Advertisement

ಬ್ಯಾಡಗಿ-ಶಿಗ್ಗಾವಿ ಪುರಸಭೆ ಚುನಾವಣೆಗೆ ಡಿಸಿ ಅಧಿಸೂಚನೆ

03:47 PM May 10, 2019 | Team Udayavani |

ಹಾವೇರಿ: ಜಿಲ್ಲೆಯ ಬ್ಯಾಡಗಿ ಹಾಗೂ ಶಿಗ್ಗಾವಿ ನಗರ ಸ್ಥಳೀಯ ಸಂಸ್ಥೆ ಚುನಾವಣೆಗೆ ಗುರುವಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೃಷ್ಣ ಭಾಜಪೇಯಿ ಅಧಿಸೂಚನೆ ಹೊರಡಿಸಿದ್ದಾರೆ.

Advertisement

ಮೇ 16 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ, ಮೇ 17 ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಮೇ 20ರ ನಾಮಪತ್ರ ಹಿಂಪಡೆಯಲು ಕೊನೆಯ ದಿನ. ಮೇ 29ರ ಬೆಳಗ್ಗೆ 7 ರಿಂದ ಸಂಜೆ 5ರ ವರೆಗೆ ಮತದಾನ ನಡೆಯಲಿದೆ. ಮರು ಮತದಾನ ಅವಶ್ಯವಿದ್ದಲ್ಲಿ ಮೇ 30ರಂದು ನಡೆಸಲಾಗುವುದು ಹಾಗೂ ಮೇ 31 ರಂದು ಬೆಳಗ್ಗೆ 8 ಗಂಟೆಯಿಂದ ಆಯಾ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ.

ಶಿಗ್ಗಾವಿ ಪುರಸಭೆ ಮೀಸಲಾತಿ ವಿವರ:

ಒಂದನೇ ವಾರ್ಡ್‌-ಹಿಂದುಳಿದ ವರ್ಗ (ಎ) (ಮಹಿಳೆ), ಎರಡನೇ ವಾರ್ಡ್‌ -ಹಿಂದುಳಿದ ವರ್ಗ (ಎ) (ಮಹಿಳೆ), ಮೂರನೇ ವಾರ್ಡ್‌-ಸಾಮಾನ್ಯ(ಮಹಿಳೆ), ನಾಲ್ಕನೇ ವಾರ್ಡ್‌-ಸಾಮಾನ್ಯ, ಐದನೇ ವಾರ್ಡ್‌-ಹಿಂದುಳಿದ ವರ್ಗ (ಎ) (ಮಹಿಳೆ), ಆರನೇ ವಾರ್ಡ್‌-ಸಾಮಾನ್ಯ ಮಹಿಳೆ, ಏಳನೇ ವಾರ್ಡ್‌- ಹಿಂದುಳಿದ ವರ್ಗ(ಬ), ಎಂಟನೇ ವಾರ್ಡ್‌-ಸಾಮಾನ್ಯ, ಒಂಭತ್ತನೇ ವಾರ್ಡ್‌-ಸಾಮಾನ್ಯ, ಹತ್ತನೇ ವಾರ್ಡ್‌-ಸಾಮಾನ್ಯ(ಮಹಿಳೆ), ಹನ್ನೊಂದನೇ ವಾರ್ಡ್‌-ಸಾಮಾನ್ಯ(ಮಹಿಳೆ), ಹನ್ನೆರಡನೇ ವಾರ್ಡ್‌-ಪರಿಶಿಷ್ಟ ಜಾತಿ, ಹದಿಮೂರನೇ ವಾರ್ಡ್‌-ಸಾಮಾನ್ಯ (ಮಹಿಳೆ), ಹದಿನಾಲ್ಕನೇ ವಾರ್ಡ್‌- ಹಿಂದುಳಿದ ವರ್ಗ (ಎ), ಹದಿನೈದನೇ ವಾರ್ಡ್‌ಹಿಂದುಳಿದ ವರ್ಗ (ಎ), ಹದಿನಾರನೇ ವಾರ್ಡ್‌- ಹಿಂದುಳಿದ ವರ್ಗ(ಬ) ಮಹಿಳೆ, ಹದಿನೇಳನೆ ವಾರ್ಡ್‌-ಹಿಂದುಳಿದ ವರ್ಗ (ಎ), ಹದಿನೆಂಟನೇ ವಾರ್ಡ್‌-ಸಾಮಾನ್ಯ, ಹತ್ತೂಂಬತ್ತನೇ ವಾರ್ಡ್‌- ಸಾಮಾನ್ಯ (ಮಹಿಳೆ), ಇಪ್ಪತ್ತನೇ ವಾರ್ಡ್‌-ಪರಿಶಿಷ್ಟ ಜಾತಿ(ಮಹಿಳೆ), ಇಪ್ಪತ್ತೂಂದನೇ ವಾರ್ಡ್‌- ಸಾಮಾನ್ಯ, ಇಪ್ಪತ್ತರಡನೇ ವಾರ್ಡ್‌- ಸಾಮಾನ್ಯ, ಇಪ್ಪತ್ತಮೂರನೇ ವಾರ್ಡ್‌- ಪರಿಶಿಷ್ಟ ಪಂಗಡ ವರ್ಗಕ್ಕೆ ಮೀಸಲಾಗಿದೆ.

