Advertisement

ಸಕಾಲ ಸಪ್ತಾಹ ಯಶಸ್ಸಿಗೆ ಅಗತ್ಯ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

03:05 PM Dec 09, 2020 | Suhan S |

ವಿಜಯಪುರ: ಜಿಲ್ಲೆಯಲ್ಲಿ ಡಿ. 14ರಿಂದ 19ರವರೆಗೆ ಸಕಾಲ ಯೋಜನೆ ವ್ಯಾಪ್ತಿಯಲ್ಲಿ ಬರುವ ಎಲ್ಲ ಇಲಾಖೆಗಳಲ್ಲಿ ಸಕಾಲ ಸಪ್ತಾಹ ಆಚರಿಸಲು, ಈ ಸಕಾಲ ಸಪ್ತಾಹವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಸುನೀಲಕುಮಾರ

Advertisement

ಅವರು, ವಿಡಿಯೋ ಸಂವಾದದಲ್ಲಿ ಜಿಲ್ಲೆಯ ಅಧಿಕಾರಿಗಳಿಗೆ ತಾಕೀತು ಮಾಡಿದರು. ಅದರಂತೆ ರಾಜ್ಯದ ನಾಗರಿಕರಿಗೆ ನಿಗದಿತ ಕಾಲಮಿತಿಯಲ್ಲಿ ಸೇವೆಗಳನ್ನುಒದಗಿಸುವ ಉದ್ದೇಶದಿಂದ ಸಕಾಲಯೋಜನೆಯನ್ನು ತರಲಾಗಿದ್ದು, ಇದುವರೆಗೆ 98 ಇಲಾಖೆ, ಸಂಸ್ಥೆಗಳ1025 ಸೇವೆಗಳನ್ನು ಸಕಾಲ ವ್ಯಾಪ್ತಿಯಡಿ ತರಲಾಗಿದ್ದು, ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳಲ್ಲಿ ಸಕಾಲ ಸಪ್ತಾಹ ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಸಕಾಲ ಸಪ್ತಾಹವನ್ನು ಯಶಸ್ವಿಯಾಗಿ ಜಾರಿಗೊಳಿಸಲು ಈ ಕೆಳಕಂಡ ಮಾರ್ಗಸೂಚಿಗಳನ್ನು ಅನುಸರಿಸುವುದು. ಹೊಸದಾಗಿಸ್ವೀಕರಿಸುವ ಅರ್ಜಿಗಳನ್ನು ಸಕಾಲದಡಿಸ್ವೀಕರಿಸಿ ನಿಗದಿತ ಕಾಲಮಿತಿಯಲ್ಲಿವಿಲೇವಾರಿ ಮಾಡುವುದು, ಸಕಾಲದಡಿಸ್ವೀಕರಿಸಿ ಬಾಕಿ ಉಳಿದ ಅರ್ಜಿ ವಿಲೇವಾರಿಮಾಡಬೇಕು ಎಂದು ಸೂಚಿಸಿದರು.

ಅದೇ ರೀತಿ ಸಾರ್ವಜನಿಕರಲ್ಲಿ ಸಕಾಲ ಕುರಿತು ಅರಿವು ಮೂಡಿಸುವುದು, ಸಕಾಲದ ಕುರಿತು ಇತರೆ ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಂಡಲ್ಲಿ ಈ ಕಚೇರಿಗೆ ಮಾಹಿತಿ ಸಲ್ಲಿಸುವುದು, ತಮ್ಮ ಇಲಾಖೆಯ ಹಾಗೂ ತಮ್ಮ ಅಧೀನ ಕಚೇರಿಗಳಲ್ಲಿ ಸಕಾಲ ಸೇವೆಗಳ ವಿವರಗಳನ್ನೊಳಗೊಂಡ ಬ್ಯಾನರ್‌ಗಳನ್ನು ಪ್ರದರ್ಶಿಸುವುದು, ಸಕಾಲದ ಸಪ್ತಾಹದಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸುವುದು ಎಂದು ಅವರು ಸೂಚಿಸಿದರು.

