಿಧಿಸಿ ತಾಲೂಕು ಆಡಳಿತಕ್ಕೆ ಅತಿ ಜರೂರಾಗಿ ಜಾಗ ಮಂಜೂರು ಮಾಡಿ ಕ್ರೀಡಾ ಇಲಾಖೆಗೆ ವರ್ಗಾವಣೆ ಮಾಡುವಂತೆ ಆದೇಶ ಮಾಡಿದ್ದಾರೆ.

15 ದಿನದಲ್ಲಿ ಹಸ್ತಾಂತರ: ಕ್ರೀಡಾಂಗಣಕ್ಕಾಗಿ ಜಾಗ ಮಂಜುರು ಮಾಡಿರುವ ಅಮಾನಿ ಬೈರಸಾಗರ ಗ್ರಾಮದ ಸರ್ವೆ ನಂ. 3 ರಲ್ಲಿ 6-00 ಎಕರೆ ಜಮೀನು ಸ್ವತ್ತನ್ನು 15 ದಿನಗಳ ಒಳಗಾಗಿ ಅಳತೆ ಮಾಡಿಸಿ, ಚೆಕ್ಕುಬಂದಿ ಗುರ್ತಿಸಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಇಲಾಖೆ, ಚಿಕ್ಕಬಳ್ಳಾಪುರ ರವರಿಗೆ 15 ದಿನಗಳ ಒಳಗಾಗಿ ಹಸ್ತಾಂತರಿಸಲು ಜಿಲ್ಲಾದಿಕಾರಿಗಳು ಆಧೇಶ ಮಾಡಿದ್ದಾರೆ.

ಎಂಟು ವರ್ಷಗಳಿಂದ ಪ್ರತಿಭಟನೆ: ಕ್ರೀಡಾಂಗಣ ವಿಲ್ಲದೆ ಅನೇಕ ಪ್ರತಿಭೆಗಳು ಕ್ರೀಡೆಗಳಲ್ಲಿ ಮೂಲೆಗುಂಪಾಗಿದ್ದು, ಇದನ್ನು ಮನಗೊಂಡ ತಾಲೂಕಿನ ಪ್ರತ್ಯೇಕ ವಿದಾನಸಭಾ ಕ್ಷೇತ್ರ ಹೋರಾಟ ಸಮಿತಿಯ ಸದಸ್ಯರು ಬೆಂಬಿಡದೇ 2014 ರಿಂದಲೂ ಕ್ರೀಡಾಂಗಣಕ್ಕಾಗಿ ಒತ್ತಾಯಿಸಿ ಶಾಸಕರಿಗೆ, ಲೋಕಸಭಾ ಸದಸ್ಯರಿಗೆ, ಜಿಲ್ಲಾಧಿಕಾರಿಗಳಿಗೆ, ತಹಶೀಲ್ದಾರ್‌ರಿಗೆ, ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿಕೊಂಡೇ ಬರುತ್ತಿದ್ದರು, ತಾಲೂಕಿನ ಕ್ರೀಡಾಭಿಮಾನಿಗಳ ಕೋರಿಕೆಯಂತೆ ಜಿಲ್ಲಾಧಿಕಾರಿ ಆರ್.ಲತಾ ಆದೇಶಿಸಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next