ಬ್ಯಾಡಗಿ ಪುರಸಭೆ ಮೀಸಲಾತಿ ವಿವರ:

Advertisement

ಒಂದನೇ ವಾರ್ಡ್‌-ಹಿಂದುಳಿದ ವರ್ಗ (ಎ) (ಮಹಿಳೆ), ಎರಡನೇ ವಾರ್ಡ್‌-ಹಿಂದುಳಿದ ವರ್ಗ(ಬಿ), ಮೂರನೇ ವಾರ್ಡ್‌- ಪರಿಶಿಷ್ಟ ಪಂಗಡ ಮಹಿಳೆ, ನಾಲ್ಕನೇ ವಾರ್ಡ್‌-ಹಿಂದುಳಿದ ವರ್ಗ (ಎ)(ಮಹಿಳೆ), ಐದನೇ ವಾರ್ಡ್‌-ಪರಿಶಿಷ್ಟ ಪಂಗಡ, ಆರನೇ ವಾರ್ಡ್‌-ಸಾಮಾನ್ಯ, ಏಳನೇ ವಾರ್ಡ್‌-ಸಾಮಾನ್ಯ (ಮಹಿಳೆ), ಎಂಟನೇ ವಾರ್ಡ್‌-ಹಿಂದುಳಿದ ವರ್ಗ(ಎ), ಒಂಭತ್ತನೇ ವಾರ್ಡ್‌-ಸಾಮಾನ್ಯ, ಹತ್ತನೇ ವಾರ್ಡ್‌-ಸಾಮಾನ್ಯ(ಮಹಿಳೆ), ಹನ್ನೊಂದನೇ ವಾರ್ಡ್‌-ಸಾಮಾನ್ಯ, ಹನ್ನೆರಡನೇ ವಾರ್ಡ್‌- ಸಾಮಾನ್ಯ, ಹದಿಮೂರನೇ ವಾರ್ಡ್‌-ಪರಿಶಿಷ್ಟ ಜಾತಿ, ಹದಿನಾಲ್ಕನೇ ವಾರ್ಡ್‌-ಸಾಮಾನ್ಯ (ಮಹಿಳೆ), ಹದಿನೈದನೇ ವಾರ್ಡ್‌-ಪರಿಶಿಷ್ಟ ಪಂಗಡ, ಹದಿನಾರನೇ ವಾರ್ಡ್‌-ಸಾಮಾನ್ಯ, ಹದಿನೇಳನೆ ವಾರ್ಡ್‌-ಹಿಂದುಳಿದ ವರ್ಗ(ಎ), ಹದಿನೆಂಟನೇ ವಾರ್ಡ್‌- ಹಿಂದುಳಿದ ವರ್ಗ(ಎ), ಹತ್ತೂಂಬತ್ತನೇ ವಾರ್ಡ್‌-ಪರಿಶಿಷ್ಟ ಜಾತಿ(ಮಹಿಳೆ), ಇಪ್ಪತ್ತನೇ ವಾರ್ಡ್‌- ಸಾಮಾನ್ಯ, ಇಪ್ಪತ್ತೂಂದನೇ ವಾರ್ಡ್‌- ಸಾಮಾನ್ಯ ಮಹಿಳೆ, ಇಪ್ಪತ್ತರಡನೇ ವಾರ್ಡ್‌- ಸಾಮಾನ್ಯ ಮಹಿಳೆ, ಇಪ್ಪತ್ತಮೂರನೇ ವಾರ್ಡ್‌- ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next