ಸಪ್ತಾಹದ ಪ್ರತಿ ದಿನ ಹಾಗೂ ಅಂತ್ಯದಲ್ಲಿ ವಿಲೇವಾರಿಯಾದ ಅರ್ಜಿಗಳ ಕುರಿತು ಈ ಕಚೇರಿಗೆ ವರದಿ ನೀಡುವುದು. ಸಕಾಲ ಸಪ್ತಾಹಆಚರಣೆ ಬಗ್ಗೆ ಸಕಾಲ ಮಿಷನ್‌ ತಂಡವುಕಚೇರಿಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಲಿದೆ. ತಮ್ಮ ಹಾಗೂ ತಮ್ಮ ಇಲಾಖೆಯ ಅಧೀನ ಕಚೇರಿಗಳ ವ್ಯಾಪ್ತಿಯಲ್ಲಿಕರಪತ್ರಗಳ ಮೂಲಕ ಸಕಾಲ ಸಪ್ತಾಹದ ಬಗ್ಗೆ ಪ್ರಚಾರಮಾಡಿಸುವುದು. ತಮ್ಮ ಅಧೀನ ಕಚೇರಿಗಳಿಗೆ ಭೇಟಿ ನೀಡಿ ಆದ್ಯತೆ ಮೇರೆಗೆ ಶೂನ್ಯ ಸ್ವೀಕೃತಿಪರಿಶೀಲಿಸುವುದು ಸೇರಿದಂತೆಸಕಾಲ ಸೇವೆಗಳ ಪ್ರಗತಿ ಮತ್ತು ತಿರಸ್ಕೃತಅರ್ಜಿಗಳನ್ನು ಪರಿಶೀಲಿಸಿ ಈ ಕಚೇರಿಗೆ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದರು.

Advertisement

ಸಕಾಲ ಸಪ್ತಾಹದ ಆಚರಣೆಗೆ ಸಂಬಂಸಿದ ಮೀಡಿಯಾ ಕ್ಲಿಪಿಂಗ್‌, ಛಾಯಾ ಚಿತ್ರಗಳು ಹಾಗೂ ಸಾರ್ವಜನಿಕರಿಗೆಅರಿವು ಮೂಡಿಸಿದ ಬಗ್ಗೆ ದಾಖಲೆಗಳನ್ನುಈ ಕಚೇರಿಗೆ ಸಲ್ಲಿಸುವುದು. ತಮ್ಮ ಇಲಾಖೆ ಅಧೀನ ಕಚೇರಿಗಳಿಗೆ ಭೇಟಿನೀಡಿ ಪರಿಶೀಲಿಸಲು ತಮ್ಮ ಹಂತದಲ್ಲಿ ತನಿಖಾ ತಂಡವನ್ನು ರಚಿಸುವುದು ಎಂದು ಅವರು ಸೂಚಿಸಿದರು.

ಒಟ್ಟಾರೆಯಾಗಿ ಸಕಾಲ ಸಪ್ತಾಹ ಸಮಯದಲ್ಲಿ ಜಿಲ್ಲೆಯ ಶ್ರೇಯಾಂಕದಲ್ಲಿ ಗರಿಷ್ಠ ಮಟ್ಟ ತಲುಪಲು ಸಹಕಾರಿಯಾಗುವಂತೆ ತಮ್ಮಇಲಾಖೆಯಲ್ಲಿ ಸಕಾಲ ಅರ್ಜಿಗಳನ್ನು ವಿಲೇವಾರಿ ಮಾಡುವ ದೃಷ್ಟಿಯಿಂದಇನ್ನುಳಿದ ಚಟುವಟಿಕೆಗಳನ್ನು ಕೈಗೊಳ್ಳುವುದು. ಸಾರ್ವಜನಿಕ ಅಭಿಪ್ರಾಯ ಸಂಗ್ರಹಣೆಗಾಗಿ ಸಿದ್ಧಪಡಿಸಲಾದ ಪ್ರಶ್ನಾವಳಿಗಳನ್ನು ಹೆಲ್ಪ್ ಡೆಸ್ಕ್ ಸಹಾಯದೊಂದಿಗೆ ಸಾರ್ವಜನಿಕರಿಂದಭರ್ತಿ ಮಾಡಿಸುವುದು. ಭರ್ತಿ ಮಾಡಿದ ಪ್ರಶ್ನಾವಳಿ ಹಾಗೂ ಯಾವುದೇ ಅನುಮಾನಗಳಿದ್ದ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಜಿಲ್ಲಾ ಸಕಾಲ ಸಮಾಲೋಚಕಿ ಗಾಯತ್ರಿ ಚವಾಣ ಮೊ. 9945187690 ಇವರನ್ನು ಸಂಪರ್ಕಿಸಬೇಕು ಹಾಗೂ ನಿತ್ಯವೂ ಆಯಾ ದಿನದ ವರದಿ ಕಳಿಸುವಂತೆ ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next